ಮೂಡಿಗೆರೆ: ಹಳಸೆ ಭಾಗದಿಂದ ಎರಡು ಕಾಡಾನೆಗಳು ಮಣ್ಣಿಕೆರೆ ರಸ್ತೆಯನ್ನು ದಾಟಿ ಭದ್ರಾಪುರ ಎಸ್ಟೇಟ್ ಕಡೆಗೆ ಸಂಚರಿಸುತ್ತಿರುವುದು ಕಂಡುಬಂದಿದೆ.
ಈ ಹಿನ್ನೆಲೆಯಲ್ಲಿ ಚಂದ್ರಪುರ, ಶುಭನಗರ, ಮಣ್ಣಿಕೆರೆ, ಭದ್ರಾಪುರ ಎಸ್ಟೇಟ್ ಹಾಗೂ ಜಾಗರಖಾನ್ ಸುತ್ತಮುತ್ತಲಿನ ಗ್ರಾಮಸ್ಥರು, ಕಾರ್ಮಿಕರು ಹಾಗೂ ವಾಹನ ಸವಾರರು ಹೆಚ್ಚಿನ ಎಚ್ಚರಿಕೆಯಿಂದ ಸಂಚರಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.
ಕಾಡಾನೆಗಳು ಕಂಡುಬಂದಲ್ಲಿ ಸಾರ್ವಜನಿಕರು ಅವುಗಳ ಸಮೀಪ ತೆರಳದೆ, ತಕ್ಷಣ ಆನೆ ಕಾರ್ಯಪಡೆ ನಿಯಂತ್ರಣ ಕೊಠಡಿ: 7204004261 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ತಿಳಿಸಲಾಗಿದೆ.
ದಿನಾಂಕ: 18.08.2026
ಸಮಯ: ಮಧ್ಯಾಹ್ನ 03:15.
ಕಾಡಾನೆಗಳ ಸಂಚಾರ – ಅರಣ್ಯ ಇಲಾಖೆ ಎಚ್ಚರಿಕೆ ಪ್ರಕಟಣೆ
GNE UPDATES
ಇತ್ತೀಚಿನ ಸುದ್ದಿ