ಎತ್ತ ನೋಡಿದರೂ ಹಸಿರಿನಿಂದ ಮೈನೆರೆದ ಕಾಡುಗಳು ಮಲೆನಾಡ ಸೊಬಗನ್ನು ಕಂಡು ಒಂದು ಕ್ಷಣ ಮಾತು ಮೌನವಾಗುವುದು ಕಂಡಿತ.
ಮಲೆನಾಡ ತಪ್ಪಲಿನಲ್ಲಿ ಇರುವ ಒಂದು ಪುಟ್ಟ ಹಳ್ಳಿ ಅಲ್ಲಿ ಜೀವನ ಸಾಗಿಸುತ್ತಿರುವ ಒಬ್ಬಳು ಮಹಾ ತಾಯಿ ಯ ಬಗ್ಗೆ ತಿಳಿಸುವ ಪುಟ್ಟ ಪ್ರಯತ್ನ ನಮ್ಮದು.

ಈ ಕಾಲ ಘಟ್ಟದಲ್ಲಿ ಅದೆಷ್ಟೋ ಜನ ತನ್ನ ಕೇಲಸ ಕಾರ್ಯಕ್ಕೆಂದು ಮುಗ್ಧ ಜನರನ್ನು ಬಳಸುವುದು ಸಾಮಾನ್ಯವಾಗಿದೆ.ಮೊದಲು ಹಾಗೂ ಕೊನೆಯಲ್ಲಿ ನಾವು ಮಾನವರು ಮಾತ್ರ.ಇಲ್ಲಿ ನಮ್ಮ ಓದಿನ ಬುದ್ಧಿ ಎಷ್ಟೆ ಇದ್ದರು ಅದಕ್ಕೆ ಮಾನವೀಯ ಗುಣಗಳು ಬದುಕಿನಲ್ಲಿ ಬೆರೆತರೆ ಮಾತ್ರ ಜೀವನಕ್ಕೆ ಒಂದು ಅರ್ಥ ಎಂದರೆ ತಪ್ಪಾಗಲಾರದು.
ಯಾರು ಯಾವುದರಿಂದಲೂ ಏನನ್ನು ಅಪೇಕ್ಷಿಸದೆ ದಯೆ, ಪ್ರೀತಿ, ಮಮತೆ, ನಿಸ್ವಾರ್ಥ,ಸೇವೆ ಸಲ್ಲಿಸಿದ್ದಾರೆ ಎಂದರೆ ಅದು ಅಕ್ಷರವಂಜಿತರು ಎಲ್ಲರನ್ನೂ ಸಮಾನವಾಗಿ ಕಾಣುವ ಶ್ರಮ ಜೀವಿಗಳು ಮಾತ್ರ ಇದು ಕಹಿಯಾದರೂ ಸತ್ಯ.
ಅವಳು ನಿರಾಭರಣೆ, ಆದರೆ ಬಂಗಾರದ ಮನಸುಳ್ಳವಳು.
ಕಣ್ಣಲ್ಲಿ ಕಲ್ಮಶಗಳಿಲ್ಲಿ, ಮಾತಿನಲ್ಲಿ ಕಪಟವಿಲ್ಲ, ಬದುಕು ಸಾಗಿಸಲು ಖಾಸಗಿ ಕಾಫಿ ತೋಟ ಲೈನ್ ಎಸ್ಟೇಟ್ ನಲ್ಲಿ ವಾಸ ಮಾಡುತ್ತಿರುವ ಸೂಲಗಿತ್ತಿ ಕಮಲಮ್ಮ ನವರು.
