ಮೂಡಿಗೆರೆ : ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದ ಹೃದಯ ಭಾಗದಲ್ಲಿರುವ ಡಾ!! ಪಿ. ಎಂ      ಅಡ್ಯಾoತಾಯ ರಂಗಮಂದಿರದಲ್ಲಿ  ದಿನಾಂಕ.27. 04. 2026 ನೇ ಸೋಮವಾರದಂದು ನಡೆದ ಡಾ. ಬಿ.ಆರ್. ಅಂಬೇಡ್ಕರ್ ರವರ 135 ನೇ ಜನ್ಮದಿನಾಚರಣೆ   ಚರಿತ್ರೆಯ ಪುಟಗಳಲ್ಲಿ ದಾಖಲಾಯಿತು. ಈ ದಿನಮಾನಗಳಲ್ಲಿ  ದೇಶ  ಜಾತಿ, ಧರ್ಮ, ಕೋಮು ಡಳ್ಳುರಿಯಲ್ಲಿ ಹೊತ್ತಿ  ಉರಿಯುತ್ತಿರುವ ಸಂದರ್ಭದಲ್ಲಿ, ಸಿದ್ದ ಮಾದರಿಯ ಜಾತಿ, ಮತ, ಭಾಷೆ,ಲಿಂಗ ತಾರತಮ್ಯ  ಇಲ್ಲದೆ ಎಲ್ಲರನ್ನೂ ಒಳಗೊಂಡಂತೆ ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ ಆಚರಣೆ ಸಮಿತಿಯು ಮೂಡಿಗೆರೆಯಲ್ಲಿ       ” ಅನುಭವ ಮಂಟಪ  ವೇದಿಕೆ” ಯಲ್ಲಿ ವೈಚಾರಿಕ ಕಾರ್ಯಕ್ರಮ ಆಯೋಜಿಸಿದ್ದು ಸಂವಿಧಾನದ  ಜಾತ್ಯತೀತ ಮೌಲ್ಯವನ್ನು ಎತ್ತಿ ಹಿಡಿದಂತಿತ್ತು.

ರಾಷ್ಟ್ರಕವಿ ಕುವೆಂಪುರವರ ಆಶಯದ ವಿಶ್ವಮಾನವ ಪ್ರವೇಶ ದ್ವಾರದ ಮೂಲಕ  ನೂರಾರು ಶರಣರು ಅನುಭವ ಮಂಟಪದ ವೇದಿಕೆಗೆ  ತಂಡೋಪ-ತಂಡಗಳಾಗಿ ಆಗಮಿಸುತ್ತಿದ್ದರೆ,

ಅಂಬಿಗರ ಚೌಡಯ್ಯರಂತೆ ಬಕ್ಕಿ ಮಂಜುನಾಥ್, ಸಕಲೇಶ ಮಾದರಸನಂತೆ  ಬಕ್ಕಿ ರವೀಂದ್ರ, ಸಿದ್ದರಾಮನಂತೆ ಜೈಪಾಲ್ ಹೊಸಹಳ್ಳಿ, ಅನೇಕ ಪರಿವರ್ತನೆ ಗೀತೆಗಳು ಹಾಡುತ್ತಾ ಅನುಭವ ಮಂಟಪ ವೇದಿಕೆಗೆ ಬಂದಂತಹ, ಶಿವ ಶರಣರ ಮನ ಸೆಳೆದರು.

ಜೇಡರ ದಾಸಿಮಯ್ಯನಂತೆ  ಕಂಚಿನ ಕಂಠದ ಯುವ ಪ್ರತಿಭೆ ನವೀನ್ ಕೋಳೂರು  ನೂರಾರು ಶಿವಶರಣ ರನ್ನು ತನ್ನ ಧ್ವನಿಯಿಂದಲೇ ಜಾಗೃತಿಗೊಳಿಸುತ್ತಾ  ನಿರೂಪಣೆ ಮಾಡುತ್ತಿದ್ದರೆ , ಆದಯ್ಯ ನಂತೆ ಅಭಿಜಿತ್ ಹೆಡದಾಳ್  ರವರು ಡಾ. ಬಿ.ಆರ್ ಅಂಬೇಡ್ಕರ್ ರವರ ವಿಚಾರಧಾರೆಗಳನ್ನು  ಮಂಡಿಸಲು ಬಂದಿದ್ದ   ಶಿವಶರಣರನ್ನು ಅನುಭವ ಮಂಟಪದ ವೇದಿಕೆಗೆ  ಆಹ್ವಾನಿಸುತ್ತಾ,

