ಐಪಿಎಲ್ 2026: ಸನ್‌ರೈಸರ್ಸ್ ಹೈದರಾಬಾದ್ (SRH) vs ಕೋಲ್ಕತ್ತಾ ನೈಟ್ ರೈಡರ್ಸ್ (KKR)
ಪಂದ್ಯದ ಸಂಕ್ಷಿಪ್ತ ವಿವರ:
🔹ದಿನಾಂಕ:  03 ಮೇ 2026 (ಭಾನುವಾರ) ಸ್ಥಳ: ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ಹೈದರಾಬಾದ್
🔹ಟಾಸ್: ಸನ್‌ರೈಸರ್ಸ್ ಹೈದರಾಬಾದ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.
🔹ಫಲಿತಾಂಶ: ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡಕ್ಕೆ 7 ವಿಕೆಟ್‌ಗಳ ಭರ್ಜರಿ ಜಯ.
🔹ಪಂದ್ಯಶ್ರೇಷ್ಠ (Player of the Match): ವರುಣ್ ಚಕ್ರವರ್ತಿ (3/36)

🔹ಮೊದಲ ಇನ್ನಿಂಗ್ಸ್: ಸನ್‌ರೈಸರ್ಸ್ ಹೈದರಾಬಾದ್ (SRH) ಬ್ಯಾಟಿಂಗ್
ಸ್ಕೋರ್: 19 ಓವರ್‌ಗಳಲ್ಲಿ 165 ರನ್‌ಗಳಿಗೆ ಆಲೌಟ್.
🔹ಆರಂಭಿಕ ಅಬ್ಬರ ಹಾಗೂ ದಿಢೀರ್ ಕುಸಿತ: ಸನ್‌ರೈಸರ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ಟ್ರಾವಿಸ್ ಹೆಡ್ ಕೇವಲ 28 ಎಸೆತಗಳಲ್ಲಿ ಬಿರುಸಿನ 61 ರನ್ (9 ಬೌಂಡರಿ, 3 ಸಿಕ್ಸರ್) ಸಿಡಿಸಿದರು. ಅವರಿಗೆ ಇಶಾನ್ ಕಿಶನ್ (29 ಎಸೆತಗಳಲ್ಲಿ 42 ರನ್) ಅತ್ಯುತ್ತಮ ಸಾಥ್ ನೀಡಿದರು. 9 ಓವರ್‌ಗಳಲ್ಲಿ 105/1 ರನ್ ಗಳಿಸಿ ಬೃಹತ್ ಮೊತ್ತದತ್ತ ಮುಖಮಾಡಿದ್ದ SRH, ಕೆಕೆಆರ್ ಸ್ಪಿನ್ನರ್‌ಗಳ ದಾಳಿಗೆ ತತ್ತರಿಸಿತು. ಕೇವಲ 60 ರನ್‌ಗಳ ಅಂತರದಲ್ಲಿ ಕೊನೆಯ 9 ವಿಕೆಟ್‌ಗಳನ್ನು ಕಳೆದುಕೊಂಡು ತೀವ್ರ ಕುಸಿತ ಕಂಡಿತು.
🔹ಕೆಕೆಆರ್ ಬೌಲಿಂಗ್ ಪ್ರದರ್ಶನ: ವರುಣ್ ಚಕ್ರವರ್ತಿ ತಮ್ಮ ಸ್ಪಿನ್ ಮೋಡಿಯ ಮೂಲಕ 4 ಓವರ್‌ಗಳಲ್ಲಿ 36 ರನ್ ನೀಡಿ ಪ್ರಮುಖ 3 ವಿಕೆಟ್ ಕಬಳಿಸಿದರು. ಸುನಿಲ್ ನರೈನ್ (2/31) ಮತ್ತು ಕಾರ್ತಿಕ್ ತ್ಯಾಗಿ (2/30) ಕೂಡ ಉತ್ತಮ ಬೆಂಬಲ ನೀಡಿ ಹೈದರಾಬಾದ್ ರನ್ ವೇಗಕ್ಕೆ ಕಡಿವಾಣ ಹಾಕಿದರು.
