ಉಳುವವನು ಭೂ ಒಡೆಯನಾದನು, ಜೀತ ಮಾಡುತ್ತಿದ್ದವರು ಮುಕ್ತರಾದರು, ಕಡ್ಡಾಯ ಶಿಕ್ಷಣ ಬಂದು ಶಿಕ್ಷಣ ಪ್ರತಿಯೊಬ್ಬರ ಮೂಲಭೂತ ಹಕ್ಕಾಯಿತು, ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿ ಬಡವರು ಕೂಡ ಬ್ಯಾಂಕ್ ಕಡೆಗೆ ಮುಖ ಮಾಡಿದರು, ಪಂಚವಾರ್ಷಿಕ ಯೋಜನೆಯಲ್ಲಿ ಅನೇಕ ಜನಪರ ಕಾರ್ಯಗಳಿಗೆ ಹಣಮಿಸಲಿಡಲಾಯಿತು, ಮಲ ಹೊರುವ ಪದ್ಧತಿ ನಿರ್ಮೂಲನೆ ಮಾಡಲಾಯಿತು, ದಲಿತರಿಗೆ ಬ್ಯಾಂಕ್ ಗಳಲ್ಲಿ ಐಆರ್‌ಡಿಪಿ ಸಾಲವನ್ನು ನೀಡಲಾಯಿತು. ಪ್ರತಿ ದಲಿತ ಕೇರಿಗಳಿಗೂ ಬೋರ್ವೆಲ್ ಕೊರಿಸಲಾಯಿತು, ಪ್ರತಿ ದಲಿತ ಕೇರಿಗಳಿಗೂ ಮನೆಯನ್ನು ಮಂಜೂರು ಮಾಡಿದರು, ಪ್ರತಿ ದಲಿತ ಕೇರಿಗಳಿಗೂ ಸಮುದಾಯ ಭವನ ಮಂಜೂರು ಮಾಡಿದರು . 20 ಅಂಶಗಳ  ಕಾರ್ಯಕ್ರಮ ಯೋಜನೆಯನ್ನು ತಂದು ಬಡವರ ಕಲ್ಯಾಣಕ್ಕಾಗಿ ಶ್ರಮಿಸಿದರು…
ವಿಜ್ಞಾನ ತಂತ್ರಜ್ಞಾನದಲ್ಲಿ ಭಾರತವನ್ನು ಪ್ರಪಂಚವೇ ನೋಡುವಂತೆ ಮಾಡಿದರು,  ಇಂತಹ ನೂರಾರು ಯೋಜನೆಗಳಿವೆ,………….
  ಪುರುಷ ಸಮಾಜದ ಸಿದ್ಧ ಮಾದರಿಯನ್ನು ಮೆಟ್ಟಿನಿಂತು, ಶತ-ಶತಮಾನಗಳಿಂದಲೂ ಮಹಿಳೆಯರನ್ನು ಎರಡನೇ ಪ್ರಜೆಯಾಗಿ ಕಾಣುತ್ತಿದ್ದ ಭಾರತದ ಸಮಾಜದಲ್ಲಿ ಪ್ರಥಮ ಮಹಿಳಾ ಪ್ರಧಾನಮಂತ್ರಿಯಾಗಿ ಮಹಿಳೆಯರಿಗೆ ಸ್ಪೂರ್ತಿಯಾಗಿ, ಭಾರತದ ಸಂವಿಧಾನಕ್ಕೆ ಜಾತ್ಯಾತೀತ, ಗಣರಾಜ್ಯ, ಐಕ್ಯತೆ ಎಂಬಾ ಅಮೂಲ್ಯ ಪದಗಳನ್ನು ಸೇರಿಸಿದ ದಿಟ್ಟ ಪ್ರಧಾನಿ, ಭಾರತದ ಸಂವಿಧಾನಕ್ಕೆ ಮೂಲಭೂತ ಕರ್ತವ್ಯಗಳನ್ನು ಸೇರಿಸಿದ ದಿಟ್ಟ ಪ್ರಧಾನಿ, ಶತ   