ಅಖಿಲ ಭಾರತ ಮುಂಡಾಲ ಯುವ ವೇದಿಕೆ ಮಂಗಳೂರು ಹಾಗೂ ಅಖಿಲ ಭಾರತ ಮುಂಡಾಲ ಸಮಾಜ ಮೂಡಿಗೆರೆ, ಚಿಕ್ಕಮಗಳೂರು ಜಿಲ್ಲೆ ಇವರ ಜಂಟಿ ಆಶ್ರಯದಲ್ಲಿ ಶ್ರೀ ಚಾಮುಂಡೇಶ್ವರಿ ಮತ್ತು ಬಬ್ಬುಸ್ವಾಮಿ ದೈವಸ್ಥಾನ, ಇಂದಿರಾನಗರ, ಬಿಳಗುಳ , ಮೂಡಿಗೆರೆಯಲ್ಲಿ ಅಂಬೇಡ್ಕರ್ ಜಯಂತಿ ಹಾಗೂ ಮುಂಡಾಲ ಗ್ರಾಮ ಸಭೆ ನಡೆಯಿತು.
ಬಬ್ಬುಸ್ವಾಮಿ ಕ್ಷೇತ್ರ ಬಿಳಗುಳ ಗುರಿಕಾರರಾದ ಶ್ರೀ ಅಣ್ಣಪ್ಪ ಇವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.ಅಖಿಲ ಭಾರತ ಮುಂಡಾಲ ಯುವ ವೇದಿಕೆ ಇದರ ಅಧ್ಯಕ್ಷರಾದ ರಘುವೀರ್ ಬಾಬುಗುಡ್ಡ ರವರು ಮಾತನಾಡಿ ಮುಂಡಾಲ ಸಮುದಾಯ ಚಿಕ್ಕಮಗಳೂರು ಜಿಲ್ಲೆಯಲ್ಲೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿದೆ ಆದರೆ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ನಾವು ಪ್ರಗತಿ ಕಾಣಲು ಎಲ್ಲಾ ಜಿಲ್ಲೆಯವರೂ ಕೂಡ ಒಗ್ಗಟ್ಟಾಗಿ ಶ್ರಮಿಸ ಬೇಕು ಎಂದರು.

ಅಂಬೇಡ್ಕರ್ ಬದುಕು ಹಾಗೂ ಸಂವಿಧಾನದ ಆಶಯಗಳ ಬಗ್ಗೆ ಸಂಘಟನಾ ಕಾರ್ಯದರ್ಶಿ ರಘುರಾಜ್ ಕದ್ರಿ ತಿಳಿಸಿದರು.
ಕ್ರೀಡಾ ಕಾರ್ಯದರ್ಶಿ ರಜನೀಶ್ ಕಾಪಿಕಾಡ್ ರವರು ಮುಂಡಾಲ ಗ್ರಾಮ ಸಭೆಯಲ್ಲಿ ಸಂಘದ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೂಡಿಗೆರೆಯ 70 ಬಡ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಅಖಿಲ ಭಾರತ ಬಬ್ಬುಸ್ವಾಮಿ ಮುಂಡಾಲ ಸಮಾಜ. ರಿ ಮೂಡಿಗೆರೆ ತಾ. ಅಧ್ಯಕ್ಷರಾದ ಚನ್ನಕೇಶವ, ಅಲೆಕಾಡು ಗುಳಿಗ ಕ್ಷೇತ್ರದ ಅಧ್ಯಕ್ಷರಾದ ಹರೀಶ್ ಆನೆದಿಬ್ಬ, ಪ್ರಧಾನ ಕಾರ್ಯದರ್ಶಿಯಾದ ರವೀಂದ್ರ, ಶೃಂಗೇರಿ ತಾಲೂಕು ಅಧ್ಯಕ್ಷರಾದ ಮಂಜುನಾಥ್ ಮಣ್ಣಿಕೆರೆ, ಸುರೇಶ್ ಟೈಲರ್ ಹಾದಿ, ಕುಮಾರ್ ದೊಡ್ಡಣ ಗುಡ್ಡೆ ಹಾಗೂ ಪ್ರತಿ ಗ್ರಾಮ ಶಾಖೆ ಗುರಿಕಾರರು , ಮುಂಡಾಲ ಯುವ ವೇದಿಕೆ ಮಂಗಳೂರು ಇದರ ಸದಸ್ಯರಾದ ನಿಶಾಂತ್ ಉರ್ವ, ಕ್ರಷ್ಣ ಕಾನ, ಪ್ರತಾಪ್ ಸಾಲ್ಯಾನ್ ಕದ್ರಿ,ರವಿ ಕಾಪಿಕಾಡ್, ಪ್ರಕಾಶ್ ಕೋಡಿಕಲ್, ಪ್ರದೀಪ್ ಕಾಪಿಕಾಡ್, ರಾಜೇಶ್ ಕಾನ, ಪ್ರವೀಣ್ ಕೋಡಿಕಲ್, ಅಜಿತ್ ಕಾಪಿಕಾಡ್, ಜಗದೀಶ್ ಕಾಪಿಕಾಡ್ , ಶ್ರೀನಾಥ್,
ಪ್ರಶಾಂತ್ ಕಾಟಿಪಳ್ಳ, ಅರವಿಂದ್ ಮೊದಲಾದವರು ಉಪಸ್ಥಿತರಿದ್ದರು.
ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ಕಿರಣ್ ಕುಮಾರ್ ಕೊಡಿಯಾಲ್ ಬೈಲ್ ರವರು ಕಾರ್ಯಕ್ರಮ ನಿರ್ವಹಿಸಿದರು.