ಅಲ್ಲಮಪ್ರಭುವಿನಂತೆ ವೇದಿಕೆ ಅಧ್ಯಕ್ಷತೆಯನ್ನು ವಹಿಸಿದ ಬಿ.ಬಿ ನಿಂಗಯ್ಯ ಮಾಜಿ ಸಚಿವರನ್ನು ಆಹ್ವಾನಿಸಿದರೆ, ಅಕ್ಕಮಹಾದೇವಿಯಂತೆ ಉದ್ಘಾಟನೆಗಾಗಿ ಆಗಮಿಸಿದ  ಪ್ರಗತಿಪರ ಚಿಂತಕರು, ಹೋರಾಟಗಾರ್ತಿ, ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದ ಶ್ರೀಮತಿ ಬಾನು  ಮುಸ್ತಕ್ ರವರನ್ನು ಆಹ್ವಾನಿಸಿದರೆ, 12 ನೇ ಶತಮಾನದಲ್ಲಿ ವಚನಗಳ ಮೂಲಕ ರಾಜಕೀಯ, ಸಾಮಾಜಿಕ,ಆರ್ಥಿಕ ತಾರತಮ್ಯಗಳನ್ನು ಅಕ್ಷರ ರೂಪದಲ್ಲಿ ಕಟ್ಟಿಕೊಡುತ್ತಿದ್ದ ಕ್ರಾಂತಿಕಾರಿ ಬಸವಣ್ಣನಂತೆ, ಈ ಹೊತ್ತಿನ ಮೋದಿ ಭಾರತದ ಹಸಿ-ಹಸಿ ಸುಳ್ಳುಗಳನ್ನು ಮತ್ತು ಸಂವಿಧಾನಕ್ಕೆ ಬಂದಿರುವ ಅಪಾಯಗಳನ್ನು ಹಾಗೂ ಬಂಡವಾಳವಾದ, ಬ್ರಾಹ್ಮಣವಾದದ ಕರಾಳ ಮುಖಗಳನ್ನು ಎಳೆ -ಎಳೆಯಾಗಿ  ಮಾತಿನ ಮೂಲಕ, ಅಕ್ಷರದ ಮೂಲಕ, ನಾಡಿನಾದ್ಯಂತ ಬಿಚ್ಚಿಡುತ್ತಿರುವ  ಹೋರಾಟಗಾರ, ಚಿಂತಕ, ಅಂಕಣಕಾರರಾದ ಶಿವಸುಂದರ್ ರವರನ್ನು ಮುಖ್ಯ ಭಾಷಣಗಾರರಾಗಿ ವೇದಿಕೆಗೆ ಆಹ್ವಾನಿಸಿದರೆ, ಚನ್ನಬಸವಣ್ಣನಂತೆ ಈ ಜಿಲ್ಲೆಯ ಪ್ರಗತಿಪರ ಚಿಂತಕ, ಹೋರಾಟಗಾರರಾದ ಬಿ. ರುದ್ರಯ್ಯ ರವರನ್ನು ಪ್ರಾಸ್ತವಿಕ  ನುಡಿ ತೋರಣ ಕಟ್ಟಲು ವೇದಿಕೆಗೆ ಆಹ್ವಾನಿಸಿದರೆ, ಮಡಿವಾಳ ಮಾಚಯ್ಯನಂತೆ ಆಶಯ ನುಡಿಗಳನ್ನು ನುಡಿಯಲು ಎಂ.ಪಿ ಕುಮಾರಸ್ವಾಮಿ ಮಾಜಿ ಸಚಿವರನ್ನು ವೇದಿಕೆಗೆ ಆಹ್ವಾನಿಸುತ್ತಾ, ಅನುಭವ ಮಂಟಪ ವೇದಿಕೆಗೆ ಸಾಕ್ಷಿಯಾಗಲು ಬಂದಿದ್ದ ಇಪ್ಪತ್ತಕ್ಕೂ ಹೆಚ್ಚು ಶಿವ ಶರಣರನ್ನು ಜಾತಿ, ಮತ, ಲಿಂಗ ತಾರತಮ್ಯವಿಲ್ಲದೆ  ಜಾತ್ಯತೀತವಾಗಿ ಎಲ್ಲರನ್ನು ಪ್ರೀತಿಯಿಂದ ವೇದಿಕೆ ಆಹ್ವಾನಿಸಿದರು.

