ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ದಿನಾಚರಣೆಯ ಅಂಗವಾಗಿ ಮೂಡಿಗೆರೆ ಮೇಧಾ ಸ್ಪೋರ್ಟ್ಸ್ ಕ್ಲಬ್ (ರಿ) ವತಿಯಿಂದ ಆಟಗಾರರ ಆಯ್ಕೆ ಪ್ರಕ್ರಿಯೆಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿಎಸ್ಎಸ್ ನ ಜಿಲ್ಲಾ ಧ್ಯಕ್ಷರಾದ ಸುಂದ್ರೇಶ್ ಹೊಯ್ಸಳಲು ವಹಿಸಿಕೊಂಡಿದ್ದರು. ಹಾಗೂ ಮುಖ್ಯ ಅಥಿತಿ ಗಳಾಗಿ ಬಿಳುಗುಳ ಸರ್ಕಾರಿ ಶಾಲೆಯ ಎಸ್‌.ಡಿ ಎಂ.ಸಿ ಅಧ್ಯಕ್ಷರಾದ  ಚಂದ್ರು ಒಡೆಯರ್, ಹಾಗೂ ಬಿಡುಗಳ ಶಾಲೆಯ ದೈಹಿಕ ಶಿಕ್ಷಕರಾದ ಸುರೇಶ್ ಗೌಡ್ರು, ಹಾಗೂ ಮೇಧಾ ಸ್ಪೋರ್ಟ್ಸ್ ಕ್ಲಬ್ ನ ಕಾರ್ಯದರ್ಶಿಗಳಾದ ಸುರೇಂದ್ರ,ಹಾಗೂ ತರಬೇತುದಾರರಾದ ಪೂರ್ಣೇಶ್ ಕಣಚೂರು, ಹರೀಶ್, ರವಿ, ಜನಾರ್ಧನ್, ಸಂಸ್ಥೆ ಯ ಅಧ್ಯಕ್ಷರಾದ ಸುರೇಶ ಮಗ್ಗಲಮಕ್ಕಿ,ಹಾಗೂ ಸುಂದರ್ ರವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಕಾರ್ಯಕ್ರಮ :ಅಂಬೇಡ್ಕರ್ ರವರ ಭಾವಚಿತ್ರ ಕ್ಕೆ ಪುಷ್ಪರ್ಚನೆ ಮಾಡುವ ಮೂಲಕ ಚಾಲನೆ. ಕಾರ್ಯದರ್ಶಿ ಸುರೇಂದ್ರ ಅತಿಥಿ ಗಳನ್ನು ಸ್ವಾಗತಿಸಿ, ಧನ್ಯವಾದವಿತ್ತರು. ನಂತರ ಅತಿಥಿ ಗಳು ಅಂಬೇಡ್ಕರ್ ಜಯಂತಿ ಹಾಗೂ ಸಂಸ್ಥೆ ಕುರಿತು ಮಾತನಾಡಿ ಕಾರ್ಯಕ್ರಮ ಮುಂದುವರೆಯಿತು.

ನಂತರ ಆಯ್ಕೆ ಪ್ರಕ್ರಿಯೆಗೆ ಹಲವಾರು ತಾಲೂಕುಗಳಿಂದ ಹಳ್ಳಿಯ ಪ್ರತಿಭೆಗಳನ್ನು ಗುರುತಿಸುವ ಸಲುವಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜಯಂತಿಯದಿನದಂದು ಹಮ್ಮಿಕೊಳ್ಳಲಾಗಿತ್ತು. ಈ ಆಯ್ಕೆ ಪ್ರಕ್ರಿಯೆಗೆ ಸುಮಾರು 31 ಮಕ್ಕಳು ಭಾಗವಹಿಸಿದ್ದರು. ಈ ಆಯ್ಕೆ ಪ್ರಕ್ರಿಯೆ ಮಾಡಿದ್ದ ಉದ್ದೇಶ ಹಳ್ಳಿ ಪ್ರತಿಭೆಗಳು ಎಲ್ಲಾ ಭಾಗದಲ್ಲೂ  ಇದ್ದಾರೆ ಎಲ್ಲರಿಗೂ ಕಬಡ್ಡಿ ಆಟದಲ್ಲಿ ಅವಕಾಶ ಸಿಗಬೇಕು  ಅನ್ನೋ  ಉದ್ದೇಶದಿಂದ ಕಬ್ಬಡಿ ಆಯ್ಕೆ ಪ್ರಕ್ರಿಯೆಯನ್ನು ಮಾಡಲಾಯಿತು.