ಮೂಡಿಗೆರೆ, ಆಗಸ್ಟ್ 15, 2026: ಮೂಡಿಗೆರೆ ಅರಣ್ಯ ಇಲಾಖೆ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಕಾಡಾನೆಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ, ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು, ವಾಹನ ಸವಾರರು ಹಾಗೂ ಕೂಲಿ ಕಾರ್ಮಿಕರು ಅತ್ಯಂತ ಎಚ್ಚರಿಕೆಯಿಂದ ಇರಬೇಕೆಂದು ಅರಣ್ಯ ಇಲಾಖೆ ಸೂಚಿಸಿದೆ.
ಜಾಗರ್ ಖಾನ್ ಪ್ರದೇಶದಲ್ಲಿ ಮೂರು ಕಾಡಾನೆಗಳು ಕಂಡುಬಂದಿದ್ದು, ದುಂಡುಗ, ಹಳಸೆ, ಜಾಗರಖಾನ್, ಜಾಗರಮನೆ, ಮಣ್ಣಿಕೆರೆ, ಶುಭನಗರ ಹಾಗೂ ಚಂದ್ರಪುರ ಗ್ರಾಮಗಳ ಸುತ್ತಮುತ್ತಲಿನ ಜನರು ಎಚ್ಚರಿಕೆಯಿಂದ ಸಂಚರಿಸುವಂತೆ ಮನವಿ ಮಾಡಲಾಗಿದೆ. ಈ ಭಾಗದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಅರಣ್ಯ ಇಲಾಖೆಯಿಂದ ಅಗತ್ಯ ಮಾಹಿತಿ ಪಡೆದು, ಅತ್ಯಂತ ಜಾಗರೂಕತೆಯಿಂದ ಕೆಲಸ ನಿರ್ವಹಿಸುವಂತೆ ಸೂಚಿಸಲಾಗಿದೆ.
ಇದೇ ವೇಳೆ ನಂದಿಬೆಟ್ಟ ಎಸ್ಟೇಟ್ ಹಾಗೂ ಆನೆ ಮಲ್ಲಪ್ಪ ಗುಡ್ಡ ಭಾಗದಲ್ಲಿ ಒಂಟಿ ಕಾಡಾನೆಯೊಂದು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಹೊಸಪುರ, ಕಸ್ಕೆಬೈಲ್, ದೊಡ್ಡಗಳ್ಳ ಎಸ್ಟೇಟ್, ಹಸಿರು ಕಾಡು ಎಸ್ಟೇಟ್, ವಿನಾಯಕ ಎಸ್ಟೇಟ್ ಹಾಗೂ ಜಿ. ಹೊಸಹಳ್ಳಿ ಗ್ರಾಮಗಳ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ವಾಹನ ಸವಾರರು ಎಚ್ಚರಿಕೆಯಿಂದ ಇರಬೇಕೆಂದು ಅರಣ್ಯ ಇಲಾಖೆ ತಿಳಿಸಿದೆ.
ಕಾಡಾನೆಗಳು ಕಂಡುಬಂದಲ್ಲಿ ಸಾರ್ವಜನಿಕರು ಅವುಗಳ ಸಮೀಪಕ್ಕೆ ತೆರಳದೆ, ತಕ್ಷಣ ಜಿಲ್ಲಾ ಆನೆ ಕಾರ್ಯಪಡೆ ನಿಯಂತ್ರಣ ಕೊಠಡಿ: 7204004261 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.
ಅರಣ್ಯ ಇಲಾಖೆ, ಮೂಡಿಗೆರೆ
ದಿನಾಂಕ: 15-08-2026.
ಮೂಡಿಗೆರೆ : ಕಾಡಾನೆಗಳು ವಿವಿಧ ಕಡೆಗಳಲ್ಲಿ ಸಂಚಾರ.. ಸಾರ್ವಜನಿಕರೇ.. ಎಚ್ಚರ!
GNE UPDATES
ಇತ್ತೀಚಿನ ಸುದ್ದಿ