ದಿನಾಂಕ 24.ಮೂಡಿಗೆರೆ :
ಮೂಡಿಗೆರೆ ತಾಲ್ಲೂಕು ಬಿದರಳ್ಳಿ ಗ್ರಾಮದ ಬಾಳೆಹಳ್ಳಿಯಲ್ಲಿ ನಿನ್ನೆ ನಡೆದ ಕಾರ್ಮಿಕರು ಮತ್ತು ಮಾಲೀಕರ ನಡುವೆ ನಡೆದ ಕೂಲಿಗಾಗಿ ಜಟಾಪಟಿಯಲ್ಲಿ ಬಂದುಕಿನಿಂದ ಗುಂಡು ಸಿಡಿದು ಮಗುವಿಗೆ ಗಂಭೀರ ಗಾಯಗೊಂಡಿದ್ದು ಸಂಬಂಧಪಟ್ಟವರನ್ನು ಕೂಡಲೇ ಬಂಧಿಸಿ ಗಾಯಗೊಂಡ ಮಗುವಿಗೆ ಚಿಕಿತ್ಸೆ ಜೊತೆಗೆ ಸೂಕ್ತ ಪರಿಹಾರವನ್ನು ಕೊಡಿಸಬೇಕಾಗಿ ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ TUCI ಜಿಲ್ಲಾ ಅಧ್ಯಕ್ಷ ಕೃಷ್ಣಪ್ಪ.ಕೆ.ಕೆ ಒತ್ತಾಯಿಸಿದ್ದಾರೆ.
ಸ್ವತಂತ್ರ ಬಂದು 79 ವರ್ಷ ಕಳೆದರೂ, ಮಲೆನಾಡಿನ ಕಾರ್ಮಿಕರಿಗೆ ಇನ್ನು ಸ್ವಾತಂತ್ರ್ಯ ಸಿಗದಿರುವುದು ವಿಪರ್ಯಾಸ.ಇಂತ ಘಟನೆಗಳಿಗೆ ಸರ್ಕಾರವೇ ನೇರ ಹೊಣೆ. ಈ ಘಟನೆಗೆ ಸಂಬಂಧಿಸಿದಂತೆ ಮಾಲೀಕ ಜಗದೀಶ್ ಗೌಡ ಮತ್ತು ಅವನ ಸಹಚರರು ಜೊತೆಗೆ ಕಾರ್ಮಿಕ ಇಲಾಖೆಯ ಮೇಲು ಪ್ರಕರಣದ ದಾಖಲಿಸಬೇಕು. ಯಾಕೆಂದರೆ 12 ಎಕರೆಗೆ ಮೇಲ್ಪಟ್ಟು ಭೂಮಿ ಹೊಂದಿದ್ದರೆ ಕಡ್ಡಾಯವಾಗಿ ಕಾರ್ಮಿಕ ಇಲಾಖೆಯಲ್ಲಿ ದಾಖಲೆ ನಮೋದಿಸಿ ಪರವಾನಿಗೆ ಪಡೆಯಬೇಕೆಂಬ ನಿಯಮ ವಿದ್ದರೂ,ಕಾರ್ಮಿಕ ಇಲಾಖೆಯ ಭ್ರಷ್ಟ ಅಧಿಕಾರಿಗಳು ಎಂಜಲು ಕಾಸಿಗಾಗಿ ಈ ನಿಯಮ ಪಾಲಿಸುತ್ತಿಲ್ಲ. ಮಲೆನಾಡಿನ ಮಾಲೀಕ ವರ್ಗ ಮತ್ತು ಕಾಫಿ ಬೆಳೆಗಾರರಿಗೆ ತೋಟಕಾರ್ಮಿಕರಿಗೆ ಸರ್ಕಾರ ನಿಗದಿ ಮಾಡಿದ ಕನಿಷ್ಠ ವೇತನ ಎಷ್ಟೆಂದು ತಿಳಿದಿಲ್ಲ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಲಸೆ ಕಾರ್ಮಿಕರು ಬಂದರೆ ಸರ್ಕಾರ ನೊಂದಣಿ ಮಾಡಿಸಿಕೊಂಡು ಅವರಿಗೆ ಸೂಕ್ತ ಕಾಯ್ದೆ,ಕಾನೂನು,ಭದ್ರತೆ ಜೊತೆಗೆ ಇಲ್ಲಿನ ಮೂಲ ಕಾರ್ಮಿಕರಿಗಿಂತ ಹೆಚ್ಚು ಸಂಬಳ ಕೊಡಬೇಕು.