ಹೌದು ಮೂಡಿಗೆರೆ ತಾಲ್ಲೂಕಿನ ನಿಡುವಳೆ ಗ್ರಾಮ, ಜೋಗಿಮನೆ,ಉರ್ವಿಖಾನ್,ಮಾರ್ಕಲ್,ವಾಟೆಕಾನ್ ಗಳಂತಹ ಗುಡ್ಡಗಾಡಿನ ಪ್ರದೇಶ ಅದು ಇಲ್ಲಿ ರಸ್ತೆ ಇದ್ದರು ಜನವಸತಿ ಗೆ ಸಾರಿಗೆ ವ್ಯವಸ್ಥೆ ಇಲ್ಲ.ಅದರಲ್ಲು ಆಕ್ಸಿಡೆಂಟ್, ಮತ್ತು ತುರ್ತು ಚಿಕಿತ್ಸೆ ಮೂಡಿಗೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆಬರುವುದುಕಷ್ಟಸಾಧ್ಯ.ಅದರಲ್ಲೂ ಗರ್ಭಿಣಿಯನ್ನು ಸಾಗಿಸುವುದು ದುಸ್ತರವಾಗಿದೆ.ಅಂತಹ ಕಂಗೆಟ್ಟು ನಿಂತ ಕುಟುಂಬಗಳಿಗೆ ಆಸರೆಯಾಗಿ ನಿಂತವರು ಈ ಮಹಾ ತಾಯಿ.

ಈ ವರೆಗೆ ತನ್ನ ಹಸ್ತದಿಂದ ಸುಮಾರು 200ಕ್ಕು ಹೆಚ್ಚು ಹೇರಿಗೆ ಮಾಡಿಸಿ ಅಕ್ಷರಶಃ ಆ ಕುಟುಂಬದ ಪಾಲಿಗೆ ದೇವರಾಗಿದ್ದಾರೆ.
ಕೇಲವು ಸಂದರ್ಭದಲ್ಲಿ ನಿಡುವಾಳೆ ಪ್ರಾಥಮಿಕ ಆಸ್ಪತ್ರೆ ಯಲ್ಲಿ ವೈದ್ಯರು ಇಲ್ಲದ ಕಾರಣ ಕಮಲಮ್ಮ ನವರ ಮನೆಯಲ್ಲಿ ಹೇರಿಗೆ ಮಾಡಿಸಿದ ಉದಾಹರಣೆಗಳು ಸಾಕಷ್ಟಿವೆ. ಇವರ ಈ ಸೇವೆಯನ್ನು ಜನರು ಗುರುತಿಸಿ ಅವರನ್ನು ಗ್ರಾಮ ಪಂಚಾಯಿತಿ ಸದಸ್ಯರಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.ಇವರು ಈಗಲೂ ನಿಡುವಳೆ ಗ್ರಾಮದ ಪಂಚಾಯಿತಿ ಸದಸ್ಯರು.
ಕಮಲಮ್ಮ ನವರ ತಂದೆ ತಾಯಿಯರು ಮೂಲತಃ ಮಂಗಳೂರಿನವರು ಸಾರಾಮಾನಿ ದೈವ ಸಮಾಜದವರು ನಾವು ಸೇರಿ ಒಟ್ಟಿಗೆ ಏಳು ಜನ ಮಕ್ಕಳು ಇವರು ತನ್ನ ತಂದೆ ಹೇರಿಗೆ ಸಮಯದಲ್ಲಿ ನಾಟಿ ಔಷಧಿ ನಿಡುವುದು ಹೇರಿಗೆ ಮಾಡಿಸುವುದನ್ನು ಬಹಳ ಹತ್ತಿರದಿಂದ ನೋಡಿ ಅದನ್ನು ಕಲಿತಿದ್ದರು ಇವರ ಕೊನೆ ಯು ತಂಗಿ ಹೇರಿಗೆ ಸಮಯದಲ್ಲಿ ತಾಯಿ ಗೆ ಸುಮಾರು 12 ಘಂಟೆಗೆ ನೋವು ಕಾಣಿಸಿಕೊಂಡಿತು ಮಗುವು ಹೊಟ್ಟೆಯಲ್ಲಿ ತಿರುಗಿದ ಕಾರಣ ತಂದೆ ಏನು ಮಾಡಬೇಕು ಎಂದು ತೊಚದೆ ದೈವಗಳ ಮೋರೆಯೋದರು, ದೈವವನ್ನು ಶಪಿಸತೊಡಗಿದರು.ಈ ಕಡೆ ತನ್ನ ತಾಯಿ ಯು ನೋವಿನಿಂದ ನರಳುತಿರುದನ್ನು ನೋಡಲಾರದೆ ಮಗುವಿನ ಕಾಲನ್ನು ಹಿಡಿದು ಹೊರಗೆ ಎಳೆದರು ಮಗು ಹೋರಗೆ ಬಿತ್ತು ನಂತರ ತಂದೆ ತಾಯಿಯನ್ನು ಸ್ನಾನಕ್ಕೆ ಕರೆದುಕೊಂಡು ಹೋದರು.ಮಗುವಿಗೆ ಉಸಿರಾಟ ಇರಲಿಲ್ಲ. ‘ಅನ್ನ ಹೋದರೆ ಹೋಗಲಿ, ಮಡಕೆ ಉಳಿದರೆ ಸಾಕು (ಮಗು ಸತ್ತರೆ ಸಾಯಲಿ, ತಾಯಿ ಉಳಿದರೆ ಸಾಕು)’ ಎಂದು ಅಪ್ಪ ಹೇಳಿದರು. ಮಗುವಿನ ನೆತ್ತಿಗೆ ಹುರುವಿ, ಮೂಗಿಗೆ ಮೆತ್ತಿದ್ದ ರಕ್ತವರೆಸಿದೆ.ಆಗ ಉಸಿರಾಟ ಆರಂಭಿಸಿತು. ಸ್ವಲ್ಪ ಹೊತ್ತಿನ ನಂತರ ಅಳಲು ಶುರು ಮಾಡಿತು. ನಂತರ ಮಗುವಿಗೆ ಸ್ನಾನ ಮಾಡಿಸಿದೆವು. ಈಗಲೂ ತಂಗಿ ನಮ್ಮೊಂದಿಗೆ ಇದ್ದಾಳೆ’ ಎಂದು ಹೇಳುತ್ತಾರೆ ಇವರು.
‘ಅವ್ವನ ಹೆರಿಗೆ ಮಾಡಿಸಿದ ನಂತರ ಧೈರ್ಯ ಬಂತು. ಹೆರಿಗೆ ಮಾಡಿಸುವುದು ಹೇಗೆ ಎಂಬುದು ಗೊತ್ತಾಯಿತು. ಸುತ್ತಮುತ್ತಲ ಊರಿನಲ್ಲಿಯಾರಿಗೇ ಹೆರಿಗೆ ನೋವು ಕಾಣಿಸಿಕೊಂಡರೂ ನಾನೇ ಹೋಗುತ್ತಿದ್ದೆ. ಬಳಿಕ ಸೂಲಗಿತ್ತಿ ಕಮಲಮ್ಮಎಂದೇ ಎಲ್ಲರೂ ಕರೆಯಲಾರಂಭಿಸಿದರು.ನಾನು ಹೆರಿಗೆ ಮಾಡಿಸುವುದು ಎಂದರೆ ಗರ್ಭಿಣಿಯರಿಗೆ ವಿಶ್ವಾಸವಿತ್ತು. ಮಧ್ಯರಾತ್ರಿಯಲ್ಲಿ ಬಂದು ಬಾಗಿಲು ತಟ್ಟಿದರೂ ಹೋಗಿ ಹೆರಿಗೆ ಮಾಡಿಸಿದ್ದೇನೆ.