ಮೂಡಿಗೆರೆ, ಸೆಪ್ಟೆಂಬರ್ 6: ಹೆಗ್ಗರವಳ್ಳಿ ಭಾಗದಿಂದ ಎರಡು ಕಾಡಾನೆಗಳು ಚಿಮ್ಮಟಗೆರೆ ಗ್ರಾಮದ ಅಪ್ಪು ಗೌಡ ಹಾಗೂ ಮಿಕ್ಕಿ ಅವರ ತೋಟದ ಕಡೆಗೆ ಸಂಚರಿಸುತ್ತಿರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.
ಚಿಮ್ಮಟಗೆರೆ, ಸೀಗೇಹಳ್ಳಿ, ಹಿರೇಶಿಗರ ಹಾಗೂ ಜಿ. ಹೊಸಹಳ್ಳಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡಾನೆಗಳ ಸಂಚಾರ ಇರುವ ಸಾಧ್ಯತೆ ಇರುವುದರಿಂದ ಗ್ರಾಮಸ್ಥರು, ರೈತರು, ಕಾರ್ಮಿಕರು ಹಾಗೂ ವಾಹನ ಸವಾರರು ಅತ್ಯಂತ ಎಚ್ಚರಿಕೆಯಿಂದ ಸಂಚರಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.
ಕಾಡಾನೆಗಳು ಕಂಡುಬಂದಲ್ಲಿ ಅವುಗಳ ಬಳಿ ತೆರಳದೆ, ಅವುಗಳನ್ನು ಪ್ರಚೋದಿಸದೆ ತಕ್ಷಣವೇ ಆನೆ ಕಾರ್ಯಪಡೆ ನಿಯಂತ್ರಣ ಕೊಠಡಿ: 7204004261 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
ದಿನಾಂಕ: 06-09-2026 | ಸಮಯ: ಸಂಜೆ 6:30.
ಕಾಡಾನೆಗಳ ಸಂಚಾರ: ಸಾರ್ವಜನಿಕರಿಗೆ ಅರಣ್ಯ ಇಲಾಖೆ ಎಚ್ಚರಿಕೆ!
GNE UPDATES
ಇತ್ತೀಚಿನ ಸುದ್ದಿ