ಅಹಮದಾಬಾದ್ : ನಿನ್ನೆ ನಡೆದ ಐಪಿಎಲ್ 2026ರ 56ನೇ ಪಂದ್ಯದಲ್ಲಿ Sunrisers ಹೈದೆರಾಬಾದ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ 82 ರನ್‌ಗಳ ಭರ್ಜರಿ ಜಯ ಸಾಧಿಸಿತು.

ಪಂದ್ಯದ ಸ್ಕೋರ್
ಗುಜರಾತ್ ಟೈಟನ್ಸ್ – 168/5 (20 ಓವರ್)

Sunrisers ಹೈದೆರಾಬಾದ್ – 86 ಆಲ್ ಔಟ್ (14.5 ಓವರ್)

ಗುಜರಾತ್ ಟೈಟನ್ಸ್ 82 ರನ್‌ಗಳಿಂದ ಗೆದ್ದಿತು.

ಟಾಸ್
SRH ನಾಯಕ ಪಾಟ್ ಕಮ್ಮಿನ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು.

ಗುಜರಾತ್ ಟೈಟನ್ಸ್ ಬ್ಯಾಟಿಂಗ್…
ಆರಂಭದಲ್ಲೇ ಶುಭಮನ್ ಗಿಲ್ ಮತ್ತು ಜೋಸ್ Buttler ಔಟ್ ಆದ ಕಾರಣ GT ಒತ್ತಡಕ್ಕೆ ಸಿಲುಕಿತ್ತು. ಆದರೆ ನಂತರ ಸಾಯಿ ಸುಧರ್ಶನ್ ಮತ್ತು ವಾಷಿಂಗ್ಟನ್ ಸುಂದರ್ ಅದ್ಭುತ ಜೊತೆಯಾಟ ನೀಡಿ ತಂಡವನ್ನು ಉತ್ತಮ ಮೊತ್ತಕ್ಕೆ ಕೊಂಡೊಯ್ದರು.

ಪ್ರಮುಖ ಬ್ಯಾಟಿಂಗ್..
ಸಾಯಿ ಸುಧರ್ಶನ್ – 61 ರನ್,ವಾಷಿಂಗ್ಟನ್ ಸುಂದರ್ – 50 ರನ್,GT 20 ಓವರ್‌ಗಳಲ್ಲಿ 168/5 ರನ್ ಗಳಿಸಿತು.

ಸನ್‌ರೈಸರ್ಸ್ ಹೈದರಾಬಾದ್ ಬ್ಯಾಟಿಂಗ್ ಕುಸಿತ
169 ರನ್ ಗುರಿ ಬೆನ್ನಟ್ಟಿದ SRH ಆರಂಭದಿಂದಲೇ ವಿಕೆಟ್ ಕಳೆದುಕೊಂಡಿತು.

ಟ್ರಾವಿಶ್ ಹೆಡ್ – 0,ಅಭಿಷೇಕ್ ಶರ್ಮ – 6,ಇಶಾನ್ ಕಿಶನ್ – 11.GT ಬೌಲರ್‌ಗಳ ದಾಳಿಗೆ SRH ಕೇವಲ 86 ರನ್‌ಗೆ ಆಲ್ ಔಟ್ ಆಯಿತು.

ಬೌಲಿಂಗ್ ಹೀರೋಗಳು..
ಕಗಿಸೋ ರಬದ – 3 ವಿಕೆಟ್,ಜಸನ್ ಹೋಲ್ಡರ್ – 3 ವಿಕೆಟ್, ಮೊಹಮ್ಮದ್ ಸಿರಾಜ್ ಆರಂಭಿಕ ವಿಕೆಟ್ ಪಡೆದು ಒತ್ತಡ ಸೃಷ್ಟಿಸಿದರು.

ಪಂದ್ಯ ಶ್ರೇಷ್ಠ
ನಾಯಕ ಶುಭಮನ್ ಗಿಲ್.

ವಿಶೇಷ ಮಾಹಿತಿ..
ಈ ಜಯದೊಂದಿಗೆ ಗುಜರಾತ್ ಟೈಟನ್ಸ್ ಪಾಯಿಂಟ್ ಟೇಬಲ್‌ನಲ್ಲಿ ಮೊದಲ ಸ್ಥಾನಕ್ಕೇರಿತು. SRH ಪ್ಲೇಆಫ್ ಅವಕಾಶಕ್ಕೆ ದೊಡ್ಡ ಹೊಡೆತ ಬಿತ್ತು.