ಡೋಹರ ಕಕ್ಕಯ್ಯರಂತೆ  ವೇದಿಕೆಯಲ್ಲಿದ್ದ ಎಲ್ಲಾ ಶಿವಶರಣರನ್ನು ಅನಂತ್ ರವರು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು  “ಅಂಬೇಡ್ಕರ್ ಥಾಟ್ಸ್” ಎಂಬ ಪುಸ್ತಕದ ಜೊತೆ  ವಿಶಾಲತೆಯ,ವೈಚಾರಿಕತೆಯ ಸಂಕೇತವಾದ  ನೀಲಿ ಸಾಲುಗಳನ್ನು,  ಪುರುಷ ಸಮಾಜದ ಸಿದ್ಧ ಮಾದರಿಗೆ ಮಣೆ ಹಾಕದೆ   ಮಹಿಳೆಯರಿಂದಲೇ ವೇದಿಕೆಯಲ್ಲಿ  ಆಸೀನರಾಗಿದ್ದ ಶಿವ ಶರಣರಿಗೆ  ಕೊಡಿಸುವ ಮೂಲಕ ಎಲ್ಲರನ್ನೂ ಪ್ರೀತಿಯಿಂದ ಸ್ವಾಗತಿಸಿದರು.

ಸತ್ಯಕ್ಕನಂತೆ ಸ್ಪಷ್ಟವಾಗಿ ನಿರ್ಭೀತಿಯಿಂದ ನೆರೆದಿದ್ದ ಎಲ್ಲರನ್ನೂ ” ಜೈ ಭೀಮ್ “ಎಂಬ ಘೋಷಣೆಯೊಂದಿಗೆ,, ಎಲ್ಲರನ್ನು  ಕೇಂದ್ರೀಕರಿಸಿಕೊಂಡು  ಕುಮಾರಿ ಸಿಂಚನ ಅಂತಿಮ ಬಿ.ಎ ವಿದ್ಯಾರ್ಥಿ   ಡಿ.ಎಸ್‌.ಪಿ. ಜಿ ಕಾಲೇಜು ಮೂಡಿಗೆರೆ ಇವರು  ಭಾರತದ ಸಂವಿಧಾನ ಪೀಠಿಯನ್ನು ಬೋಧಿಸಿದರೆ,

ಪ್ರಾಸ್ತಾವಿಕವಾಗಿ ಮಾತನಾಡಿದವರು, ಉದ್ಘಾಟಕರಾಗಿ ಮಾತನಾಡಿದವರು, ಆಶಯ ನುಡಿಗಳನ್ನು ಮಾತನಾಡಿದವರು, ಮುಖ್ಯ ಅತಿಥಿಗಳಾಗಿ ಮಾತನಾಡಿದವರು ” ಭಾರತದ ಸಮಕಾಲೀನ ಸಂದರ್ಭಕ್ಕೆ ಡಾ. ಬಿ.ಆರ್ ಅಂಬೇಡ್ಕರ್ ರವರ ಚಿಂತನೆಗಳ  ಪ್ರಸ್ತುತತೆಯನ್ನು ವಿವರವಾಗಿ   ಕಟ್ಟಿಕೊಟ್ಟರು.

ಮೋಳಿಗೆ ಮಾರಯ್ಯನಂತೆ  ಲೋಕವಳ್ಳಿ ರಮೇಶ್ ರವರು,  ಆದಯ್ಯನಂತೆ ಮರುಗುಂದ ಪ್ರಸನ್ನ ರವರು, ನಿಜಗುಣ ಶಿವಯೋಗಿಯಂತೆ ಕೆ.ಕೆ ಕೃಷ್ಣಪ್ಪ ಬಿಳಗುಳ ರವರು, ಹಲವಾರು ನಿರ್ಣಯಗಳನ್ನು ಮಂಡಿಸಿದರು.

ಒಕ್ಕಲಿಗರ ಮುದ್ದಯ್ಯ  ರಂತೆ  ಜೈರಾಮ್ ಗೌಡರು, ಎಚ್ಚರಿಕೆ ಮುತ್ತ ನಾಥಯ್ಯನಂತೆ ಬಿ.ಕೆ ಲಕ್ಷ್ಮಣ್ ಕುಮಾರ್ ರವರು, ಕಂಬದ ಮಾರಯ್ಯನಂತೆ ಜಾಕಿರ್ ಹುಸೇನ್ ರವರು ಶುಭಾಶಯ ಕೋರಿದರೆ,

ಸಿದ್ದ ಮಾದರಿಯ  ಜಾತಿ, ಮತ,ಭಿನ್ನ ಭೇದವಿಲ್ಲದೆ ಹಿರಿಯ ನಾಗರಿಕರಿಗೆ, ಸಾಧಕರಿಗೆ, ಪ್ರತಿಭಾನ್ವಿತ  ವಿದ್ಯಾರ್ಥಿಗಳಿಗೆ  ವೇದಿಕೆಯಲ್ಲಿದ್ದ ಎಲ್ಲಾ ಶರಣರು ಪ್ರೀತಿಯಿಂದ ಅಭಿಮಾನದಿಂದ ಸನ್ಮಾನಿಸಿದರು.

