ಮೂಡಿಗೆರೆ, ನ.21: ಬೇಲೂರು ಅರಣ್ಯ ವಲಯ ವ್ಯಾಪ್ತಿಯ ಕೋಗೋಡು, ಕಾನನಹಳ್ಳಿ ಹಾಗೂ ನೆರಳಮಕ್ಕಿ ಭಾಗಗಳಲ್ಲಿ ಕಾಡಾನೆಗಳ ಗುಂಪು ಸಂಚಾರ ಕಂಡುಬಂದಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.
ನವೆಂಬರ್ 21ರಂದು ಬೆಳಿಗ್ಗೆ 6.45ರ ವೇಳೆಗೆ ಕೋಗೋಡು ಭಾಗದಲ್ಲಿ ಕಾಡಾನೆಗಳ ಗುಂಪು ಸಂಚರಿಸುತ್ತಿರುವ ಮಾಹಿತಿ ಲಭ್ಯವಾಗಿದ್ದು, ಹಾಸ್ಟೆಲ್ ಕಾಡು, ದೊಡ್ಡಗಳ್ಳ ಎಸ್ಟೇಟ್, ಕಸ್ಕೆಬೈಲ್, ಗೌತಹಳ್ಳಿ, ಚಟ್ನಳ್ಳಿ, ಹುನುಗನಹಳ್ಳಿ, ಗಬ್ಬಳ್ಳಿ, ಪುರ, ಕಲ್ಲುಗುಡ್ಡ, ಕನ್ನಪುರ ಹಾಗೂ ