ಮೂಡಿಗೆರೆ : ಸುಮಾರು 81ಕ್ಕೂ ಹೆಚ್ಚು ಉದ್ಯೋಗ ವಲಯಗಳ ಕಾರ್ಮಿಕರ ಕನಿಷ್ಠ ವೇತನ 10 ವರ್ಷದ ನಂತರ ಹೆಚ್ಚಳಮಾಡಿ ಈಗಾಗಲೇ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಹೆಚ್ಚಳ ಇಂದಿನ ಬೆಲೆ ಏರಿಕೆಗೆ ಕಾರ್ಮಿಕರ ದಿನಗೂಲಿ ಗಿಂತ ಕಡಿಮೆ ಪ್ರಮಾಣದ ಅವೈಜ್ಞಾನಿಕ ಕನಿಷ್ಠ ವೇತನವೆಂದು ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ(TUCI) ಜಿಲ್ಲಾ ಅಧ್ಯಕ್ಷ ಕೆ.ಕೆ.ಕೃಷ್ಣಪ್ಪ ಸರ್ಕಾರದ ಈ ಪರಿಷ್ಕರಣೆಯನ್ನು ಬಲವಾಗಿ ಖಂಡಿಸಿದ್ದಾರೆ.
1948ರ ಕನಿಷ್ಠ ವೇತನ ಕಾಯ್ದೆ ಪ್ರಕಾರ ಪ್ರತಿ ಐದು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆಯಾಗಬೇಕೆಂಬ ಕಾನೂನು ಇದೆ. 1991ರಲ್ಲಿ ಸುಪ್ರೀಂ ಕೋರ್ಟ್ “ರೆಫ್ಟಾ ಕೋಸ್ ಬ್ರೆಟ್ ” ಪ್ರಕರಣದ ತೀರ್ಪಿನ ನಂತರ ಆಹಾರ,ಬಟ್ಟೆ,ವಸತಿ ಮಕ್ಕಳ ಶಿಕ್ಷಣ, ವೈದ್ಯಕೀಯ ವೆಚ್ಚ, ಲೆಕ್ಕ ಹಾಕಿ ವೈಜ್ಞಾನಿಕವಾಗಿ ವೇತನ ನಿಗದಿ ಮಾಡ ಬೇಕೆಂದಿತು. 35 ವರ್ಷದಿಂದ ಏಳು ಬಾರಿ ಪರಿಷ್ಕರಣೆಯಾಗಬೇಕಾಗಿದ್ದ ವೇತನ. ರಾಜ್ಯ/ ಉದ್ಯೋಗವಾರು 4 ರಿಂದ 5 ಬಾರಿ ಆಗಿದೆ. ನಮ್ಮನ್ನು ಆಳುವ ಶಾಸಕರ ವೇತನ ಐದು ವರ್ಷಕ್ಕೆ ಎರಡು ಬಾರಿ ವೈಜ್ಞಾನಿಕ ಮೀರಿ 160 % ಪ್ರಮಾಣದಲ್ಲಿ ಆಗಿದೆ. ಆದರೆ 10 ವರ್ಷದ ನಂತರ ಪರಿಷ್ಕರಣೆಗೊಂಡ ಈ ವೇತನ 989 ರೂ. ದುಡಿಮೆ ಅವಧಿ, ನಿಗದಿ ಅವರಿಗಿಂತ ಹೆಚ್ಚು ಕೆಲಸ ಮಾಡಿದರೆ ಎರಡು ಪಟ್ಟು ವೇತನ,ಸಾಮಾಜಿಕ ಭದ್ರತೆ, ಮಹಿಳಾ ಸುರಕ್ಷತೆ,ಮೂಲ ಸೌಕರ್ಯಗಳನು 85% ಆಕುಶಲ (ತೋಟ) ಕಾರ್ಮಿಕರಿಗೆ ತಲುಪಲು ಕಾರ್ಮಿಕ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ನಮ್ಮ ಕಾರ್ಮಿಕ ಸಂಘಟನೆ TUCI ಆಗ್ರಹಿಸುತ್ತದೆ. ಎಲ್ಲಾ ಕಾರ್ಮಿಕ ಸಂಘಟನೆಗಳು ರಾಜಿ ಸಂಧಾನಕ್ಕೆ ಒಪ್ಪದೇ ಕಾರ್ಮಿಕರ ಹಕ್ಕುಗಳನ್ನು ದೊರಕಿಸಿಕೊಡುವುದರ ಜೊತೆಗೆ ದಿನಗೂಲಿ 1,000, ಕನಿಷ್ಠ ವೇತನ 35,000 ಜಾರಿಯಾಗಬೇಕೆಂದು ಆಗ್ರಹಿಸುತ್ತದೆ.
