ಅರಣ್ಯ ಇಲಾಖೆ, ಮೂಡಿಗೆರೆ

ಮೂಡಿಗೆರೆ: ಘಟ್ಟದಹಳ್ಳಿ ಭಾಗದಿಂದ ಒಂಟಿ ಕಾಡಾನೆಯೊಂದು ಸಂಚರಿಸುತ್ತಿರುವುದು ಕಂಡುಬಂದಿದೆ.

ಆದ್ದರಿಂದ ಮಾಕೋನಹಳ್ಳಿ, ಎಂ. ಚಂದ್ರಪುರ, ಬಾರದಹಳ್ಳಿ, ಹೊರಟ್ಟಿ, ಘಟ್ಟದಹಳ್ಳಿ ಹಾಗೂ ಚಂದ್ರಪುರ ಗ್ರಾಮಗಳ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.

ಕಾಡಾನೆ ಕಂಡುಬಂದಲ್ಲಿ ಸಾರ್ವಜನಿಕರು ಯಾವುದೇ ರೀತಿಯಲ್ಲಿ ಆನೆಯನ್ನು ಹಿಂಬಾಲಿಸದೆ ಅಥವಾ ಪ್ರಚೋದಿಸದೆ, ತಕ್ಷಣ ಆನೆ ಕಾರ್ಯಪಡೆ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ.

📞 ಆನೆ ಕಾರ್ಯಪಡೆ ನಿಯಂತ್ರಣ ಕೊಠಡಿ:
7204004261

ದಿನಾಂಕ: 10-08-2026
ಸಮಯ: ಸಂಜೆ 04:45

— ಅರಣ್ಯ ಇಲಾಖೆ, ಮೂಡಿಗೆರೆ