ಶೃಂಗೇರಿ, ಆ.31: ಬಹುಜನ ಸಮಾಜ ಪಾರ್ಟಿಯ ಶೃಂಗೇರಿ ತಾಲ್ಲೂಕು ಸಭೆಯು ಇಂದು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ತಾಲ್ಲೂಕು ಅಧ್ಯಕ್ಷರಾದ ಶೀಲಾ ಸುಕೇಶ್ ವಹಿಸಿದ್ದರು.

ಸಭೆಯಲ್ಲಿ ಜಿಲ್ಲಾ ಸಂಯೋಜಕರು ಹಾಗೂ ಶೃಂಗೇರಿ ಉಸ್ತುವಾರಿಗಳಾದ ಯು.ಬಿ. ಮಂಜಯ್ಯ, ಜಿಲ್ಲಾ ಅಧ್ಯಕ್ಷರಾದ ಪಿ. ಪರಮೇಶ್ವರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಶೃಂಗೇರಿ ಉಸ್ತುವಾರಿಗಳಾದ ಪಿ.ಕೆ. ಮಂಜುನಾಥ್, ಹಿರಿಯ ನಾಯಕರಾದ ಕೆ.ಎಂ. ಗೋಪಾಲ್, ಜಿಲ್ಲಾ ಕಾರ್ಯದರ್ಶಿ ಕಿರಣ್ ಬಿ.ಟಿ., ತಾಲ್ಲೂಕು ಉಪಾಧ್ಯಕ್ಷರಾದ ಮಹೇಶ್, ಶೇಖರ್ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಹಾಗೂ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.
ಸಭೆಯಲ್ಲಿ ಹೊಸದಾಗಿ ಶೃಂಗೇರಿ ತಾಲ್ಲೂಕು ಸಮಿತಿಯನ್ನು ರಚಿಸಿ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ನೂತನ ಸಮಿತಿಯ ತಾಲ್ಲೂಕು ಉಸ್ತುವಾರಿಗಳಾಗಿ ಮಂಜಪ್ಪ ಮತ್ತು ಪುಡಿಯ, ಅಧ್ಯಕ್ಷರಾಗಿ ಶೀಲಾ ಸುಕೇಶ್, ಉಪಾಧ್ಯಕ್ಷರಾಗಿ ಶೇಖರ್ ಹಾಗೂ ಸುರೇಶ್, ಪ್ರಧಾನ ಕಾರ್ಯದರ್ಶಿಯಾಗಿ ನಾರಾಯಣ, ಕಚೇರಿ ಕಾರ್ಯದರ್ಶಿಯಾಗಿ ಶೃಂಗೇಶ್ವರ್, ಖಜಾಂಚಿಯಾಗಿ ಮಹೇಶ್ ಅವರನ್ನು ನೇಮಕ ಮಾಡಲಾಯಿತು. ಇದರೊಂದಿಗೆ ವಿವಿಧ ಸೆಕ್ಟರ್ ಕಾರ್ಯದರ್ಶಿಗಳನ್ನೂ ನೇಮಕ ಮಾಡಲಾಯಿತು.
ಸಭೆಯಲ್ಲಿ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷವನ್ನು ತಾಲ್ಲೂಕಿನಲ್ಲಿ ಮತ್ತಷ್ಟು ಸಂಘಟಿಸಿ, ಬಲಪಡಿಸುವ ಕುರಿತು ಚರ್ಚಿಸಲಾಯಿತು. ಪಕ್ಷದ ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸಿ, ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಗೆ ದಿನೇಶ್ ಸ್ವಾಗತ ಕೋರಿದರು. ಶೇಖರ್ ವಂದಿಸಿದರು.
ಸಭೆಯಲ್ಲಿ ರಮೇಶ್, ಮಂಜಪ್ಪ, ಸುರೇಶ್, ಶೇಷಪ್ಪ, ದಿನೇಶ್, ಸುಕೇಶ್, ಶ್ರೀನಿವಾಸ್, ಮಂಜುನಾಥ್ ಸೇರಿದಂತೆ ಪಕ್ಷದ ಹಲವಾರು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.