ಮೂಡಿಗೆರೆ : 11.08.26.

  ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಒಂಟಿ ಕಾಡಾನೆಯೊಂದು M. ಚಂದ್ರಪುರದ ಕುದುರೆ ನಾಗರಾಜ್ ಗೌಡ್ರು ಅವರ ತೋಟದಲ್ಲಿ ಕಂಡುಬಂದಿದೆ.

ಕಾಡಾನೆಯು D.M. ಪುಟ್ಟೇಗೌಡ್ರು ಅವರ ತೋಟ ಹಾಗೂ ಬಾರದಹಳ್ಳಿ, ಹೊರಟ್ಟಿ, ಚಂದ್ರಪುರ, ಕೇಳಚಂದ್ರ ಕಮ್ಮರಗೋಡು ಎಸ್ಟೇಟ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚರಿಸುವ ಸಾಧ್ಯತೆ ಇರುವುದರಿಂದ, ಈ ಭಾಗದ ಗ್ರಾಮಸ್ಥರು, ತೋಟದ ಕಾರ್ಮಿಕರು ಹಾಗೂ ವಾಹನ ಸವಾರರು ಹೆಚ್ಚಿನ ಎಚ್ಚರಿಕೆಯಿಂದ ಇರಬೇಕು ಎಂದು ಅರಣ್ಯ ಇಲಾಖೆ ಮನವಿ ಮಾಡಿದೆ.

ಕಾಡಾನೆ ಕಂಡುಬಂದಲ್ಲಿ ಸಾರ್ವಜನಿಕರು ಅದರ ಸಮೀಪಕ್ಕೆ ತೆರಳದೆ, ತಕ್ಷಣ ಆನೆ ಕಾರ್ಯಪಡೆ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ: 7204004261

ದಿನಾಂಕ: 11-08-2026
ಸಮಯ: ಬೆಳಿಗ್ಗೆ 9:05.