ಚಾರಿತ್ರಿಕ ಪುಟಗಳಲ್ಲಿ ಸೇರಲೇಬೇಕಾದಂತ ಇಂತಹ ಮಹಾ ಮನೆಯಲ್ಲಿ ನನ್ನನ್ನು ಕೂಡ   ಸಾಧಕರ ಪಟ್ಟಿಯಲ್ಲಿ ಕೂರಿಸಿ  ಸನ್ಮಾನಿಸಿ ಏಷ್ಯಾದ ಬೆಳಕು ಬುದ್ಧನ ಮೂರ್ತಿಯನ್ನು ನೀಡಿದ್ದು ಮರೆಯಲಾರದ ಸಂತಸದ ಗಳಿಗೆ.

ತನ್ನ ವೈಯಕ್ತಿಕ ಬದುಕನ್ನು ಲೆಕ್ಕಿಸದೆ ಜಿಲ್ಲೆಯ ಶೋಷಿತರ ವಿಮೋಚನೆಗಾಗಿ ದುಡಿದು ಮಡಿದ ಹಾಗೂ ಇನ್ನೂ ಸಹ ದುಡಿಯುತ್ತಿರುವ ನೂರಾರು ದಲಿತ, ಪ್ರಗತಿಪರ ಹೋರಾಟಗಾರರ, ಚಿಂತಕರ ಹೋರಾಟದ ಬದುಕು- ಭವಣೆ  ಅವರ ಹೋರಾಟದ ಪ್ರತಿಫಲವಾಗಿ ನಡೆದಿರುವ ಸಾವಿರಾರು ಹೋರಾಟಗಳ ಸಾಧಕ- ಬಾದಕಗಳನ್ನು, “ಚಿಕ್ಕಮಗಳೂರು ಜಿಲ್ಲೆಯ ದಲಿತ ಚಳುವಳಿ :ಸಮಕಾಲೀನ ಅಧ್ಯಯನ” ಎಂಬ ಸಂಶೋಧನ ಮಹಾಪ್ರಬಂದದ ಮೂಲಕ ಚರಿತ್ರೆ ಪುಟಗಳಲ್ಲಿ ದಾಖಲಿಸಿ, ಕನ್ನಡ ವಿಶ್ವವಿದ್ಯಾಲಯದ 34ನೇ  ನುಡಿ ಹಬ್ಬದಂದು ಘನವೆತ್ತಾ ರಾಜ್ಯಪಾಲರಿಂದ ” ಡಾಕ್ಟರ್  ಆಫ್ ಫಿಲಾಸಫಿ ಪದವಿ”  ಪಡೆದ ನನ್ನ ಚಿಕ್ಕ ಕೆಲಸವನ್ನು ಗುರುತಿಸಿ, ಅನುಭವ ಮಂಟಪ ವೇದಿಕೆಯಲ್ಲಿ ಗೌರವಿಸಿದ್ದಕ್ಕೆ, ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ ಸಮಿತಿಯ ಎಲ್ಲ ಶಿವ ಶರಣರಿಗೂ ಅನಂತ ಅನಂತ ಧನ್ಯವಾದಗಳು🙏🙏🙏🙏

12ನೇ ಶತಮಾನದ “ಅನುಭವ ಮಂಟಪ ವೇದಿಕೆ”ಯನ್ನು ಕಟ್ಟಲು ಅನೇಕ ಶಿವಶರಣರು ದುಡಿದಂತೆ,  ಇಂದು ದಿನಾಂಕ 27. 04. 2026ರ ಸೋಮವಾರ ನಡೆದ ಕಾರ್ಯಕ್ರಮಕ್ಕೆ ಅನೇಕರು ಶಿವ ಶರಣರಂತೆ ಹಗಲಿರುಳು ದುಡಿದರು.

