ಮೂಡಿಗೆರೆ, ಆಗಸ್ಟ್ 7: ಅರಣ್ಯ ಇಲಾಖೆ ಮೂಡಿಗೆರೆ ವಲಯದ ಮಾಹಿತಿ ಪ್ರಕಾರ, ಇಂದು ಸಂಜೆ ಸುಮಾರು 6:15 ಗಂಟೆಗೆ ಮೂರು ಕಾಡಾನೆಗಳು ಚಂದ್ರಪುರದ ಕುದುರೆ ನಾಗರಾಜ್ ಗೌಡ್ರು ಅವರ ತೋಟದಲ್ಲಿ ಕಂಡುಬಂದಿದ್ದು, ಅಲ್ಲಿಂದ ಬಾರದಹಳ್ಳಿ ಕಡೆಗೆ ಸಂಚರಿಸುತ್ತಿವೆ.
ಈ ಹಿನ್ನೆಲೆಯಲ್ಲಿ ಬಾರದಹಳ್ಳಿ, ಹೊರಟ್ಟಿ, ಗಾಡಿಚೌಕ, ಮರೆಬೈಲು, ಚಂದ್ರಪುರ ಹಾಗೂ ಕೇಳಚಂದ್ರ ಕಮ್ಮರಗೋಡು ಎಸ್ಟೇಟ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು, ತೋಟದ ಕಾರ್ಮಿಕರು ಹಾಗೂ ವಾಹನ ಸವಾರರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.
ಅತ್ಯಾವಶ್ಯಕ ಕೆಲಸವಿಲ್ಲದಿದ್ದರೆ ರಾತ್ರಿ ವೇಳೆಯಲ್ಲಿ ಒಂಟಿಯಾಗಿ ಹೊರಗಡೆ ಸಂಚರಿಸುವುದನ್ನು ತಪ್ಪಿಸಿ, ಕಾಡಾನೆಗಳು ಕಂಡುಬಂದಲ್ಲಿ ಅವುಗಳ ಸಮೀಪಕ್ಕೆ ಹೋಗದೆ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು.
ಕಾಡಾನೆಗಳು ಕಂಡುಬಂದ ತಕ್ಷಣ ಅರಣ್ಯ ಇಲಾಖೆಯ ಆನೆ ಕಾರ್ಯಪಡೆ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 7204004261 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ವಿನಂತಿಸಲಾಗಿದೆ.
ದಿನಾಂಕ: 07-08-2026
ಸಮಯ: ಸಂಜೆ 6:15 ಗಂಟೆ
– ಅರಣ್ಯ ಇಲಾಖೆ, ಮೂಡಿಗೆರೆ.
ಮೂಡಿಗೆರೆ : ಮನೆಗಳು ಪ್ರಸ್ತುತ ಎಲ್ಲಿವೆ..?
GNE UPDATES
ಇತ್ತೀಚಿನ ಸುದ್ದಿ