ಮೂಡಿಗೆರೆ, ಆಗಸ್ಟ್ 31:
ಭುವನೇಶ್ವರಿ ಗುಂಪಿನ ಕಾಡಾನೆಗಳು ಪೋಡಿಯ ಕಾಲೋನಿ ಗುಡ್ಡದ ಕಾಡು ಪ್ರದೇಶದಲ್ಲಿ ಕಂಡುಬಂದಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚರಿಸುತ್ತಿರುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಕಾಡಾನೆಗಳ ಸಂಚಾರದ ಹಿನ್ನೆಲೆಯಲ್ಲಿ ಜಿ. ಹೊಸಹಳ್ಳಿ, ಹೊಸಪುರ, ಪೋಡಿಯ ಕಾಲೋನಿ ಹಾಗೂ ಟಾಟಾ ಕಾಫಿ ಎಸ್ಟೇಟ್, ಜಿ. ಹೊಸಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು, ಕಾರ್ಮಿಕರು ಹಾಗೂ ವಾಹನ ಸವಾರರು ಅತ್ಯಂತ ಜಾಗರೂಕತೆಯಿಂದ ಸಂಚರಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.
ಕಾಡಾನೆಗಳು ಕಂಡುಬಂದಲ್ಲಿ ಅವುಗಳ ಸಮೀಪ ಹೋಗದೆ, ಅವುಗಳನ್ನು ಕೆಣಕದಂತೆ ಎಚ್ಚರಿಕೆ ವಹಿಸಿ, ತಕ್ಷಣವೇ ಆನೆ ಕಾರ್ಯಪಡೆ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 7204004261 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಇಲಾಖೆ ಸೂಚಿಸಿದೆ.
ದಿನಾಂಕ: 31-08-2026 | ಸಮಯ: ಬೆಳಿಗ್ಗೆ 7:10.
ಕಾಡಾನೆಗಳ ಸಂಚಾರ: ಸಾರ್ವಜನಿಕರಿಗೆ ಅರಣ್ಯ ಇಲಾಖೆ ಎಚ್ಚರಿಕೆ!
GNE UPDATES
ಇತ್ತೀಚಿನ ಸುದ್ದಿ