ಕನ್ನಡಿ ಕಾಯಕರಂತೆ ಮಹೇಂದ್ರ ಮೌರ್ಯ, ಅರಿವಿನ ಮಾರಿ ತಂದೆಯಂತೆ ಶಿವಪ್ರಸಾದ್ ಭಾರತಿ ಬೈಲ್, ಅಂಗ ಸೊಂಕಿನ ಲಿಂಗ ತಂದೆಯಂತೆ  ಮಂಜಣ್ಣ, ಅಗ್ರವಾಣಿ  ಹೊನ್ನಯ್ಯ  ನಂತೆ ರಾಜು ಮುತ್ತಿಗೆ ಪುರ, ಅನಾಮಿಕ ನಾಚಯ್ಯ ನಂತೆ ಲಕ್ಷ್ಮಣ್ ಕೆಸವಳಲು, ಅಪ್ಪಿ ದೇವಯ್ಯನಂತೆ   ಕುಮಾರ್ ಉದುಸೆ, ಅಮರ ಗುಂಡಯ್ಯ ಮಲ್ಲಿಕಾರ್ಜುನನಂತೆ ಹರೀಶ್ ಕೆಲ್ಲೂರು, ಅವಸರದ ರೇಖಣ್ಣನಂತೆ ಪೂರ್ಣೇಶ್ ಹೆಬ್ಬರಿಗೆ, ಆನಂದಯ್ಯನಂತೆ ಶಂಕರ್ ಬಂಕೇನಹಳ್ಳಿ, ಆಯ್ದಕ್ಕಿ ಮಾರಯ್ಯನಂತೆ ಕುಮಾರ್ ಬಕ್ಕಿ, ಉರಿಲಿಂಗ ದೇವನಂತೆ ದೇವರಾಜ್ ಹೆಸಗಲ್, ಉರಿಲಿಂಗಿ  ಪೆದ್ದಿಯಂತೆ ರವಿ  ಮಾಕೋನಹಳ್ಳಿ, ಉಗಡಿಸುವ ಗಟ್ಟಿ ದೇವಯ್ಯನಂತೆ ಗಣೇಶ್, ಉಪರಿಗುಡಿಯ ಸೋಮದೇವಯ್ಯನಂತೆ ಗಿರೀಶ್ ಹೆಸಗಲ್, ಉಳಿಮೇಶ್ವರ ಚಿಕ್ಕಯ್ಯನಂತೆ ಸಾಗರ್  ರವರು, ಎಲಿಗಾರ ಕಾಮಣ್ಣನಂತೆ ಗಿರೀಶ್ ಹಂಡುಗುಳಿ, ಮಲ್ಲೇಶ್ವರದ ಕೇತಯ್ಯನಂತೆ ನಿವೃತ್ತ ಉಪ ತಹಶೀಲ್ದಾರ್  ಮಂಜುನಾಥ್ ಸರ್, ಏಕಂತದ ರಾಯನಂತೆ ಸಂತೋಷ್ ಬೆಟ್ಟಗೆರೆ, ಸೊನ್ನಲಿಕೆ ಸಿದ್ಧರಾಮ ನಂತೆ  ಪ್ರತಾಪ್…..,……………………..,.. ( ಇನ್ನು ಮುಂತಾದವರು )

ಇಂತಹ ಮುಂತಾದ  ಶಿವಶರಣರು  ಹಗಲಿರುಳು  ಕಾಯಕ ಮಾಡಿದ  ಪ್ರತಿಫಲವಾಗಿ ಅನುಭವ ಮಂಟಪ ವೇದಿಕೆ ಕಾರ್ಯಕ್ರಮ ಯಶಸ್ವಿಯಾಯಿತು. ಅನೇಕ ಶಿವಶರಣರ ಸಹಕಾರ, ಪ್ರೋತ್ಸಾಹ, ಬೆಂಬಲದಿಂದಾಗಿ ಮೂಡಿಗೆರೆಯ “ಅನುಭವ ಮಂಟಪದ ವೇದಿಕೆ” ಕಾರ್ಯಕ್ರಮ  ಇಂದು ಚರಿತ್ರೆ ಪುಟಗಳಲ್ಲಿ ದಾಖಲಾಯಿತು..

ಹೇಳಿದ, ಕೇಳಿದ, ನೋಡಿದ ಎಲ್ಲ ಶಿವಶರಣರಿಗೂ ಶರಣು ಶರಣಾರ್ಥಿಗಳು ….

” ನನ್ನ ಕಲ್ಪನೆಯ ಶರಣರ “ಮಹಾ ಮನೆ”ಯಲ್ಲಿ ನನಗೂ ಸನ್ಮಾನ ”
💐💐💐💐💐💐💐💐
 
ಇಂತಿ ನಿಮ್ಮವ……

ಡಾ. ಹರೀಶ್ ನಲ್ಕೆ
🌹🌹🌹🌹🌹🌹🌹