ಜನನಾಯಕರಾಗಿ ಜೀವಿತದುದ್ದಕ್ಕೂ ಜನ ಸೇವೆ ಮಾಡುತ್ತಾ, ಸಮುದಾಯದ ಹಿತವನ್ನೇ ಬಯಸುತ್ತ,
ಊರು ಯಾವುದೇ ಇರಲಿ, ಕೇರಿ ಯಾವುದೇ ಇರಲಿ, ಭಾಷೆ ಯಾವುದೇ ಇರಲಿ, ಜಾತಿ ಯಾವುದೇ ಇರಲಿ,ಲಿಂಗ ಯಾವುದೇ ಇರಲಿ, ಪಕ್ಷಬೇಧವನ್ನು ಮರೆತು ಎಲ್ಲರೊಂದಿಗೆ ಬೆರೆಯುತ್ತಿದ್ದ ನಾಯಕನೆಂದರೆ ಅನಂತಣ್ಣ, ಕಾಂಗ್ರೆಸ್ ಪಕ್ಷ ಸಿದ್ಧಾಂತಕ್ಕೆ ಬದ್ಧವಾಗಿದ್ದು ಯಾವುದೇಬೇರೆ ಪಕ್ಷಕ್ಕೆ ಮಣೆ  ಹಾಕದ ನಿಷ್ಠಾವಂತ ನಾಯಕ, ಪಕ್ಷದಲ್ಲಿ ನಾಯಕತ್ವ ಗುಣಗಳಿಂದಲೇ ರಾಜ್ಯದ ಗಮನ ಸೆಳೆದು  ಅನ್ಯ ರಾಜ್ಯಗಳಿಗೂ ಹೋಗಿ ಪಕ್ಷದ ಸೇವೆ ಮಾಡಿದ  ಜನನಾಯಕ, ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದ್ದ ಇವರು  ಕನ್ನಡ ಭಾಷೆಯ ಬಗ್ಗೆ ಅಗಾದ ಪಾಂಡಿತ್ಯವನ್ನು ಹೊಂದಿದ್ದರು, ಕನ್ನಡ ಪದಗಳ ಜೋಡಣೆ ಮತ್ತು ಅಕ್ಷರಗಳ  ತಿದ್ದುಪಡಿಯಲ್ಲಿ ವಿಶೇಷ ಜ್ಞಾನ ಹೊಂದಿದ್ದರು, ಅಷ್ಟು ಮಾತ್ರವಲ್ಲದೆ ಯಾವುದೇ ಸಮಾರಂಭಗಳು ಇದ್ದರೂ ಅ ಕಾರ್ಯಕ್ರಮದ ರೂಪುರೇಷೆ ತಯಾರಿಸಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ಸು ಗೊಳಿಸುತ್ತಾ ಜನನಾಯಕ, ಯುವಕರನ್ನು ಪ್ರೇರೇಪಿಸುತ್ತ ಯುವಕರ ಬೆಳವಣಿಗೆಗೆ ಸದಾ ಪ್ರೋತ್ಸಾಹ ನೀಡುತ್ತಾ ಅನೇಕ ಯುವಕರಿಗೆ  ಉದ್ಯೋಗವನ್ನು ಕಲ್ಪಿಸಿದ್ದು ಮಾತ್ರವಲ್ಲದೆ, ಯುವ ಸಮುದಾಯಕ್ಕೆ  ಮಾರ್ಗದರ್ಶಕರಾಗಿದ್ದಂತ ಮಾರ್ಗದಾತ, ನಗುಮುಖದ ಒಡೆಯನಾಗಿ ಎಲ್ಲರೊಂದಿಗೆ ಬೆರೆಯುತ್ತಿದ್ದ ಸಂಘಜೀವಿ ಇಂದು  ಅಗಲಿರುವುದು ತುಂಬಾ ದುಃಖದ ಸಂಗತಿ……………
😭😭😭😭😭😭😭😭😭

ನಿಮ್ಮ ವಿದ್ಯಾರ್ಥಿ ಡಾ. ಹರೀಶ್ ನಲ್ಕೆ