ಚಿಕ್ಕಮಗಳೂರು ಜಿಲ್ಲೆಗೆ ಹೆಮ್ಮೆಯ ಕ್ಷಣ… 2025-26 ರ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದ ನಮ್ಮ ಚಿಕ್ಕಮಗಳೂರಿನ ಶ್ರೀ ಮಂಜುನಾಥ್ ಬಿ ಹಾಗೂ ಶ್ರೀಮತಿ ಹರ್ಷಿಣಿ ಯವರ ಪುತ್ರಿ ಬೃಂದಾ.

ಚಿಕ್ಕಮಗಳೂರು ಜಿಲ್ಲೆಯ ಕೀರ್ತಿಯನ್ನು ಅತೀ ಎತ್ತರಕ್ಕೆ ಕೊಂಡೊಯ್ದ ಇವರು ಅಪ್ರತಿಮ ಸಾಧನೆಗೈದಿದ್ದಾರೆ. ಅತ್ಯಂತ ಶ್ಲಾಘನೀಯ. ಬೃಂದಾರವರ ಈ ಯಶಸ್ಸು ಜಿಲ್ಲೆಯ ಸಾವಿರಾರು  ವಿದ್ಯಾರ್ಥಿಗಳಿಗೆ ಪೂರ್ತಿಯಾಗಲಿದೆ.

ಇವರು ಚಿಕ್ಕಮಗಳೂರಿನ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾದ  ಸೈಂಟ್ ಮೇರಿ ಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ ನ ವಿದ್ಯಾರ್ಥಿಯಾಗಿದ್ದಾರೆ.