ಮೂಡಿಗೆರೆ, ಆಗಸ್ಟ್ 4: ಅರಣ್ಯ ಇಲಾಖೆ ಮೂಡಿಗೆರೆ ವಲಯದಿಂದ ನೀಡಲಾದ ಮಾಹಿತಿಯ ಪ್ರಕಾರ, ಮೂರು ಕಾಡಾನೆಗಳು ಚಂದ್ರಪುರ ಸುಬ್ರಹ್ಮಣ್ಯ ಎಸ್ಟೇಟ್ ಪ್ರದೇಶದಲ್ಲಿ ಇಂದು ಬೆಳಿಗ್ಗೆ ಕಂಡುಬಂದಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚರಿಸುವ ಸಾಧ್ಯತೆ ಇದೆ.
ಆದ್ದರಿಂದ ಗಾಡಿಚೌಕ, ಮರೆಬೈಲು, ಚಂದ್ರಪುರ, ಕೇಳಚಂದ್ರ ಹಾಗೂ ಕಮ್ಮರಗೋಡು ಎಸ್ಟೇಟ್ ಭಾಗಗಳ ಗ್ರಾಮಸ್ಥರು, ಕಾರ್ಮಿಕರು ಹಾಗೂ ವಾಹನ ಸವಾರರು ಅತ್ಯಂತ ಎಚ್ಚರಿಕೆಯಿಂದ ಸಂಚರಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.
ಕಾಡಾನೆಗಳು ಕಂಡುಬಂದಲ್ಲಿ ಅಥವಾ ಅವುಗಳ ಚಲನವಲನದ ಬಗ್ಗೆ ಮಾಹಿತಿ ದೊರೆತಲ್ಲಿ ತಕ್ಷಣವೇ ಆನೆ ಕಾರ್ಯಪಡೆ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 7204004261 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ವಿನಂತಿಸಲಾಗಿದೆ.
ದಿನಾಂಕ: 04.08.2026
ಸಮಯ: 07.00 AM
– ಅರಣ್ಯ ಇಲಾಖೆ, ಮೂಡಿಗೆರೆ
ಮೂಡಿಗೆರೆ : ಕಾಡಾನೆಗಳ ಈ ದಿನದ ಮಾಹಿತಿ..
GNE UPDATES
ಇತ್ತೀಚಿನ ಸುದ್ದಿ