ಮೂಡಿಗೆರೆ, ಆಗಸ್ಟ್ 25, 2026: ಭುವನೇಶ್ವರಿ ಗುಂಪಿನ ಕಾಡಾನೆಗಳು ದೊಡ್ಡಗಳ್ಳ ಎಸ್ಟೇಟ್ ಕಡೆಯಿಂದ ಬೇಲೂರು–ಮೂಡಿಗೆರೆ ರಸ್ತೆಯನ್ನು ದಾಟಿ ಕಲ್ಲುಗುಡ್ಡ ಭಾಗದ ಕಡೆಗೆ ಸಂಚರಿಸುತ್ತಿರುವುದು ಕಂಡುಬಂದಿದೆ ಎಂದು ಮೂಡಿಗೆರೆ ಅರಣ್ಯ ಇಲಾಖೆ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಕಸ್ಕೆಬೈಲ್, ಕಲ್ಲುಗುಡ್ಡ, ಚಟ್ಟನಹಳ್ಳಿ, ಹಾಸ್ಟೆಲ್ ಕಾಡು, ಗೌತಳ್ಳಿ, ಬೇವಿನ ಗುಡ್ಡೆ, ಹುಲಿಹಂಡ್ಲು ಎಸ್ಟೇಟ್ ಹಾಗೂ ಕಾರಬೈಲು ಗ್ರಾಮಗಳ ಸುತ್ತಮುತ್ತಲಿನ ಗ್ರಾಮಸ್ಥರು, ಕಾರ್ಮಿಕರು ಹಾಗೂ ವಾಹನ ಸವಾರರು ಅತ್ಯಂತ ಎಚ್ಚರಿಕೆಯಿಂದ ಸಂಚರಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.

ಕಾಡಾನೆಗಳು ಕಂಡುಬಂದಲ್ಲಿ ಸಾರ್ವಜನಿಕರು ಅವುಗಳ ಸಮೀಪಕ್ಕೆ ತೆರಳದೆ, ತಕ್ಷಣ ಆನೆ ಕಾರ್ಯಪಡೆ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 7204004261ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

ಪ್ರಕಟಣೆ ಸಮಯ: 25-08-2026, ರಾತ್ರಿ 10:20.