ಮೂಡಿಗೆರೆ, ನ.21: ಬೇಲೂರು ಅರಣ್ಯ ವಲಯ ವ್ಯಾಪ್ತಿಯ ಕಾನನಹಳ್ಳಿ ಕಾಡು, ನೆರಳಮಕ್ಕಿ, ಸೂಳೆಗುಡ್ಡ ಎಸ್ಟೇಟ್ ಸೇರಿದಂತೆ ಕೊಗೋಡು, ಬೋಮ್ಮೆನಹಳ್ಳಿ, ಹಿರಿಹಸಿಡೆ, ನಾಗೇನಹಳ್ಳಿ, ಚಿಕ್ಕಹಸಿಡೆ, ಕುಪ್ಪಗೋಡು, ಶಿರಗುರ, ಚಿಕ್ಕಸಾಲವರ, ಹುನುಗನಹಳ್ಳಿ, ಕಣದೂರು ಹಾಗೂ ಕುಂಬರಹಳ್ಳಿ ಭಾಗಗಳಲ್ಲಿ ಕಾಡಾನೆಗಳ ಸಂಚಾರ ಕಂಡುಬಂದಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮೂಡಿಗೆರೆ ಹಾಗೂ ಜಿಲ್ಲಾ ಆನೆ ಕಾರ್ಯಪಡೆ ಚಿಕ್ಕಮಗಳೂರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.
ಕಾಡಾನೆಗಳು ಈ ಭಾಗಗಳಿಂದ ಜಿ. ಹೊಸಹಳ್ಳಿ ಟಾಟಾ ಕಾಫಿ ಎಸ್ಟೇಟ್, ಪೋಡಿಯಾ ಕಾಲೋನಿ, ಹೊಸಪುರ, ಗೋಣಿಬೀಡು, ಆನೆದಿಬ್ಬ, ಸಾಲುಮರ, ಕಸ್ಕೇಬೈಲ್, ಕಲ್ಲುಗುಡ್ಡ, ಕಮ್ಮರಗೋಡು, ಗಾಡಿಚೌಕ, ಶುಭನಗರ, ಮಣ್ಣಿಕೆರೆ, ಚಂದ್ರಾಪುರ, ವಾಟೆಹಳ್ಳಿ, ಗೌತಹಳ್ಳಿ, ಪುರ, ಚಟ್ಟನಹಳ್ಳಿ, ಸಂಗಮಪುರ, ಕನ್ನಾಪುರ, ಕಾರಬೈಲ್, ಮಾಕೋನಹಳ್ಳಿ, ಮೂಡಸಸಿ, ಘಟ್ಟದಹಳ್ಳಿ, ಕುನ್ನಹಳ್ಳಿ, ಬಾರದಹಳ್ಳಿ, ದುಂಡುಗ, ಇಂದ್ರವಳ್ಳಿ, ನಂದಿಪುರ, ಕಡೆ ಮಡ್ಕಲ್, ಸಿದ್ಧಾರ್ಥ ವನ, ಹಳ್ಳದಗಂಡಿ, ಹೆಸಗಲ್ ಹಾಗೂ ತತ್ಕೊಳ ಗ್ರಾಮಗಳ ಕಡೆಗೆ ಸಂಚರಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಇಲಾಖೆ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು, ತೋಟದ ಮಾಲೀಕರು, ಕೂಲಿ ಕಾರ್ಮಿಕರು ಹಾಗೂ ವಾಹನ ಸವಾರರು ಹೆಚ್ಚಿನ ಜಾಗ್ರತೆ ವಹಿಸಬೇಕು. ಕಾಡಾನೆಗಳು ಸಂಚರಿಸುವ ಪ್ರದೇಶಗಳಲ್ಲಿ ಅನಗತ್ಯವಾಗಿ ಓಡಾಡುವುದನ್ನು ತಪ್ಪಿಸಬೇಕು ಹಾಗೂ ಆನೆಗಳು ಕಂಡುಬಂದಲ್ಲಿ ಅವುಗಳ ಸಮೀಪ ಹೋಗುವುದು, ಅವುಗಳನ್ನು ಕೆಣಕುವುದು ಅಥವಾ ಸೆರೆಹಿಡಿಯಲು ಪ್ರಯತ್ನಿಸುವುದನ್ನು ಮಾಡಬಾರದು ಎಂದು ಎಚ್ಚರಿಸಲಾಗಿದೆ.
ಕಾಡಾನೆಗಳ ಸಂಚಾರ ಕಂಡುಬಂದಲ್ಲಿ ತಕ್ಷಣ ಮಾಹಿತಿ ನೀಡಿ
ತಮ್ಮ ಗ್ರಾಮ ಅಥವಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡಾನೆಗಳ ಸಂಚಾರ ಕಂಡುಬಂದಲ್ಲಿ ಜಿಲ್ಲಾ ಆನೆ ಕಾರ್ಯಪಡೆ ಚಿಕ್ಕಮಗಳೂರು ತಂಡಕ್ಕೆ 7204004261 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.
ಕಾಡಾನೆ ಮತ್ತು ಮಾನವ ಸಂಘರ್ಷವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ಅರಣ್ಯ ಇಲಾಖೆಯ ಸೂಚನೆಗಳನ್ನು ಪಾಲಿಸಿ ಸಹಕರಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.
ಮಾಹಿತಿ: ಅರಣ್ಯ ಇಲಾಖೆ ಮೂಡಿಗೆರೆ ಹಾಗೂ ಜಿಲ್ಲಾ ಆನೆ ಕಾರ್ಯಪಡೆ, ಚಿಕ್ಕಮಗಳೂರು.
ದಿನಾಂಕ: 21-11-2026.
ಬೇಲೂರು ಅರಣ್ಯ ವಲಯದ ವಿವಿಧ ಭಾಗಗಳಲ್ಲಿ ಕಾಡಾನೆಗಳ ಸಂಚಾರ: ಗ್ರಾಮಸ್ಥರಿಗೆ ಅರಣ್ಯ ಇಲಾಖೆ ಎಚ್ಚರಿಕೆ!
GNE UPDATES
ಇತ್ತೀಚಿನ ಸುದ್ದಿ