ಮೂಡಿಗೆರೆ, ನವೆಂಬರ್ 25:
ಚಿಕ್ಕಮಗಳೂರು ಜಿಲ್ಲಾ ಆನೆ ಕಾರ್ಯಪಡೆ ಹಾಗೂ ಮೂಡಿಗೆರೆ ಅರಣ್ಯ ಇಲಾಖೆಯ ಪ್ರಕಟಣೆಯ ಪ್ರಕಾರ, ಘಟ್ಟದಹಳ್ಳಿ ಎಸ್ಟೇಟ್ ಹಾಗೂ ಮಾಕೋನಹಳ್ಳಿಯ ಡಾ. ಭರತ್ ಅವರ ತೋಟದಲ್ಲಿ ಕಾಡಾನೆಗಳ ಗುಂಪು ಕಾಣಿಸಿಕೊಂಡಿದೆ.

ಈ ಹಿನ್ನೆಲೆಯಲ್ಲಿ ಬಾರದಹಳ್ಳಿ, ಮಾಕೋನಹಳ್ಳಿ, ಹೊರಟ್ಟಿ, ಚಂದ್ರಪುರ, ಘಟ್ಟದಹಳ್ಳಿ, ಕೇಲ್ಲೂರು, ದುಂಡುಗ, ಕುನ್ನಹಳ್ಳಿ ಹಾಗೂ ಹಳಸೆ ಗ್ರಾಮಗಳ ಸುತ್ತಮುತ್ತಲಿನ ನಿವಾಸಿಗಳು ಹೆಚ್ಚಿನ ಜಾಗರೂಕತೆ ವಹಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.

ಕಾಡಾನೆಗಳ ಸಂಚಾರವಿರುವ ಪ್ರದೇಶಗಳಲ್ಲಿ ಸಾರ್ವಜನಿಕರು ಅನಗತ್ಯವಾಗಿ ಸಂಚರಿಸದಂತೆ, ರಾತ್ರಿ ಸಮಯದಲ್ಲಿ ವಿಶೇಷ ಎಚ್ಚರಿಕೆ ವಹಿಸುವಂತೆ ಹಾಗೂ ತೋಟ, ಗದ್ದೆ ಮತ್ತು ಎಸ್ಟೇಟ್ ಕೆಲಸಗಳಿಗೆ ತೆರಳುವವರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಕೋರಲಾಗಿದೆ.

ತಮ್ಮ ಗ್ರಾಮಗಳ ಸುತ್ತಮುತ್ತ ಕಾಡಾನೆಗಳ ಸಂಚಾರ ಕಂಡುಬಂದಲ್ಲಿ ತಕ್ಷಣವೇ ಜಿಲ್ಲಾ ಆನೆ ಕಾರ್ಯಪಡೆ ಚಿಕ್ಕಮಗಳೂರು ತಂಡಕ್ಕೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ.

ತುರ್ತು ಸಂಪರ್ಕ ಸಂಖ್ಯೆ: 7204004261

ಕಾಡಾನೆಗಳ ಚಲನವಲನದ ಬಗ್ಗೆ ಮಾಹಿತಿ ದೊರೆತ ತಕ್ಷಣ ಅರಣ್ಯ ಇಲಾಖೆಗೆ ತಿಳಿಸುವ ಮೂಲಕ ಸಾರ್ವಜನಿಕರು ಸಹಕರಿಸಬೇಕೆಂದು ಜಿಲ್ಲಾ ಆನೆ ಕಾರ್ಯಪಡೆ ಹಾಗೂ ಮೂಡಿಗೆರೆ ಅರಣ್ಯ ಇಲಾಖೆ ಮನವಿ ಮಾಡಿದೆ.

ಪ್ರಕಟಣೆಯ ಸಮಯ: 25-11-2026, ರಾತ್ರಿ 08:55.