ಶತಮಾನಗಳಿಂದಲೂ ಜೀತಗಾರಿಕೆ ಮಾಡುತ್ತಿದ್ದವರಿಗೆ ಮುಕ್ತಿ ಕೊಟ್ಟ ಪ್ರಧಾನಿ, ವಿಜ್ಞಾನ- ತಂತ್ರಜ್ಞಾನಕ್ಕೆ ಹೆಚ್ಚಿನ ಪ್ರೋತ್ಸಾಹ ಕೊಟ್ಟು ರೋಹಿಣಿ ಎಂಬ ಉಪಗ್ರಹವನ್ನು ಭಾರತ ದಲ್ಲಿ ಉಡಾವಣೆ ಮಾಡಿ    ಪಾಶ್ಚಿಮಾತ್ಯ ದೇಶಗಳು ಭಾರತವನ್ನು ಕೊಂಡಾಡುವಂತೆ ಮಾಡಿದ ಪ್ರಧಾನಿ, ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡಿ ಅಸಮಾನತೆಯನ್ನು ತಗ್ಗಿಸಿದ ದಿಟ್ಟ ಪ್ರಧಾನಿ, ಆ ಕಾಲಕ್ಕೆ ಆ ಸಂದರ್ಭದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿ  ಹಲವಾರ ಕೆಂಗಣ್ಣಿಗೆ ಗುರಿಯಾಗಿ, ಭಾರತದ ಸಂಸದರಾಗಲು ವಿಫಲರಾಗಿ ಮತ್ತೊಮ್ಮೆ ಚಿಕ್ಕಮಗಳೂರಿನ ಪ್ರಜ್ಞಾವಂತ ಮತದಾರರಿಂದ  77333 ಮತಗಳ ಅಂತರದಿಂದ ಜಯಶೀಲರಾಗಿ ಮತ್ತೊಮ್ಮೆ ಗೆದ್ದು  ಪ್ರಧಾನಿಯಾಗಿ ಹಲವಾರು ಜನಪರ ಜೀವ ಪರ ಕೆಲಸಗಳನ್ನು ಮಾಡಿ ವಿಶ್ವಮಟ್ಟಕ್ಕೆ ಭಾರತದ  ಗರಿಮೆಯನ್ನು ಹೆಚ್ಚಿಸಿದ ದಿಟ್ಟ ಪ್ರಧಾನಿ “ಕೋಮುವಾದ”ಕ್ಕೆ ಬಲಿಯಾಗಿದ್ದು ಈ ದೇಶದ ದೊಡ್ಡ ದುರಂತ….
( ಪಕ್ಷ ಮುಖ್ಯವಲ್ಲ, ಜನಪರ ಕೆಲಸ ಮುಖ್ಯ, )….
” ಚಿಕ್ಕಮಗಳೂರಿನ ಚಿಕ್ಕಮಗಳು ಭಾರತ ರತ್ನ  ಶ್ರೀಮತಿ ಇಂದಿರಾಗಾಂಧಿ”

✍️ ಡಾ. ಹರೀಶ್ ನಲ್ಕೆ…
” ಭಾರತ ರತ್ನ ಶ್ರೀಮತಿ ಇಂದಿರಾ ಗಾಂಧಿಯವರ ಜನ್ಮ ದಿನಾಚರಣೆಯ ಅಂಗವಾಗಿ ನವೆಂಬರ್ ತಿಂಗಳ 19ನೇ ದಿನವನ್ನು  ” ಹೆಣ್ಣು ಮಕ್ಕಳ ಸ್ಪೂರ್ತಿಯ ದಿನ” ಎಂದು ರಾಷ್ಟ್ರವ್ಯಾಪಿ  ನಡೆಸಲು ಸರ್ಕಾರ ಮುಂದಾಗಬೇಕಿದೆ….”