ಮೂಡಿಗೆರೆ, ನವೆಂಬರ್ 24:
ಚಿಕ್ಕಮಗಳೂರು ಜಿಲ್ಲಾ ಆನೆ ಕಾರ್ಯಪಡೆ ಹಾಗೂ ಮೂಡಿಗೆರೆ ಅರಣ್ಯ ಇಲಾಖೆಯ ವತಿಯಿಂದ ಸಾರ್ವಜನಿಕರಿಗೆ ತುರ್ತು ಎಚ್ಚರಿಕೆ ನೀಡಲಾಗಿದೆ.
ಬೀಟಮ್ಮ ಹಾಗೂ ಡಿಸ್ಪ್ಯಾಚ್ ಹರ್ಡ್ ಮತ್ತು ಓಲ್ಡ್ ಬೆಲ್ಟ್ಗೆ ಸೇರಿದ ಕಾಡಾನೆಗಳ ಗುಂಪು ಘಟ್ಟದಹಳ್ಳಿ ಎಸ್ಟೇಟ್ನಲ್ಲಿ ಕಂಡುಬಂದಿದೆ. ಈ ಕಾಡಾನೆಗಳ ಗುಂಪು ಯಾವುದೇ ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಗಳಿಗೆ ಸಂಚರಿಸುವ ಸಾಧ್ಯತೆ ಇರುವುದರಿಂದ ಮಾಕೋನಹಳ್ಳಿ, ಬಾರದಹಳ್ಳಿ, ಹೊರಟ್ಟಿ, ಘಟ್ಟದಹಳ್ಳಿ, ದುಂಡುಗ, ಕೆಲ್ಲೂರು, ಕುನ್ನಹಳ್ಳಿ ಹಾಗೂ ಹಳಸೆ ಗ್ರಾಮಗಳ ಸುತ್ತಮುತ್ತಲಿನ ನಿವಾಸಿಗಳು ಹೆಚ್ಚಿನ ಜಾಗ್ರತೆ ವಹಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.
ಪಟಾಕಿ ಸಿಡಿಸದಂತೆ ಮನವಿ:
ಕಾಡಾನೆಗಳು ಸಂಚರಿಸುತ್ತಿರುವ ಪ್ರದೇಶಗಳಲ್ಲಿ ತೋಟದ ಮಾಲೀಕರು ಹಾಗೂ ಸಾರ್ವಜನಿಕರು ಯಾವುದೇ ಕಾರಣಕ್ಕೂ ಪಟಾಕಿ ಸಿಡಿಸಬಾರದು. ಪಟಾಕಿಗಳ ಸದ್ದಿನಿಂದ ಕಾಡಾನೆಗಳು ಗಾಬರಿಗೊಂಡು ಜನರತ್ತ ಧಾವಿಸುವ ಅಥವಾ ದಾಳಿ ಮಾಡುವ ಅಪಾಯವಿರುವುದರಿಂದ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ತೋಟದ ಕೆಲಸ ತಕ್ಷಣ ಸ್ಥಗಿತಗೊಳಿಸಿ:
ಕಾಡಾನೆಗಳ ಸಂಚಾರವಿರುವ ಪ್ರದೇಶಗಳ ಸುತ್ತಮುತ್ತಲಿನ ತೋಟಗಳಲ್ಲಿ ಕಾರ್ಮಿಕರು ಹಾಗೂ ಸಾರ್ವಜನಿಕರು ಕೆಲಸ ನಿರ್ವಹಿಸಬಾರದು. ಈಗಾಗಲೇ ತೋಟಗಳಲ್ಲಿ ಕೆಲಸ ಮಾಡುತ್ತಿರುವವರು ತಕ್ಷಣವೇ ಕೆಲಸ ಸ್ಥಗಿತಗೊಳಿಸಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅರಣ್ಯ ಇಲಾಖೆ ಸೂಚಿಸಿದೆ.
ತಮ್ಮ ಗ್ರಾಮಗಳ ವ್ಯಾಪ್ತಿಯಲ್ಲಿ ಅಥವಾ ಸುತ್ತಮುತ್ತ ಕಾಡಾನೆಗಳ ಸಂಚಾರ ಕಂಡುಬಂದಲ್ಲಿ ತಕ್ಷಣವೇ ಚಿಕ್ಕಮಗಳೂರು ಜಿಲ್ಲಾ ಆನೆ ಕಾರ್ಯಪಡೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.
ತುರ್ತು ಸಂಪರ್ಕ ಸಂಖ್ಯೆ: 7204004261
ಕಾಡಾನೆಗಳ ಚಲನವಲನದ ಬಗ್ಗೆ ಸಾರ್ವಜನಿಕರು ಜಾಗೃತರಾಗಿದ್ದು, ಅರಣ್ಯ ಇಲಾಖೆಯ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ತಮ್ಮ ಹಾಗೂ ಇತರರ ಸುರಕ್ಷತೆಗೆ ಸಹಕರಿಸಬೇಕೆಂದು ಜಿಲ್ಲಾ ಆನೆ ಕಾರ್ಯಪಡೆ ಮತ್ತು ಅರಣ್ಯ ಇಲಾಖೆ ಮನವಿ ಮಾಡಿದೆ.
ಎಚ್ಚರಿಕೆ ಪ್ರಕಟಣೆ: ಜಿಲ್ಲಾ ಆನೆ ಕಾರ್ಯಪಡೆ, ಚಿಕ್ಕಮಗಳೂರು ಹಾಗೂ ಅರಣ್ಯ ಇಲಾಖೆ, ಮೂಡಿಗೆರೆ.
ದಿನಾಂಕ: 24-11-2026 | ಸಮಯ: ಬೆಳಿಗ್ಗೆ 06:50.
ಘಟ್ಟದಹಳ್ಳಿ ಎಸ್ಟೇಟ್ನಲ್ಲಿ ಬೀಟಮ್ಮ ಮತ್ತು ಇತರೆ ಕಾಡಾನೆಗಳ ಗುಂಪು ಪ್ರತ್ಯಕ್ಷ!
GNE UPDATES
ಇತ್ತೀಚಿನ ಸುದ್ದಿ