ಮೂಡಿಗೆರೆ: ಚಿಕ್ಕಮಗಳೂರು ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಮೂಡಿಗೆರೆ ತಾಲೂಕಿನ ಮುತ್ತಿಗೆಪುರ ಶಾಲಾ ಕ್ರೀಡಾಂಗಣದಲ್ಲಿ ನಡೆಸುವ ಹಿನ್ನೆಲೆಯಲ್ಲಿ ಕ್ರೀಡಾಕೂಟದ ದಿನಾಂಕ ನಿಗದಿ ಹಾಗೂ ಕಾರ್ಯಕ್ರಮಕ್ಕೆ ಆತ್ಮೀಯ ಆಹ್ವಾನ ನೀಡುವ ಸಲುವಾಗಿ, ಮೂಡಿಗೆರೆ ತಾಲೂಕಿನ ದೈಹಿಕ ಪರಿವೀಕ್ಷಕರಾದ ಲವೀನಾ ಮೇಡಂ ಹಾಗೂ ಶಾಲೆಯ ಹಿರಿಯ ಶಿಕ್ಷಕರಾದ ಸುರೇಶ್ ಸರ್ ಅವರೊಂದಿಗೆ ಮುತ್ತಿಗೆಪುರ ಶಾಲೆಯ ಎಸ್ಡಿಎಂಸಿ ನಿಯೋಗವು ದಿನಾಂಕ 12.09.2026 ರಂದು ಸನ್ಮಾನ್ಯ ಶಾಸಕರಾದ ಶ್ರೀಮತಿ ನಯನ ಮೋಟಮ್ಮ ಅವರನ್ನು ಭೇಟಿ ಮಾಡಿ ಚರ್ಚಿಸಿತು.
ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟ ಆಯೋಜನೆಗೆ ಸಂಬಂಧಿಸಿದಂತೆ ನಿಯೋಗವು ಶಾಸಕರಿಗೆ ವಿವರಗಳನ್ನು ನೀಡಿತು. ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸನ್ಮಾನ್ಯ ಶಾಸಕರು, ದಿನಾಂಕ 01.10.2026 ರಂದು ಮುತ್ತಿಗೆಪುರ ಶಾಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟ ನಡೆಸಲು ಅನುಮೋದನೆ ನೀಡಿರುತ್ತಾರೆ.
ಅಲ್ಲದೆ, ಕಾರ್ಯಕ್ರಮಕ್ಕೆ ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಶ್ರೀ ಮಧು ಬಂಗಾರಪ್ಪ ಅವರನ್ನು ಕರೆತರುವ ಭರವಸೆಯನ್ನು ಸಹ ಶಾಸಕರು ನೀಡಿದ್ದಾರೆ.
ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಮುತ್ತಿಗೆಪುರದಲ್ಲಿ ಆಯೋಜಿಸಲು ಸಹಕಾರ ಮತ್ತು ಪ್ರೋತ್ಸಾಹ ನೀಡಿದ ಸನ್ಮಾನ್ಯ ಶಾಸಕರಾದ ಶ್ರೀಮತಿ ನಯನ ಮೋಟಮ್ಮ ಅವರಿಗೆ ಮುತ್ತಿಗೆಪುರ ಶಾಲೆಯ ಆಡಳಿತ ಮಂಡಳಿ, ಎಸ್ಡಿಎಂಸಿ, ಶಿಕ್ಷಕ ವೃಂದ ಹಾಗೂ ಶಾಲೆಯ ಸರ್ವರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇವೆ.
– ಮುತ್ತಿಗೆಪುರ ಶಾಲೆಯ ಎಸ್ಡಿಎಂಸಿ ಹಾಗೂ ಶಿಕ್ಷಕ ವೃಂದ.
ಅಕ್ಟೋಬರ್ 1ರಂದು ಚಿಕ್ಕಮಗಳೂರು ಜಿಲ್ಲಾ ಮಟ್ಟದ ಕ್ರೀಡಾಕೂಟ..
GNE UPDATES
ಇತ್ತೀಚಿನ ಸುದ್ದಿ