ಮೂಡಿಗೆರೆ :11.08.26, ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಒಂಟಿ ಕಾಡಾನೆ ಸಂಚರಿಸುತ್ತಿರುವುದು ಕಂಡುಬಂದಿದೆ. ಎಂ. ಚಂದ್ರಪುರ ಗ್ರಾಮದ ಕುದುರೆ ನಾಗರಾಜ್ ಗೌಡರ ತೋಟದಲ್ಲಿ ಕಾಡಾನೆ ಕಾಣಿಸಿಕೊಂಡಿದ್ದು, ಸುತ್ತಮುತ್ತಲಿನ ಪ್ರದೇಶಗಳಾದ ಡಿ.ಎಂ. ಪುಟ್ಟೇಗೌಡರ ತೋಟ, ಬಾರದಹಳ್ಳಿ, ಹೊರಟ್ಟಿ, ಚಂದ್ರಪುರ, ಕೇಳಚಂದ್ರ ಹಾಗೂ ಕಮ್ಮರಗೋಡು ಎಸ್ಟೇಟ್ ಪ್ರದೇಶಗಳಲ್ಲಿ ಕಾಡಾನೆ ಸಂಚರಿಸುವ ಸಾಧ್ಯತೆ ಇದೆ.
ಆದ್ದರಿಂದ ಈ ಪ್ರದೇಶಗಳ ಸುತ್ತಮುತ್ತ ವಾಸಿಸುವ ಗ್ರಾಮಸ್ಥರು, ಸಾರ್ವಜನಿಕರು ಹಾಗೂ ವಾಹನ ಸವಾರರು ಹೆಚ್ಚಿನ ಎಚ್ಚರಿಕೆಯಿಂದ ಇರಬೇಕು ಎಂದು ಮೂಡಿಗೆರೆ ಅರಣ್ಯ ಇಲಾಖೆ ಮನವಿ ಮಾಡಿದೆ.
ಕಾಡಾನೆ ಕಂಡುಬಂದಲ್ಲಿ ಸಾರ್ವಜನಿಕರು ಅದರ ಸಮೀಪಕ್ಕೆ ತೆರಳದೆ, ಯಾವುದೇ ರೀತಿಯಲ್ಲಿ ಕಾಡಾನೆಯನ್ನು ಪ್ರಚೋದಿಸದೆ, ತಕ್ಷಣವೇ ಆನೆ ಕಾರ್ಯಪಡೆ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡುವಂತೆ ಕೋರಲಾಗಿದೆ.
ಆನೆ ಕಾರ್ಯಪಡೆ ನಿಯಂತ್ರಣ ಕೊಠಡಿ ದೂರವಾಣಿ: 7204004261
ದಿನಾಂಕ: 11-08-2026
ಸಮಯ: ಸಂಜೆ 06:05
— ಅರಣ್ಯ ಇಲಾಖೆ, ಮೂಡಿಗೆರೆ.
ಮೂಡಿಗೆರೆ: ಅರಣ್ಯ ಇಲಾಖೆ ವತಿಯಿಂದ ಸಾರ್ವಜನಿಕರಿಗೆ ತುರ್ತು ಎಚ್ಚರಿಕೆ!
GNE UPDATES
ಇತ್ತೀಚಿನ ಸುದ್ದಿ