ಸುತ್ತಮುತ್ತಲಿನ ಗ್ರಾಮಸ್ಥರಿಗೆ ಜಿಲ್ಲಾ ಆನೆ ಕಾರ್ಯಪಡೆಯಿಂದ ಎಚ್ಚರಿಕೆ!

ಚಿಕ್ಕಮಗಳೂರು, ನವೆಂಬರ್ 27: ಮತ್ತಾವರ ಬಿದಿರು ಪ್ಲಾಂಟೇಷನ್ ಸುತ್ತಮುತ್ತ ಒಂಟಿ ಕಾಡಾನೆಯೊಂದು ಸಂಚರಿಸುತ್ತಿರುವುದಾಗಿ ಜಿಲ್ಲಾ ಆನೆ ಕಾರ್ಯಪಡೆ ಚಿಕ್ಕಮಗಳೂರು ಮಾಹಿತಿ ನೀಡಿದೆ.

ಮತ್ತಾವರ, ಬಾಚಿಗನಹಳ್ಳಿ, ಮಾರಿಕಟ್ಟೆ, ಆಲದಗುಡ್ಡೆ, ದಂಬದಹಳ್ಳಿ, ಹುಕ್ಕುಂದ, ನೆಲ್ಲೂರು ಹಾಗೂ ಇಂದಾವರ ಗ್ರಾಮಗಳ ಸುತ್ತಮುತ್ತ ಕಾಡಾನೆ ಸಂಚರಿಸುವ ಸಾಧ್ಯತೆ ಇರುವುದರಿಂದ ಈ ಭಾಗದ ಗ್ರಾಮಸ್ಥರು ಮತ್ತು ಸಾರ್ವಜನಿಕರು ಹೆಚ್ಚಿನ ಜಾಗ್ರತೆ ವಹಿಸುವಂತೆ ಎಚ್ಚರಿಕೆ ನೀಡಲಾಗಿದೆ.

ಈ ಗ್ರಾಮಗಳ ಸುತ್ತಮುತ್ತ ಸಂಚರಿಸುವ ವಾಹನ ಸವಾರರು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು. ಮುನ್ನೆಚ್ಚರಿಕಾ ಕ್ರಮವಾಗಿ ಸುತ್ತಮುತ್ತಲಿನ ತೋಟಗಳಲ್ಲಿ ಯಾರೂ ಕೆಲಸ ನಿರ್ವಹಿಸಬಾರದು ಎಂದು ಆನೆ ಕಾರ್ಯಪಡೆ ಮನವಿ ಮಾಡಿದೆ.

ಗ್ರಾಮಗಳ ವ್ಯಾಪ್ತಿಯಲ್ಲಿ ಕಾಡಾನೆ ಸಂಚಾರ ಕಂಡುಬಂದಲ್ಲಿ ತಕ್ಷಣ ಜಿಲ್ಲಾ ಆನೆ ಕಾರ್ಯಪಡೆಯ ದೂರವಾಣಿ ಸಂಖ್ಯೆ 7204004261 ಸಂಪರ್ಕಿಸಿ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಕೋರಲಾಗಿದೆ.

ಪ್ರಕಟಣೆ: ಜಿಲ್ಲಾ ಆನೆ ಕಾರ್ಯಪಡೆ, ಚಿಕ್ಕಮಗಳೂರು.

ದಿನಾಂಕ: 27-11-2026
ಸಮಯ: ಬೆಳಿಗ್ಗೆ 11:19.