ಮೂಡಿಗೆರೆ: ಅರಣ್ಯ ಇಲಾಖೆ ಮೂಡಿಗೆರೆ ಇವರ ಪ್ರಕಟಣೆಯ ಪ್ರಕಾರ, ಒಂಟಿ ಕಾಡಾನೆಯೊಂದು ಜಿ. ಹೊಸಹಳ್ಳಿ ಮಜರ್ ಸಾಬ್ರು ಅವರ ತೋಟದಿಂದ ಟಾಟಾ ಕಾಫಿ ಎಸ್ಟೇಟ್, ಜಿ. ಹೊಸಹಳ್ಳಿ ಕಡೆಗೆ ಸಂಚರಿಸುತ್ತಿದೆ.

ಈ ಹಿನ್ನೆಲೆಯಲ್ಲಿ ಟಾಟಾ ಕಾಫಿ ಎಸ್ಟೇಟ್ ಜಿ. ಹೊಸಹಳ್ಳಿ, ಸಿಲ್ವರ್ ಖಾನ್ ಎಸ್ಟೇಟ್, ಜಿ. ಹೊಸಹಳ್ಳಿ ಗ್ರಾಮ ಹಾಗೂ ಪೋಡಿಯ ಕಾಲೋನಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಗ್ರಾಮಸ್ಥರು, ಕಾರ್ಮಿಕರು ಹಾಗೂ ವಾಹನ ಸವಾರರು ಬಹಳ ಎಚ್ಚರಿಕೆಯಿಂದ ಇರಬೇಕೆಂದು ಅರಣ್ಯ ಇಲಾಖೆ ಮನವಿ ಮಾಡಿದೆ.

ಕಾಡಾನೆ ಸಂಚಾರ ಕಂಡುಬಂದಲ್ಲಿ ಸಾರ್ವಜನಿಕರು ಯಾವುದೇ ರೀತಿಯಲ್ಲಿ ಆನೆಗೆ ತೊಂದರೆ ನೀಡದೆ, ಸುರಕ್ಷಿತ ಅಂತರ ಕಾಯ್ದುಕೊಂಡು ಆನೆ ಕಾರ್ಯಪಡೆ ನಿಯಂತ್ರಣ ಕೊಠಡಿಗೆ ತಕ್ಷಣ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

📞 ಆನೆ ಕಾರ್ಯಪಡೆ ನಿಯಂತ್ರಣ ಕೊಠಡಿ: 7204004261

ದಿನಾಂಕ: 07-09-2026
ಸಮಯ: ಬೆಳಿಗ್ಗೆ 11:23.