ಮೂಡಿಗೆರೆ, ಸೆ.23: ಮೂಡಿಗೆರೆ ಅರಣ್ಯ ಇಲಾಖೆ ವ್ಯಾಪ್ತಿಯ ಜಿ. ಹೊಸಹಳ್ಳಿ ಟಾಟಾ ಕಾಫಿ ಎಸ್ಟೇಟ್ನ ಕೆರೆ ಸುತ್ತಮುತ್ತ ಎರಡು ಕಾಡಾನೆಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ, ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ವಾಹನ ಸವಾರರಿಗೆ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.
ಎರಡು ಕಾಡಾನೆಗಳು ಟಾಟಾ ಕಾಫಿ ಎಸ್ಟೇಟ್ ಕೆರೆ ಪ್ರದೇಶದಲ್ಲಿ ಕಂಡುಬಂದಿರುವುದರಿಂದ ಜಿ. ಹೊಸಹಳ್ಳಿ ಟಾಟಾ ಕಾಫಿ ಎಸ್ಟೇಟ್, ಸಿಲ್ವರ್ ಖಾನ್ ಎಸ್ಟೇಟ್, ಪೋಡಿಯ ಕಾಲೋನಿ, ದಿಣ್ಣೆಕೆರೆ ಹಾಗೂ ಕೆಮ್ಮಣ್ಣುಗುಂಡಿ ಸುತ್ತಮುತ್ತಲಿನ ಜನರು ಹಾಗೂ ವಾಹನ ಸವಾರರು ಅತ್ಯಂತ ಎಚ್ಚರಿಕೆಯಿಂದ ಸಂಚರಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.
ಕಾಡಾನೆಗಳು ಕಂಡುಬಂದಲ್ಲಿ ಸಾರ್ವಜನಿಕರು ಅವುಗಳ ಸಮೀಪಕ್ಕೆ ತೆರಳದೆ, ತಕ್ಷಣವೇ ಆನೆ ಕಾರ್ಯಪಡೆ ನಿಯಂತ್ರಣ ಕೊಠಡಿ – 7204004261 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ತಿಳಿಸಲಾಗಿದೆ.
ದಿನಾಂಕ: 23-09-2026
ಸಮಯ: ಸಂಜೆ 5:56.
ಟಾಟಾ ಕಾಫಿ ಎಸ್ಟೇಟ್ ಕೆರೆ ಬಳಿ ಎರಡು ಕಾಡಾನೆಗಳ ಪತ್ತೆ: ಗ್ರಾಮಸ್ಥರಿಗೆ ಎಚ್ಚರಿಕೆ!
GNE UPDATES
ಇತ್ತೀಚಿನ ಸುದ್ದಿ