ಮೂಡಿಗೆರೆ, ಸೆ.30: ಬಿದರಹಳ್ಳಿ ಗ್ರಾಮದ ಸುತ್ತಮುತ್ತಲಿನ ತೋಟಗಳಲ್ಲಿ ಒಂಟಿ ಕಾಡಾನೆಯೊಂದು ಸಂಚರಿಸುತ್ತಿರುವ ಮಾಹಿತಿ ಲಭ್ಯವಾಗಿದ್ದು, ಸ್ಥಳೀಯರು ಹಾಗೂ ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಎಚ್ಚರಿಕೆಯಿಂದ ಇರುವಂತೆ ಮೂಡಿಗೆರೆ ಅರಣ್ಯ ಇಲಾಖೆ ಸೂಚಿಸಿದೆ.

ಕೆಂಜಿಗೆ, ಬಾಳೆಹಳ್ಳಿ, ಬಿದರಹಳ್ಳಿ ಹಾಗೂ ಹಾರ್ಗೋಡು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಕಾಫಿ ತೋಟಗಳಲ್ಲಿ ಕೆಲಸ ನಿರ್ವಹಿಸುವ ಕೂಲಿ ಕಾರ್ಮಿಕರು, ಗ್ರಾಮಸ್ಥರು ಹಾಗೂ ವಾಹನ ಸವಾರರು ಹೆಚ್ಚಿನ ಜಾಗ್ರತೆ ವಹಿಸುವಂತೆ ಇಲಾಖೆ ಮನವಿ ಮಾಡಿದೆ.

ಕಾಡಾನೆ ಸಂಚಾರದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಮಾಹಿತಿ ಪಡೆದುಕೊಂಡ ನಂತರವೇ ತೋಟಗಳಲ್ಲಿ ಕೆಲಸ ನಿರ್ವಹಿಸುವಂತೆ ಕಾರ್ಮಿಕರಿಗೆ ಸೂಚಿಸಲಾಗಿದೆ. ಕಾಡಾನೆ ಕಾಣಿಸಿಕೊಂಡಲ್ಲಿ ಅದರ ಸಮೀಪ ಹೋಗದೆ, ಯಾವುದೇ ರೀತಿಯಲ್ಲಿ ಕಾಡಾನೆಯನ್ನು ಪ್ರಚೋದಿಸದೆ ತಕ್ಷಣವೇ ಅರಣ್ಯ ಇಲಾಖೆಯ ಆನೆ ಕಾರ್ಯಪಡೆ ನಿಯಂತ್ರಣ ಕೊಠಡಿ: 7204004261 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ತಿಳಿಸಲಾಗಿದೆ.

ದಿನಾಂಕ: 30-09-2026 | ಸಮಯ: ಬೆಳಗ್ಗೆ 9:09

— ಅರಣ್ಯ ಇಲಾಖೆ, ಮೂಡಿಗೆರೆ.