ಎರಡು ಜೀವಗಳ ಉಳಿವಿನ ಪ್ರಶ್ನೆ ಆಗಿರುವುದರಿಂದ ಬೇರೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಎಲ್ಲವೂ ದೈವದ ಕೃಪೆ. ಯಾರೊಬ್ಬರಿಗೂ ತೊಂದರೆಯಾಗಿಲ್ಲ. ಹೆರಿಗೆ ಹತ್ತಿರವಾದಾಗ ಮುಂಚಿತವಾಗಿಯೇ ಜನ ತಿಳಿಸುತ್ತಿದ್ದರು.ಅವರ ಮನೆಯಲ್ಲೇ ಉಳಿದು ಹೆರಿಗೆ ಮಾಡಿಸುತ್ತಿದ್ದೆ. ದೈವವನ್ನು ನೆನಪಿಸಿಕೊಂಡು ಗರ್ಭಿಣಿ ಮಹಿಳೆಯನ್ನು ಮುಟ್ಟುತ್ತಿದ್ದೆ. ದೈವ ದ ದಯೆಯಿಂದ ಈವರೆಗಿನ ಎಲ್ಲಾ ಹೆರಿಗೆಗಳು ಸುಸೂತ್ರವಾಗಿ ನಡೆದಿವೆ. ತಂದೆ ಕೂಡ ಹೆರಿಗೆ ಮಾಡಿಸುತ್ತಿದ್ದರು. ನಂತರ ಬಾಣಂತಿಯರಿಗೆ ಔಷಧಿ ಕೊಡುತ್ತಿದ್ದರು.ಅವರು ಕೊಡುತ್ತಿದ್ದ ಔಷಧಿಗಳನ್ನು ನಾನೂ ಬಾಣಂತಿಯರಿಗೆ ಕೊಡ್ತಿದ್ದೆ. ಈಗ ಆಸ್ಪತ್ರೆಗಳು ಬಂದಿವೆ’ ಎಂದು ಕಮಲಮ್ಮವಿವರಿಸುತ್ತಾರೆ.
‘ಹೆರಿಗೆ ಮಾಡಿಸಿದ್ದಕ್ಕೆ ಇಷ್ಟೇ ಕೊಡಬೇಕು ಎಂದು ಯಾರನ್ನೂ ಕೇಳಿಲ್ಲ. ಅವರು ಪ್ರೀತಿಯಿಂದ ಕೊಟ್ಟಿದ್ದನ್ನ ಪಡೆದಿದ್ದೇನೆ. ಕೆಲವರು ಮೂರು ದಿನ ಉಳಿಯಲು ಹೇಳುತ್ತಿದ್ದರು. ಅವರ ಮನೆಯಲ್ಲೇ ಉಳಿದುಬಾಣಂತಿಗೆ ಸ್ನಾನ ಮಾಡಿಸಿ ಬರುತ್ತಿದ್ದೆ. ಈ ಕೆಲಸ ನಿರಂತರವಾಗಿ ನಡೆಯುತ್ತಿದ್ದರಿಂದ ಶಾಲೆಯ ಮುಖ ನೋಡದ ನನ್ನನ್ನು ಜನ ನರ್ಸಮ್ಮ, ಮೇಡಂ, ಡಾಕ್ಟರ್ ಎಂದೆಲ್ಲಾ ಕರೆದರು. ಹೆರಿಗೆ ಮಾಡಿಸಲು ಎಲ್ಲರ ಮನೆಗೆ ಹೋಗಿದ್ದೇನೆ, ಅಲ್ಲೇ ಉಳಿದಿದ್ದೇನೆ. ಆದರೆ ಯಾರೊಬ್ಬರೂ ಯಾವ ಜಾತಿ ಎಂದು ಕೇಳಿಲ್ಲ. ನಾನು ಹೆರಿಗೆ ಮಾಡಿಸಿದ ತಾಯಿ ಮತ್ತು ಮಗು ಈಗ ಸಿಕ್ಕರೂ ಗೌರವದಿಂದ ಕಾಣುತ್ತಾರೆ. ಈ ಕೆಲಸ ಮಾಡಿದ್ದಕ್ಕೆ ನನಗಂತೂ ಖುಷಿ ಇದೆ’ ಎನ್ನುತ್ತಾರೆ.