ಮಲೆನಾಡಿನ ಕಾಫಿ ತೋಟಗಳನ್ನು ತಯಾರು ಮಾಡಿದವರು ದಕ್ಷಿಣ ಕನ್ನಡ, ಉಡುಪಿ, ತಮಿಳುನಾಡು ಕೇರಳ ಮುಂತಾದ ಕಡೆಗಳಿಂದ ಬಂದು ಇಲ್ಲೇ ನೆಲೆಸಿ ಈ ಸ್ವಿಜರ್ಲ್ಯಾಂಡ್ ಕಟ್ಟಿದವರು. ಆದರೆ ಇತ್ತೀಚಿಗೆ ಕೇಂದ್ರ ಸರ್ಕಾರ ದೇಶದ ಭದ್ರತೆ ಹಾಗೂ ನುಸುಳು ಕೋರರ ತಡೆಗಟ್ಟಲು SIR ಜಾರಿಗೊಳಿಸಲು ತಯಾರಿ ನಡೆಸಿದೆ. ಚುನಾವಣಾ ಮ್ಯಾಪಿಂಗ್ ನಡೆಸಿ ಇಲ್ಲಿನ ಕಾರ್ಮಿಕರು, ಆದಿವಾಸಿಗಳು ಬಹುತೇಕ ವಲಸೆ ಕಾರ್ಮಿಕರನು ಒಂದು ವರ್ಗವನ್ನು ಮತದಾನದ ಹಕ್ಕು ಉಳ್ಳವರು. ಮತದಾನದ ಹಕ್ಕು ಇಲ್ಲದವರು ಎಂಬ ಎರಡು ವರ್ಗ ಮಾಡುತ್ತಿದೆ. ಒಂದೊಂದೇ ಹಕ್ಕುಗಳನ್ನು ಕಸಿದುಕೊಳ್ಳುತ ನಂತರ ಈ ದೇಶದ ಪ್ರಜೆಗಳೇ ಅಲ್ಲ ಎಂದು ಬಿಂಬಿಸಲಾಗುತ್ತದೆ. ಇದನ್ನು ನಮ್ಮ ಕಾರ್ಮಿಕ ಸಂಘಟನೆ ತೀವ್ರವಾಗಿ ವಿರೋಧಿಸುತ್ತದೆ ಕೂಡಲೇ ಕರ್ನಾಟಕದಲ್ಲಿ SIR ಅನುಷ್ಠಾನ ಗೊಳಿಸುವುದನ್ನು ಕೂಡಲೇ ಕೈಬಿಡಬೇಕೆಂದು ಒತ್ತಾಯಿಸುತದೆ. ಜೊತೆಗೆ ಉದ್ಯೋಗ ಖಾತ್ರಿ ಯೋಜನೆಯಾದ ವಿಬಿ – ಜಿ ರಾಮ್ ಜಿ ( ಮಹಾತ್ಮ ಗಾಂಧಿ ನರೇಗಾ ಯೋಜನೆ ) ನೊಂದಣಿ ಮಾಡಿಸಿದ ಪ್ರತಿಯೊಬ್ಬ ಕಾರ್ಮಿಕ ನಿಗೂ ನೂರು ದಿನ ಕಡ್ಡಾಯ ಕೆಲಸ ಕೊಡಬೇಕೆಂಬ ನಿಯಮವಿದ್ದರೂ, ಗುತ್ತಿಗೆದಾರರು ಈ ಕೆಲಸ ಮಾಡಿಸಿ ಯೋಜನೆಯ ವಾರಸುದಾರರ ಖಾತೆಗೆ ಹಣ ಹಾಕಿ ವಾಪಸ್ ತೆಗೆದುಕೊಳ್ಳುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಕೂಡಲೇ ಸೂಕ್ತ ತನಿಖೆ ನಡೆಸಿ ಉದ್ಯೋಗ ಖಾತರಿದಾರರಿಗೆ ನೂರು ದಿನದ ಉದ್ಯೋಗ ಕಡ್ಡಾಯ ಗೊಳಿಸಿ ಈ ಎಲ್ಲಾ ಹಕ್ಕುಗಳನ್ನು ಪಡೆಯಲು ಹೋರಾಟ ಒಂದೇ ದಾರಿ ಎಂದರು.
ವರದಿ : ಕೆ. ಕೆ. ಕೃಷ್ಣಪ್ಪ
ಜಿಲ್ಲಾಧ್ಯಕ್ಷರು TUCI
ಚಿಕ್ಕಮಗಳೂರು.
ಕಾರ್ಮಿಕರ ವೇತನ ವೈಜ್ಞಾನಿಕ…
GNE UPDATES
ಇತ್ತೀಚಿನ ಸುದ್ದಿ