ಮೂಡಿಗೆರೆ, ಸೆಪ್ಟೆಂಬರ್ 04:
ಮೂಡಿಗೆರೆ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಒಂಟಿ ಕಾಡಾನೆಯೊಂದು ಜಿ. ಹೊಸಹಳ್ಳಿ ಟಾಟಾ ಎಸ್ಟೇಟ್ ಹಾಗೂ ಮಜರ್ ಸಾಬ್ರು ಅವರ ತೋಟದ ಕಡೆಗೆ ಸಂಚರಿಸುತ್ತಿರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು, ಕಾರ್ಮಿಕರು ಹಾಗೂ ವಾಹನ ಸವಾರರು ಅತ್ಯಂತ ಎಚ್ಚರಿಕೆಯಿಂದ ಇರಬೇಕೆಂದು ಅರಣ್ಯ ಇಲಾಖೆ ಮನವಿ ಮಾಡಿದೆ.
ಕಾಡಾನೆಯು ಟಾಟಾ ಕಾಫಿ ಎಸ್ಟೇಟ್ ಜಿ. ಹೊಸಹಳ್ಳಿ, ಸಿಲ್ವರ್ ಖಾನ್ ಎಸ್ಟೇಟ್, ಪೋಡಿಯ ಕಾಲೋನಿ, ದಿಣ್ಣೆಕೆರೆ ಹಾಗೂ ಕೆಮ್ಮಣ್ಣುಗಂಡಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚರಿಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ವಿಶೇಷವಾಗಿ ಬೆಳಗಿನ ಜಾವ ಹಾಗೂ ರಾತ್ರಿ ಸಮಯದಲ್ಲಿ ಸಂಚರಿಸುವಾಗ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು. ಕಾಡಾನೆ ಕಂಡುಬಂದಲ್ಲಿ ಅದರ ಸಮೀಪಕ್ಕೆ ತೆರಳದೆ, ಕಾಡಾನೆಯನ್ನು ಕೆಣಕದೆ ತಕ್ಷಣವೇ ಅರಣ್ಯ ಇಲಾಖೆಯ ಆನೆ ಕಾರ್ಯಪಡೆ ನಿಯಂತ್ರಣ ಕೊಠಡಿಗೆ 7204004261 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ತಿಳಿಸಲಾಗಿದೆ.
ದಿನಾಂಕ: 04-09-2026
ಸಮಯ: ಬೆಳಿಗ್ಗೆ 07:40.
ಕಾಡಾನೆ ಸಂಚಾರ: ಗ್ರಾಮಸ್ಥರು, ಕಾರ್ಮಿಕರು ಹಾಗೂ ವಾಹನ ಸವಾರರಿಗೆ ಅರಣ್ಯ ಇಲಾಖೆ ಎಚ್ಚರಿಕೆ!
GNE UPDATES
ಇತ್ತೀಚಿನ ಸುದ್ದಿ