ದಿನಾಂಕ: 03-08-2026
ಸಮಯ: ಸಂಜೆ 6:45
ಮೂಡಿಗೆರೆ: ಮೂಡಿಗೆರೆ ಅರಣ್ಯ ಇಲಾಖೆಯ ಪ್ರಕಟಣೆಯ ಪ್ರಕಾರ, ಮೂರು ಕಾಡಾನೆಗಳು ಜಾಗರಖಾನ್ ಪ್ರದೇಶದಲ್ಲಿ ಕಂಡುಬಂದಿದ್ದು, ಸುತ್ತಮುತ್ತಲಿನ ಗ್ರಾಮಗಳಾದ ದುಂಡುಗ, ಹಳಸೆ, ಜಾಗರಖಾನ್, ಜಾಗರಮನೆ, ಮಣ್ಣಿಕೆರೆ, ಶುಭನಗರ ಹಾಗೂ ಚಂದ್ರಪುರ ಭಾಗಗಳಲ್ಲಿ ಸಂಚರಿಸುವ ಸಾಧ್ಯತೆ ಇದೆ.
ಆದ್ದರಿಂದ ಈ ಭಾಗದ ಗ್ರಾಮಸ್ಥರು, ಕಾರ್ಮಿಕರು ಹಾಗೂ ವಾಹನ ಸವಾರರು ಅತ್ಯಂತ ಎಚ್ಚರಿಕೆಯಿಂದ ಸಂಚರಿಸಬೇಕು ಎಂದು ಅರಣ್ಯ ಇಲಾಖೆ ಮನವಿ ಮಾಡಿದೆ. ಅನಗತ್ಯವಾಗಿ ಕಾಡಾನೆಗಳ ಸಮೀಪ ಹೋಗುವುದು, ಅವುಗಳನ್ನು ಪ್ರಚೋದಿಸುವುದು ಅಥವಾ ಗುಂಪಾಗಿ ಹಿಂಬಾಲಿಸುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು.
ಕಾಡಾನೆಗಳು ಕಂಡುಬಂದಲ್ಲಿ ತಕ್ಷಣವೇ ಆನೆ ಕಾರ್ಯಪಡೆ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 7204004261 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ವಿನಂತಿಸಲಾಗಿದೆ.
– ಅರಣ್ಯ ಇಲಾಖೆ, ಮೂಡಿಗೆರೆ.
ಮೂಡಿಗೆರೆ : ಕಾಡಾನೆಗಳು ಈಗ ಎಲ್ಲಿವೆ.?
GNE UPDATES
ಇತ್ತೀಚಿನ ಸುದ್ದಿ