ಮೂಡಿಗೆರೆ, ನವೆಂಬರ್ 27:
ಮೂಡಿಗೆರೆ ತಾಲ್ಲೂಕಿನ ತುದಿಯಲ ಹೊಸ ಸೇತುವೆ ಸಮೀಪದ ಗದ್ದೆಯಲ್ಲಿ ಕಾಡಾನೆಗಳ ಗುಂಪು ಕಾಣಿಸಿಕೊಂಡಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚರಿಸುತ್ತಿರುವುದಾಗಿ ಜಿಲ್ಲಾ ಆನೆ ಕಾರ್ಯಪಡೆ ಚಿಕ್ಕಮಗಳೂರು ಹಾಗೂ ಅರಣ್ಯ ಇಲಾಖೆ ಮೂಡಿಗೆರೆ ಪ್ರಕಟಣೆ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರು, ಗ್ರಾಮಸ್ಥರು, ರೈತರು ಹಾಗೂ ವಾಹನ ಸವಾರರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.
ವಿಶೇಷವಾಗಿ ಬಾರದಹಳ್ಳಿ, ಕಾರ್ ಬೈಲು, ತುದಿಯಲ, ಮಾಕೋನಹಳ್ಳಿ, ಹೊರಟ್ಟಿ, ಚಂದ್ರಪುರ, ಘಟ್ಟದಹಳ್ಳಿ, ಕೇಲ್ಲೂರು, ದುಂಡುಗ, ಕುನ್ನಹಳ್ಳಿ ಹಾಗೂ ಹಳಸೆ ಗ್ರಾಮಗಳ ಸುತ್ತಮುತ್ತಲಿನ ನಿವಾಸಿಗಳು ಜಾಗರೂಕರಾಗಿರಬೇಕು. ಕಾಡಾನೆಗಳು ಸಂಚರಿಸುವ ಸಾಧ್ಯತೆ ಇರುವುದರಿಂದ ರಾತ್ರಿ ವೇಳೆ ಅನಗತ್ಯ ಓಡಾಟ ಹಾಗೂ ನಿರ್ಲಕ್ಷ್ಯದಿಂದ ಸಂಚರಿಸುವುದನ್ನು ತಪ್ಪಿಸಬೇಕು ಎಂದು ಸೂಚಿಸಲಾಗಿದೆ.
ತಮ್ಮ ಗ್ರಾಮಗಳ ಸುತ್ತಮುತ್ತ ಕಾಡಾನೆಗಳ ಸಂಚಾರ ಕಂಡುಬಂದಲ್ಲಿ ತಕ್ಷಣವೇ ಜಿಲ್ಲಾ ಆನೆ ಕಾರ್ಯಪಡೆ ಚಿಕ್ಕಮಗಳೂರು ಇವರ ಸಹಾಯವಾಣಿ ಸಂಖ್ಯೆ 7204004261 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.
ಪ್ರಕಟಣೆ: ಜಿಲ್ಲಾ ಆನೆ ಕಾರ್ಯಪಡೆ, ಚಿಕ್ಕಮಗಳೂರು ಹಾಗೂ ಅರಣ್ಯ ಇಲಾಖೆ, ಮೂಡಿಗೆರೆ.
ದಿನಾಂಕ: 27-11-2026
ಸಮಯ: ರಾತ್ರಿ 08:36.
ತುದಿಯಲ ಹೊಸ ಸೇತುವೆ ಬಳಿ ಗದ್ದೆಯಲ್ಲಿ ಕಾಡಾನೆಗಳ ಗುಂಪು ಪ್ರತ್ಯಕ್ಷ: ಗ್ರಾಮಸ್ಥರಿಗೆ ಎಚ್ಚರಿಕೆ!
GNE UPDATES
ಇತ್ತೀಚಿನ ಸುದ್ದಿ