ಪತ್ರಿಕಾ ಪ್ರಕಟಣೆ

ದಿನಾಂಕ: 03.08.2026
ಸಮಯ: ಬೆಳಿಗ್ಗೆ 08:50

ಮೂಡಿಗೆರೆ ತಾಲ್ಲೂಕಿನಲ್ಲಿ ಮೂರು ಕಾಡಾನೆಗಳ ಸಂಚಾರ – ಸಾರ್ವಜನಿಕರಿಗೆ ಅರಣ್ಯ ಇಲಾಖೆಯ ಎಚ್ಚರಿಕೆ

ಮೂಡಿಗೆರೆ ಅರಣ್ಯ ಇಲಾಖೆಯ ಪ್ರಕಟಣೆಯ ಪ್ರಕಾರ, ಜಾಗರ ಖಾನ್ ಪ್ರದೇಶದಲ್ಲಿ ಮೂರು ಕಾಡಾನೆಗಳು ಕಂಡುಬಂದಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚರಿಸುವ ಸಾಧ್ಯತೆ ಇದೆ.

ಆದ್ದರಿಂದ ದುಂಡುಗ, ಹಳಸೆ, ಜಾಗರ ಖಾನ್, ಜಾಗರಮನೆ, ಮಣ್ಣಿಕೆರೆ, ಶುಭನಗರ ಹಾಗೂ ಚಂದ್ರಪುರ ಗ್ರಾಮದ ನಿವಾಸಿಗಳು, ಕಾರ್ಮಿಕರು ಮತ್ತು ವಾಹನ ಸವಾರರು ಅತ್ಯಂತ ಎಚ್ಚರಿಕೆಯಿಂದ ಸಂಚರಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.

ಅಗತ್ಯವಿಲ್ಲದಿದ್ದರೆ ರಾತ್ರಿ ವೇಳೆಯಲ್ಲಿ ಒಂಟಿಯಾಗಿ ಸಂಚರಿಸುವುದನ್ನು ತಪ್ಪಿಸುವುದು, ಕಾಡಾನೆಗಳ ಸಮೀಪ ಹೋಗದಿರುವುದು ಹಾಗೂ ಯಾವುದೇ ರೀತಿಯ ಪ್ರಚೋದನೆ ನೀಡದಿರುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ.

ಕಾಡಾನೆಗಳು ಕಂಡುಬಂದಲ್ಲಿ ಅಥವಾ ಅವುಗಳ ಚಲನವಲನದ ಬಗ್ಗೆ ಮಾಹಿತಿ ದೊರೆತಲ್ಲಿ ತಕ್ಷಣವೇ ಆನೆ ಕಾರ್ಯಪಡೆ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 7204004261 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಅರಣ್ಯ ಇಲಾಖೆ ಕೋರಿದೆ.

– ಅರಣ್ಯ ಇಲಾಖೆ, ಮೂಡಿಗೆರೆ