🔴 ಭೀಮಾ ಕೋರೆಂಗಾವ್ ಆಚರಣೆ ಸಂಘ (ರಿ.)ಮೂಡಿಗೆರೆ,ಹಾಗೂ ಸಮಾನ ಮನಸ್ಕರ ಯುವ ಒಕ್ಕೂಟ ಇವರ ಆಶ್ರಯದಲ್ಲಿ  ದಿನಾಂಕ 24.04.2026  ನೇ ಶುಕ್ರವಾರ ಸಂಜೆ 7 ಗಂಟೆಗೆ ಅಡ್ಯಂತಾಯ ರಂಗಮಂದಿರದಲ್ಲಿ ನಡೆಯುತ್ತಿರುವ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್  ಅವರ 135ನೇ ಜನುಮದಿನದ ಅಂಗವಾಗಿ
ಕನ್ನಡ ಚಲನಚಿತ್ರ ನಟರಾದ ದುನಿಯಾ ವಿಜಯ್ ಅಭಿನಯದ ಸಾಮಾಜಿಕ ನ್ಯಾಯ,ಸಮಾನತೆ ಹಾಗೂ ಭೂಮಿಗಾಗಿ ಕಾರ್ಮಿಕರ ನಡುವಿನ ಸಂಘಟಿತ ಹೋರಾಟದ ಕಥಾಹಂದರವಿರುವ “ಲ್ಯಾಂಡ್ ಲಾರ್ಡ್“(Land Lord) ಚಲನಚಿತ್ರವನ್ನು ಬೃಹತ್ LED ಪರದೆಯ ಮೂಲಕ ಪ್ರದರ್ಶಿಸುತ್ತಿದ್ದೇವೆ.
ಈ ಕಾರ್ಯಕ್ರಮಕ್ಕೆ ಮೂಡಿಗೆರೆಯ ಎಲ್ಲಾ ನಾಗರೀಕ ಬಂಧುಗಳು ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ. ಎಂದು ಸಂಸ್ಥೆ ಯ ಪದಾಧಿಕಾರಿಗಳು ತಿಳಿಸಿರುತ್ತಾರೆ.