ಮೂಡಿಗೆರೆ: ಜಾಗರಖಾನ್ ಕಾಡಿಗೆ ಮೂರು ಕಾಡಾನೆಗಳ ಆಗಮನ — ಗ್ರಾಮಸ್ಥರಿಗೆ ಎಚ್ಚರಿಕೆ
ಮೂಡಿಗೆರೆ, ಆಗಸ್ಟ್ 13, 2026: ಶುಭನಗರದ ಶೇಷಕುಮಾರ್ ಹಾಗೂ ಸೀತೆಗೌಡ ಅವರ ತೋಟದ ಭಾಗದಲ್ಲಿ ಇದ್ದ ಮೂರು ಕಾಡಾನೆಗಳು ಇದೀಗ ಜಾಗರಖಾನ್ ಕಾಡಿನ ಪ್ರದೇಶಕ್ಕೆ ಬಂದಿರುವುದಾಗಿ ಅರಣ್ಯ ಇಲಾಖೆ ಮಾಹಿತಿ ನೀಡಿದೆ.
ಈ ಹಿನ್ನೆಲೆಯಲ್ಲಿ ದುಂಡುಗ, ಹಳಸೆ, ಜಾಗರಖಾನ್, ಜಾಗರಮನೆ, ಮಣ್ಣಿಕೆರೆ, ಶುಭನಗರ ಹಾಗೂ ಚಂದ್ರಪುರ ಗ್ರಾಮಗಳ ಸುತ್ತಮುತ್ತ ವಾಸಿಸುವ ಗ್ರಾಮಸ್ಥರು ಹಾಗೂ ವಾಹನ ಸವಾರರು ಅತ್ಯಂತ ಎಚ್ಚರಿಕೆಯಿಂದ ಸಂಚರಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.
ಈ ಭಾಗದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಅತೀ ಜಾಗರೂಕತೆಯಿಂದಿದ್ದು, ಅರಣ್ಯ ಇಲಾಖೆಯಿಂದ ಅಗತ್ಯ ಮಾಹಿತಿ ಪಡೆದುಕೊಂಡು ಮಾತ್ರ ಕೆಲಸ ನಿರ್ವಹಿಸುವಂತೆ ಸೂಚಿಸಲಾಗಿದೆ.
ಕಾಡಾನೆಗಳು ಕಂಡುಬಂದಲ್ಲಿ ಸಾರ್ವಜನಿಕರು ಅವುಗಳ ಸಮೀಪ ತೆರಳದೆ, ತಕ್ಷಣ ಆನೆ ಕಾರ್ಯಪಡೆ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 7204004261 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಅರಣ್ಯ ಇಲಾಖೆ ತಿಳಿಸಿದೆ.
ದಿನಾಂಕ: 13-08-2026
ಸಮಯ: ಬೆಳಿಗ್ಗೆ 10:25.
ಮೂಡಿಗೆರೆ :ಮೂರು ಕಾಡನೆಗಳ ಆಗಮನ..ಈ ಗ್ರಾಮಸ್ಥರು ಎಚ್ಚರದಿಂದಿರಿ..?
GNE UPDATES
ಇತ್ತೀಚಿನ ಸುದ್ದಿ