ಹೆರಿಗೆ ಮಾಡಿಸಿ ಜೀವ ಉಳಿಸಬೇಕು ಎಂಬ ಉತ್ಸಾಹ ಇದೆ. ಇತ್ತೀಚೆಗೆ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಬೇಕು ಎಂಬ ನಿಯಮ ಇರುವುದರಿಂದ ಮನೆಗಳಿಗೆ ಹೋಗಿ ಹೆರಿಗೆ ಮಾಡುವುದಿಲ್ಲ. ನಿಡವಾಳೆ ಆಸ್ಪತ್ರೆಯಲ್ಲಿ ಹಲವು ವರ್ಷ ಹೆರಿಗೆ ಸಹಾಯಕಿಯಾಗಿ ಕೆಲಸಮಾಡಿದ್ದೇನೆ. ಈಗ ಅಲ್ಲಿಗೂ ಹೋಗುತ್ತಿಲ್ಲ ಎಂದು ವಿವರಿಸುತ್ತಾರೆ.
ಇವರು ಸಣ್ಣ ವಯಸ್ಸಿನಲ್ಲೇ ಕೆಲಸಕ್ಕೆ ಎಂದು ಮಲೆನಾಡ ಭಾಗಕ್ಕೆ ವಲಸೆ ಬಂದವರು ಅಂದಿನಿಂದ ಇಂದಿನವರೆಗೂ ನಿರಾತಂಕವಾಗಿ ಕಾಫಿ ತೋಟದಲ್ಲಿ ದುಡಿಯುವ ಇವರು ಸಣ್ಣ ವಯಸ್ಸಿನಲ್ಲೇ ಸುಮಾರು 12 ವರ್ಷ ತುಂಬಿರುವಾಗ ತನ್ನ ತಾಯಿಗೆ ಹೇರಿಗೆ ಮಾಡಿಸಿ ತಾಯಿ ಗೆ ತಾಯಿಯಾದವಳಿಕೆ. ಅಂದಿನಿಂದ ಈ ಕಾಯಕದಲ್ಲಿ ತೊಡಗಿರುವ ಇವರು ಯಾವುದೇ ಒಂದನ್ನು ಅಪೆಕ್ಷಿಸದೆ ನಿಸ್ವಾರ್ಥ ಸೌಹೃದಯ ಸೇವೆಯನ್ನು ಈಗಲೂ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಆದರು ಇವರ ಸೇವೆ ಸರ್ಕಾರ ಕ್ಕೆ ಇತ್ತಿಚೆಗೆ ಅಷ್ಟೇ ತಿಳಿದುಬಂದಿದೆ ಎಂದರೆ ಇದು ಶೊಚನೀಯ ಸಂಗತಿ.ಸರಕಾರವು ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಿ ಸಾಧಕರನ್ನು ಗುರುತಿಸಲಿ ಎಂದು ಈ ಮೂಲಕ ನಾವು ಆಶಿಸುತ್ತೇವೆ. ಪ್ರಜಾವಾಣಿ ದಿನಪತ್ರಿಕೆ ಆಯೋಜಿಸಿದ್ದ ಮೈಸೂರಿನಲ್ಲಿ 28/04/2026 ಶನಿವಾರ ನಡೆದ ‘ಪ್ರಜಾವಾಣಿ ಸಾಧಕಿಯರು-2026’ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರು ಕಮಲಮ್ಮ ಅವರು ಮಾಡಿದ ನಿಸ್ವಾರ್ಥ ಸೇವೆ ಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದರು ಇದು ನಮ್ಮ ಸುತ್ತಮುತ್ತಲಿನ ಇಂತಹ ಹಲವಾರು ನಿದರ್ಶನಗಳಿವೆ ಆದರೆ ಇಲ್ಲಿ ನಾವು ಹೇಳಿದ ಸತ್ಯ ಕಥೆ ತಾಯಿ ಗೆ ತಾಯಿಯಾದವಳ ಸಾದನೆಯ ಕಥೆ.
ವರದಿ: ಕಾರ್ತಿಕ್ ಸೀನಾ. ತೋಳೂರು ಗುಡ್ಡ ಗ್ರಾಮ.
ಚಿಕ್ಕಮಗಳೂರು ತಾಲೂಕು /ಜಿಲ್ಲೆ.