ಆಗಸ್ಟ್ 5: ಮೂಡಿಗೆರೆ ಅರಣ್ಯ ಇಲಾಖೆಯು ಸಾರ್ವಜನಿಕರಿಗೆ ಕಾಡಾನೆಗಳ ಸಂಚಾರ ಕುರಿತು ಎಚ್ಚರಿಕೆ ನೀಡಿದೆ.

ಶುಭನಗರ ಗ್ರಾಮದ ರಾಮಯ್ಯ ಗಣೇಶ್ ಅವರ ತೋಟದಲ್ಲಿ ಕಾಡಾನೆಗಳು ಕಂಡುಬಂದಿದ್ದು, ಅವು ಸಮೀಪದ ಪ್ರದೇಶಗಳಲ್ಲಿ ಸಂಚರಿಸುವ ಸಾಧ್ಯತೆ ಇದೆ. ಆದ್ದರಿಂದ ಮಣ್ಣಿಕೆರೆ, ಭದ್ರಾಪುರ ಎಸ್ಟೇಟ್, ಗಾಡಿಚೌಕ, ಮರೆಬೈಲು, ಚಂದ್ರಪುರ ಹಾಗೂ ಕೆಳಚಂದ್ರ ಕಮ್ಮರಗೋಡು ಎಸ್ಟೇಟ್ ಸುತ್ತಮುತ್ತಲಿನ ಗ್ರಾಮಸ್ಥರು, ಕಾರ್ಮಿಕರು ಹಾಗೂ ವಾಹನ ಸವಾರರು ಹೆಚ್ಚಿನ ಎಚ್ಚರಿಕೆಯಿಂದ ಇರಬೇಕೆಂದು ಅರಣ್ಯ ಇಲಾಖೆ ಮನವಿ ಮಾಡಿದೆ.

ಕಾಡಾನೆಗಳು ಕಂಡುಬಂದಲ್ಲಿ ಅಥವಾ ಅವುಗಳ ಸಂಚಾರದ ಬಗ್ಗೆ ಮಾಹಿತಿ ದೊರೆತಲ್ಲಿ, ಸಾರ್ವಜನಿಕರು ತಕ್ಷಣವೇ ಆನೆ ಕಾರ್ಯಪಡೆ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 7204004261ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಕೋರಲಾಗಿದೆ.

– ಅರಣ್ಯ ಇಲಾಖೆ, ಮೂಡಿಗೆರೆ

ದಿನಾಂಕ: 05-08-2026
ಸಮಯ: ಬೆಳಿಗ್ಗೆ 7:30