ಮೂಡಿಗೆರೆ, ಆ.12: ಬಿದರಹಳ್ಳಿ ಗ್ರಾಮದ ಸುತ್ತಮುತ್ತ ಹುಲಿ ಕಾಣಿಸಿಕೊಂಡಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣ ಹಾಗೂ ವಿವಿಧ ಮಾಧ್ಯಮಗಳ ಮೂಲಕ ಹರಿದಾಡುತ್ತಿದ್ದು, ಈ ಮಾಹಿತಿ ಸಂಪೂರ್ಣ ನಕಲಿಯಾಗಿದ್ದು, ಸುಳ್ಳು ಮಾಹಿತಿಯಾಗಿದೆ ಎಂದು ಅರಣ್ಯ ಇಲಾಖೆ ಮೂಡಿಗೆರೆ ತಿಳಿಸಿದೆ.
ಬಿದರಹಳ್ಳಿ ಗ್ರಾಮದ ಸುತ್ತಮುತ್ತ ಯಾವುದೇ ಹುಲಿ ಇರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಅಥವಾ ದೃಢೀಕರಣ ಲಭ್ಯವಾಗಿಲ್ಲ. ಸಾರ್ವಜನಿಕರು ಇಂತಹ ಸುಳ್ಳು ಸಂದೇಶಗಳನ್ನು ನಂಬಬಾರದು ಹಾಗೂ ಅನಗತ್ಯವಾಗಿ ಆತಂಕಕ್ಕೊಳಗಾಗಬಾರದು ಎಂದು ಅರಣ್ಯ ಇಲಾಖೆ ಮನವಿ ಮಾಡಿದೆ.
ಹೆಚ್ಚಿನ ಮಾಹಿತಿ ಅಥವಾ ಯಾವುದೇ ಅನುಮಾನಗಳಿದ್ದಲ್ಲಿ 7204004261 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ಇಲಾಖೆ ತಿಳಿಸಿದೆ.
ದಿನಾಂಕ: 12-08-2026
ಸಮಯ: ಮಧ್ಯಾಹ್ನ 02:05 ಗಂಟೆ
– ಅರಣ್ಯ ಇಲಾಖೆ, ಮೂಡಿಗೆರೆ
ಬಿದರಹಳ್ಳಿಯಲ್ಲಿ ಹುಲಿ ಬಂದಿದೆಯೇ..?
GNE UPDATES
ಇತ್ತೀಚಿನ ಸುದ್ದಿ