ಮೂಡಿಗೆರೆ, ಆಗಸ್ಟ್ 13, 2026: ಅರಣ್ಯ ಇಲಾಖೆ, ಮೂಡಿಗೆರೆ ಇವರ ಪ್ರಕಟಣೆಯಂತೆ, ಸರ್ವೇ ನಂ. 73ರ ಉದ್ದಿ ಕುಂಬ್ರಿ ಕಾಡಿನಲ್ಲಿ ಒಂಟಿ ಕಾಡಾನೆಯೊಂದು ಕಂಡುಬಂದಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚರಿಸುತ್ತಿದೆ.

ಕಾಡಾನೆಯು ಜಿ. ಹೊಸಹಳ್ಳಿ ಟಾಟಾ ಕಾಫಿ ಎಸ್ಟೇಟ್, ಜಿ. ಹೊಸಹಳ್ಳಿ ಗ್ರಾಮ, ಪೋಡಿಯ ಕಾಲೋನಿ ಹಾಗೂ ಹೊಸಪುರ ಭಾಗಗಳ ಸುತ್ತಮುತ್ತ ಸಂಚರಿಸುವ ಸಾಧ್ಯತೆ ಇರುವುದರಿಂದ, ಈ ಪ್ರದೇಶದ ಗ್ರಾಮಸ್ಥರು ಹಾಗೂ ವಾಹನ ಸವಾರರು ಅತ್ಯಂತ ಎಚ್ಚರಿಕೆಯಿಂದ ಇರಬೇಕು ಎಂದು ಅರಣ್ಯ ಇಲಾಖೆ ಮನವಿ ಮಾಡಿದೆ.

ಕಾಡಾನೆ ಕಂಡುಬಂದಲ್ಲಿ ಸಾರ್ವಜನಿಕರು ಅದರ ಸಮೀಪಕ್ಕೆ ತೆರಳದೆ, ತಕ್ಷಣ ಜಿಲ್ಲಾ ಆನೆ ಕಾರ್ಯಪಡೆ ನಿಯಂತ್ರಣ ಕೊಠಡಿಗೆ 7204004261 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ತಿಳಿಸಲಾಗಿದೆ.

ದಿನಾಂಕ: 13.08.2026
ಸಮಯ: ಮಧ್ಯಾಹ್ನ 03:50

— ಅರಣ್ಯ ಇಲಾಖೆ, ಮೂಡಿಗೆರೆ.