ದಿನಾಂಕ 17/07/2026ರ ಶುಕ್ರವಾರದಂದು ಚಿಕ್ಕಮಗಳೂರು ಜಿಲ್ಲೆಯ, ಚಿಕ್ಕಮಗಳೂರಿನ ಅರಳಗುಪ್ಪೆ ಡಾ ಮಲ್ಲೇಗೌಡ ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ 5ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಿಲ್ಲಾ ಸರ್ಜನ್ ಡಾ.ಚಂದ್ರಶೇಖರ್ ಸಾಲಿಮಠ್ ಅವರು ರಕ್ತದಾನ ಮಾಡುವುದರಿಂದ ಆಗುವ ಪ್ರಯೋಜನಗಳ ಕುರಿತು ಅರಿವು ಮೂಡಿಸಿದರು.

ಇನ್ನೊರ್ವ ಮುಖ್ಯ ಅತಿಥಿ ಜಿಲ್ಲಾ ನಿವಾಸಿ ವೈದ್ಯಾಧಿಕಾರಿಯಾದ ಡಾ.ಶ್ರೀಮತಿ ಶಾಂಭವಿ ಅವರು ಕಾರ್ಯಕ್ರಮದ ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ಅಧ್ಯಕ್ಷರಾದ ಜಯ ಪ್ರಕಾಶ್ ಕೂದುವಳ್ಳಿ ಕಾರ್ಯಕ್ರಮದ ಕುರಿತು ಮಾತನಾಡುತ್ತ, ಕಲಾವಿದರಾದವರು,ಹಾಡು,ನಟನೆ ಹಾಗೂ ವೇದಿಕೆ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಲ್ಲ,ಅವರು ಕೂಡ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರಲ್ಲಿ ಮುಂಚೂಣಿಯಲ್ಲಿದ್ದಾರೆ ಆ ನಿಟ್ಟಿನಲ್ಲಿ ಇಂದಿನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು,ಕಲಾವಿದರು,ಸ್ವಯಂ ಪ್ರೇರಿತರಾಗಿ ರಕ್ತದಾನ,ನೇತ್ರದಾನ, ಅಂಗಾಂಗ ದಾನ ಮಾಡುವುದಕ್ಕೆ ಸನ್ನದ್ಧರಾಗಬೇಕು, ಮುಂದಿನ ದಿನಗಳಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನು ಸಂಘಟಿಸುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಅತಿಥಿಗಳಾಗಿ,ಡಾ.ಭರತ್, ಜಿಲ್ಲಾ ಆರೋಗ್ಯಾಧಿಕಾರಿಗಳಾದ ಜಲಜಾಕ್ಷಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ಸಾಂಸ್ಕೃತಿಕ ರಾಯಭಾರಿಯವರಾದ ಹೆಡದಾಳು ಮಂಜುನಾಥ್, ಗೌರವಾಧ್ಯಕ್ಷರಾದ ಶಿವಣ್ಣ, ಉಪಾಧ್ಯಕ್ಷರಾದ ಸುರೇಶ್ ಮಗ್ಗಲಮಕ್ಕಿ,ಜಿಲ್ಲಾ ಕಾರ್ಯದರ್ಶಿ ಮಲ್ಲಂದೂರು ಮಧು,ಜೊತೆ ಕಾರ್ಯದರ್ಶಿ ಶೃತಿ, ಜಾನಪದ ಸಂಚಾಲಕರಾದ ಶ್ರೀಮತಿ ರತ್ನ ನಾಗೇಶ್ ಹಾಗೂ ಅಶೋಕ್ ರಾಜರತ್ನಂ,ಸಾಂಸ್ಕೃತಿಕ ಸಂಚಾಲಕರಾದ ಮುರುಳಿ ಆಲ್ದೂರು ಮತ್ತು ಸದಸ್ಯರುಗಳಾದ ಶ್ರೀಮತಿ ಭಾರತಿ ಉಮೇಶ್ ರಾಜ್ ಅರಸ್,ತಂಪಿತಾ ಗೌಡ,ಪೂರ್ಣೇಶ್ ಕೇಸರಿಕೆ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ದಾವೂದ್ ಹಕೀಂ,ಎಂ.ಎಸ್ ಆಸಿಫ್,ಮುರುಳಿ ಆಲ್ದೂರು,ರವಿ ಹಂತೂರು,ಸಂದೇಶ್,ಶಿಯಾಬುದ್ದೀನ್ ರಕ್ತದಾನ ಮಾಡಿದರು.
ಕುಮಾರಿ ಅಶ್ವಿನಿ ಕಾರ್ಯಕ್ರಮವನ್ನು ನಿರೂಪಿಸಿದರು.
