ಮೂಡಿಗೆರೆ, ಸೆ. 9: ಕಾನನಹಳ್ಳಿ ಅರಣ್ಯ ಪ್ರದೇಶದಲ್ಲಿ ಎರಡು ಕಾಡಾನೆಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ, ರಾತ್ರಿ ವೇಳೆಯಲ್ಲಿ ಅವು ಜಿ. ಹೊಸಹಳ್ಳಿ ಟಾಟಾ ಕಾಫಿ ಎಸ್ಟೇಟ್ ಭಾಗದತ್ತ ಸಂಚರಿಸುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.

ಜಿ. ಹೊಸಹಳ್ಳಿ, ಟಾಟಾ ಕಾಫಿ ಎಸ್ಟೇಟ್, ಸಿಲ್ವರ್ ಖಾನ್ ಎಸ್ಟೇಟ್, ಪೋಡಿಯ ಕಾಲೋನಿ, ದಿಣ್ಣೆಕೆರೆ ಹಾಗೂ ಕೆಮ್ಮಣ್ಣು ಗಂಡಿ ಸುತ್ತಮುತ್ತಲಿನ ಗ್ರಾಮಸ್ಥರು, ರೈತರು, ಕಾರ್ಮಿಕರು ಹಾಗೂ ವಾಹನ ಸವಾರರು ರಾತ್ರಿ ವೇಳೆ ಹೆಚ್ಚಿನ ಜಾಗರೂಕತೆ ವಹಿಸುವಂತೆ ಇಲಾಖೆ ಮನವಿ ಮಾಡಿದೆ.

ಕಾಡಾನೆಗಳು ಕಂಡುಬಂದಲ್ಲಿ ಅವುಗಳನ್ನು ಹಿಂಬಾಲಿಸದೆ, ಕೆಣಕದೆ ಸುರಕ್ಷಿತ ಅಂತರ ಕಾಯ್ದುಕೊಂಡು ತಕ್ಷಣವೇ ಆನೆ ಕಾರ್ಯಪಡೆ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

ನಿಯಂತ್ರಣ ಕೊಠಡಿ ದೂರವಾಣಿ: 7204004261

ಪ್ರಕಟಣೆ ದಿನಾಂಕ: 09-09-2026
ಸಮಯ: ಸಂಜೆ 06:54.