ಆದರೆ ಮಾಲೀಕರು ವರ್ಗ ವಲಸೆ ಕಾರ್ಮಿಕರಿಗೆ ಕಡಿಮೆ ಸಂಬಳ ಕೊಟ್ಟು ಹೆಚ್ಚು ದುಡಿಸಿಕೊಳ್ಳುತ್ತಿದ್ದಾರೆ.ಇದಕ್ಕೆ ಕಾರ್ಮಿಕ ಇಲಾಖೆಯ ಸಂಪೂರ್ಣ ಬೆಂಬಲ ಸಿಗುತ್ತಿದೆ.1991ರ ಹೊಸ ಆರ್ಥಿಕ ನೀತಿ ಜಾರಿಗೆ ಬಂದ ಮೇಲೆ ಕಾಫಿಗೆ ಮುಕ್ತ ಮಾರುಕಟ್ಟೆಯಾಯಿತು. ಅಲ್ಲಿಂದ ಕಾರ್ಮಿಕರ ಮೇಲೆ ನಿರಂತರದ ದಬ್ಬಾಳಿಕೆ, ದೌರ್ಜನ್ಯ, ಮಹಿಳೆಯರ ಮೇಲೆ ಅತ್ಯಾಚಾರ ನಿರಂತರವಾಗಿ ನಡೆಯುತ್ತಿದೆ.ಎಷ್ಟೋ ಕೊಲೆಗಳು ಆತ್ಮಹತ್ಯೆಯಾಗಿ ರೂಪಾಂತರಗೊಂಡಿವೆ. ಕಾನೂನು ಪಾಲಿಸಬೇಕಾದ ಪೊಲೀಸ್ ಇಲಾಖೆ,ಕಾರ್ಮಿಕ ಇಲಾಖೆ ಭಕ್ಷಕರಾಗುತ್ತಿದ್ದಾರೆ ಜೊತೆಗೆ ಕಾರ್ಮಿಕರ ಪರ ಇರಬೇಕಾದ ಹೆಚ್ಚಿನ ಕಾರ್ಮಿಕ ಸಂಘಗಳು ಮಾಲೀಕರ ಪರವಾಗಿದೆ.ಒಟ್ಟಾರೆಯಾಗಿ ಮಲೆನಾಡಿನ ಕಾರ್ಮಿಕರು ಸ್ವತಂತ್ರವಾಗಿ ಮಾತನಾಡುವ ಮತ್ತು ಮೂಲಭೂತ ಹಕ್ಕುಗಳನ್ನು ಕಳೆದುಕೊಂಡಿದ್ದಾರೆ.
ಆದ್ದರಿಂದ ಈ ಘಟನೆಗೆ ಸಂಬಂಧಿಸಿದಂತೆ ಅಪರಾಧಿಗಳು ಎಲ್ಲೂ ಪರಾರಿಯಾಗಿಲ್ಲ. ಬಂಧಿಸುವುದರಲ್ಲಿ ವಿಫಲರಾಗಿದ್ದಾರೆ. ಈ ಕೂಡಲೇ ಅವರನ್ನು ಬಂಧಿಸಿ * BNS ಸೆಕ್ಷನ್ 109 ಕೊಲೆ ಯತ್ನ,*BNS 117 ಅಪಾಯಕಾರಿ ಆಯುಧಗಳಿಂದ ತೀವ್ರಹನಿ *ಸೆಕ್ಷನ್ 25 ಅಕ್ರಮ ಗುಂಡು ಹಾರಿಸುವುದು, *ಸೆಕ್ಷನ್ 3/ 25 ಲೈಸೆನ್ಸ್ ಇಲ್ಲದೆ ಇರುವುದು . ದಾಖಲಿಸಿ ಬಂಧಿಸಿ ಸಂಬಂಧಪಟ್ಟವರಿಗೆ ಸೂಕ್ತ ರೀತಿಯ ಪರಿಹಾರ ಕೊಡಬೇಕು ಮತ್ತು ಈ ರೀತಿ ಪ್ರಕರಣಗಳು ಇನ್ನು ಮುಂದೆ ಮರುಕಳಿಸದಂತೆ ಕ್ರಮವಹಿಸಬೇಕಾಗಿ TUCI ಎಚ್ಚರಿಸುತ್ತದೆ.