ಪತ್ರಿಕಾ ಪ್ರಕಟಣೆ
ಮೂಡಿಗೆರೆ ತಾಲ್ಲೂಕಿನಲ್ಲಿ ಎರಡು ಕಡೆ ಕಾಡಾನೆಗಳ ಸಂಚಾರ – ಗ್ರಾಮಸ್ಥರು ಹಾಗೂ ವಾಹನ ಸವಾರರಿಗೆ ಅರಣ್ಯ ಇಲಾಖೆಯ ಎಚ್ಚರಿಕೆ
ಮೂಡಿಗೆರೆ, ಆಗಸ್ಟ್ 3: ಮೂಡಿಗೆರೆ ವಲಯದಲ್ಲಿ ಎರಡು ಪ್ರತ್ಯೇಕ ಪ್ರದೇಶಗಳಲ್ಲಿ ಕಾಡಾನೆಗಳ ಗುಂಪು ಕಂಡುಬಂದಿರುವ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು, ಕಾರ್ಮಿಕರು ಹಾಗೂ ವಾಹನ ಸವಾರರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.
ಅರಣ್ಯ ಇಲಾಖೆಯ ಮಾಹಿತಿ ಪ್ರಕಾರ, ಜಾಗರಖಾನ್ ಪ್ರದೇಶದಲ್ಲಿ ಮೂರು ಕಾಡಾನೆಗಳು ಸಂಚರಿಸುತ್ತಿದ್ದು, ದುಂಡುಗ, ಹಳಸೆ, ಜಾಗರಖಾನ್, ಜಾಗರಮನೆ, ಮಣ್ಣಿಕೆರೆ, ಶುಭನಗರ ಹಾಗೂ ಚಂದ್ರಪುರ ಗ್ರಾಮಗಳ ಸುತ್ತಮುತ್ತಲಿನ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕಾಗಿದೆ.
ಇದೇ ವೇಳೆ, ಟಿ.ಸಿ. ರುದ್ರೇಗೌಡ್ರು ಕಾಡು – ಆನೆ ಮಲ್ಲಪ್ಪ ಗುಡ್ಡ ಭಾಗದಲ್ಲಿಯೂ ಕಾಡಾನೆಗಳ ಗುಂಪು ಕಂಡುಬಂದಿದ್ದು, ಅವು ಆನೆ ಮಲ್ಲಪ್ಪ ಗುಡ್ಡ, ಕಸ್ಕೆಬೈಲ್, ದೊಡ್ಡಗಳ್ಳ ಎಸ್ಟೇಟ್, ಹೊಸಪುರ ಹಾಗೂ ಜಿ. ಹೊಸಹಳ್ಳಿ ಗ್ರಾಮದ ಕಡೆಗೆ ಸಂಚರಿಸುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.
ಗ್ರಾಮಸ್ಥರು ಅನಗತ್ಯವಾಗಿ ಕಾಡು ಪ್ರದೇಶಗಳಿಗೆ ತೆರಳದಂತೆ, ರಾತ್ರಿ ವೇಳೆ ಒಬ್ಬರೇ ಸಂಚರಿಸದಂತೆ ಹಾಗೂ ವಾಹನ ಸವಾರರು ವಿಶೇಷ ಎಚ್ಚರಿಕೆ ವಹಿಸುವಂತೆ ಇಲಾಖೆ ಸೂಚಿಸಿದೆ.
ಯಾರಿಗಾದರೂ ಕಾಡಾನೆಗಳು ಕಂಡುಬಂದಲ್ಲಿ ತಕ್ಷಣವೇ ಆನೆ ಕಾರ್ಯಪಡೆ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 7204004261 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.
ಪ್ರಕಟಣೆ ಸಮಯ:
03.08.2026 – ಸಂಜೆ 5:55 ಗಂಟೆ
03.08.2026 – ಸಂಜೆ 6:00 ಗಂಟೆ
– ಅರಣ್ಯ ಇಲಾಖೆ, ಮೂಡಿಗೆರೆ
ಮೂಡಿಗೆರೆ : ಕಾಡಾನೆಗಳು ಈಗ ಎಲ್ಲಿವೆ?
GNE UPDATES
ಇತ್ತೀಚಿನ ಸುದ್ದಿ