🔹 ಎರಡನೇ ಇನ್ನಿಂಗ್ಸ್: ಕೋಲ್ಕತ್ತಾ ನೈಟ್ ರೈಡರ್ಸ್ (KKR) ಚೇಸಿಂಗ್
ಸ್ಕೋರ್: 18.2 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 169 ರನ್.

🔹ಬಿರುಸಿನ ಆರಂಭ: 166 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಕೆಕೆಆರ್‌ಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ಫಿನ್ ಅಲೆನ್ (13 ಎಸೆತಗಳಲ್ಲಿ 29 ರನ್) ಸ್ಪೋಟಕ ಆರಂಭ ಒದಗಿಸಿದರು.
🔹ನಿರ್ಣಾಯಕ ಜೊತೆಯಾಟ:ನಾಯಕ ಅಜಿಂಕ್ಯ ರಹಾನೆ (36 ಎಸೆತಗಳಲ್ಲಿ 43 ರನ್) ಹಾಗೂ ಯುವ ಆಟಗಾರ ಅಂಗ್‌ಕ್ರಿಶ್ ರಘುವಂಶಿ (47 ಎಸೆತಗಳಲ್ಲಿ 59 ರನ್) ಅತ್ಯಂತ ಜವಾಬ್ದಾರಿಯುತ ಆಟವಾಡಿದರು. ಇವರಿಬ್ಬರು ಎರಡನೇ ವಿಕೆಟ್‌ಗೆ 84 ರನ್‌ಗಳ ನಿರ್ಣಾಯಕ ಜೊತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನ ಹೊಸ್ತಿಲಿಗೆ ತಂದರು.
ಫಿನಿಶಿಂಗ್ ಟಚ್:ಅಂತಿಮ ಹಂತದಲ್ಲಿ ಕ್ರೀಸ್‌ಗೆ ಬಂದ ರಿಂಕು ಸಿಂಗ್ ಕೇವಲ 11 ಎಸೆತಗಳಲ್ಲಿ ಅಜೇಯ 22 ರನ್ (2 ಬೌಂಡರಿ, 1 ಸಿಕ್ಸರ್) ಸಿಡಿಸುವ ಮೂಲಕ ಇನ್ನೂ 10 ಎಸೆತಗಳು ಬಾಕಿ ಇರುವಂತೆಯೇ ತಂಡಕ್ಕೆ ಗೆಲುವಿನ ಕಿರೀಟ ತೊಡಿಸಿದರು.
ಪಂದ್ಯದ ಪ್ರಮುಖ ಅಂಶಗಳು:
🔹ಈ ಪಂದ್ಯದ ಗೆಲುವಿನೊಂದಿಗೆ KKR ತಂಡ ಪ್ಲೇ-ಆಫ್ ರೇಸ್‌ನಲ್ಲಿ ತನ್ನ ಭರವಸೆಯನ್ನು ಜೀವಂತವಾಗಿರಿಸಿಕೊಂಡಿತು.
🔹ಅತ್ಯುತ್ತಮ ಫಾರ್ಮ್‌ನಲ್ಲಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸತತ 5 ಪಂದ್ಯಗಳ ಗೆಲುವಿನ ಓಟಕ್ಕೆ ಈ ಪಂದ್ಯದಲ್ಲಿ ಬ್ರೇಕ್ ಬಿತ್ತು.
* ಬ್ಯಾಟಿಂಗ್‌ಗೆ ಹೇಳಿಮಾಡಿಸಿದಂತಿದ್ದ ಪಿಚ್‌ನಲ್ಲಿ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರ ಬೌಲಿಂಗ್ ಪಂದ್ಯದ ಸಂಪೂರ್ಣ ಗತಿಯನ್ನೇ ಬದಲಿಸಿತು. ರೋವ್‌ಮನ್ ಪೊವೆಲ್ ಅವರ ಅದ್ಭುತ ಒಂಟಿ ಕೈ ಕ್ಯಾಚ್ ಕೂಡ ಪಂದ್ಯದ ಹೈಲೈಟ್ಸ್‌ನಲ್ಲಿ ಒಂದಾಗಿತ್ತು.