ಮೂಡಿಗೆರೆ, ಸೆ.18: ಕಾರ್ ಬೈಲು ಗ್ರಾಮದ ಶಿವಾನಂದ್ ಅವರ ತೋಟದಲ್ಲಿ ಕಾಣಿಸಿಕೊಂಡಿರುವ ಒಂಟಿ ಕಾಡಾನೆಯೊಂದು ಕಾರ್ ಬೈಲು, ಮೂಡಸಸಿ, ಗಬ್ಬಳ್ಳಿ, ಪುರ, ಹುಲಿಹಂಡ್ಲು ಎಸ್ಟೇಟ್, ಚಟ್ಟನಹಳ್ಳಿ, ಗೌತಹಳ್ಳಿ ಹಾಗೂ ಕಲ್ಲುಗುಡ್ಡ ಗ್ರಾಮಗಳ ಕಡೆಗೆ ಸಂಚರಿಸುವ ಸಾಧ್ಯತೆ ಇರುವುದಾಗಿ ಮೂಡಿಗೆರೆ ಅರಣ್ಯ ಇಲಾಖೆ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಮೇಲ್ಕಂಡ ಗ್ರಾಮಗಳ ಸುತ್ತಮುತ್ತ ವಾಸಿಸುವ ಗ್ರಾಮಸ್ಥರು, ತೋಟ ಕಾರ್ಮಿಕರು ಹಾಗೂ ವಾಹನ ಸವಾರರು ಹೆಚ್ಚಿನ ಎಚ್ಚರಿಕೆಯಿಂದ ಸಂಚರಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ. ವಿಶೇಷವಾಗಿ ರಾತ್ರಿ ಸಮಯದಲ್ಲಿ ಕಾಡಾನೆ ಸಂಚಾರದ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಕಾಡಾನೆ ಕಂಡುಬಂದಲ್ಲಿ ಸಾರ್ವಜನಿಕರು ಅದರ ಸಮೀಪ ಹೋಗದೆ, ಕಾಡಾನೆಯನ್ನು ಕೆಣಕದೆ ಅಥವಾ ಹಿಂಬಾಲಿಸದೆ, ತಕ್ಷಣ ಆನೆ ಕಾರ್ಯಪಡೆ ನಿಯಂತ್ರಣ ಕೊಠಡಿ – 7204004261 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.

ದಿನಾಂಕ: 18.09.2026
ಸಮಯ: ರಾತ್ರಿ 08:35.