ಅಲ್ದೂರು: ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಅಲ್ದೂರು ಬ್ಲಾಕ್ ಸಮಿತಿಯ ವತಿಯಿಂದ ಅಲ್ದೂರಿನಲ್ಲಿ ಬಹುಜನ ಸಮಾಜ ಪಕ್ಷದ (ಬಿ.ಎಸ್.ಪಿ.) ನೂತನ ಕಚೇರಿಯನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಮುಸ್ಲಿಂ ಧರ್ಮಗುರುಗಳಾದ ಮೌಲಾನಾ ಶಫಿವುಲ್ಲಾ ಹಾಗೂ ನಿಜಾಮ್ ಅವರ ಉಪಸ್ಥಿತಿಯಲ್ಲಿ, ಬಿ.ಎಸ್.ಪಿ. ರಾಜ್ಯ ಉಪಾಧ್ಯಕ್ಷರಾದ ಜಾಕಿರ್ ಹುಸೇನ್ ಅವರು ಟೇಪ್ ಕತ್ತರಿಸುವ ಮೂಲಕ ಪಕ್ಷದ ಕಚೇರಿಯನ್ನು ಉದ್ಘಾಟಿಸಿದರು.
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ. ರಾಧಾಕೃಷ್ಣ ಹಾಗೂ ರಾಜ್ಯ ಕಾರ್ಯದರ್ಶಿ ಕೆ.ಬಿ. ಸುಧಾ ಅವರು ದೀಪ ಬೆಳಗಿಸುವ ಮೂಲಕ ನೆರವೇರಿಸಿದರು. ಬಳಿಕ ವೇದಿಕೆಯಲ್ಲಿದ್ದ ನಾಯಕರು ಹಾಗೂ ಕಾರ್ಯಕರ್ತರು ಪರಮಪೂಜ್ಯ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಮಾನ್ಯವರ್ ಕಾನ್ಷಿರಾಂ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಲಾಕ್ ಅಧ್ಯಕ್ಷ ಧರ್ಮೇಶ್ ಮಾವಿನಗುಣಿ ವಹಿಸಿದ್ದರು.
ಸಭೆಯಲ್ಲಿ ಲೋಕಸಭಾ ಸಂಯೋಜಕ ಬಿ.ಎಂ. ಶಂಕರ್, ಜಿಲ್ಲಾ ಉಪಾಧ್ಯಕ್ಷರಾದ ಎಂ. ಬಾಬು ಹಾಗೂ ಕೆ.ಎಸ್. ಮಂಜುಳಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಕೆ. ಮಂಜುನಾಥ್, ವಿಧಾನಸಭಾ ಉಸ್ತುವಾರಿಗಳಾದ ವಸಂತ್ ಕುಮಾರ್ ಮತ್ತು ಎಂ.ಡಿ. ಶಂಕರ್, ಪಕ್ಷದ ಮುಖಂಡರಾದ ಪುಟ್ಟಸ್ವಾಮಿ, ಶ್ರೀಕಾಂತ್ ಹೊರಟ್ಟಿ, ಲಕ್ಷ್ಮಣ್ ದೊಡ್ಡಯ್ಯ ಹಾಗೂ ರಾಜು ಹುಣಿಸೆಮಕ್ಕಿ, ಹೋಬಳಿ ಅಧ್ಯಕ್ಷ ಮಲ್ಲಿಕಾರ್ಜುನ, ಗ್ರಾಮ ಪಂಚಾಯಿತಿ ಸದಸ್ಯರಾದ ಗಿರೀಶ್ ಅವ್ವಳ್ಳಿ, ರಾಜೇಶ್ ಮತ್ತು ಮನೋಜ್, ಭೀಮ್ ಆರ್ಮಿ ಅಧ್ಯಕ್ಷರು ಹಾಗೂ ದಲಿತ ಸಂಘಟನೆಯ ಸಂಚಾಲಕ ಅಶೋಕ್ ರಾಜ್, ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷರು ಸೇರಿದಂತೆ ಪಕ್ಷದ ಹಲವಾರು ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಪಕ್ಷದ ಸಂಘಟನೆ ಬಲಪಡಿಸುವುದು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದು ಹಾಗೂ ಸಾಮಾಜಿಕ ನ್ಯಾಯದ ಆಶಯಗಳನ್ನು ಜನರಿಗೆ ತಲುಪಿಸುವ ಕುರಿತು ಮುಖಂಡರು ಮಾತನಾಡಿದರು.
ಬಹುಜನ ಸಮಾಜ ಪಕ್ಷ (ಬಿ ಎಸ್ ಪಿ) ಪಕ್ಷದ ನೂತನ ಕಚೇರಿ ಉದ್ಘಾಟನೆ.
GNE UPDATES
ಇತ್ತೀಚಿನ ಸುದ್ದಿ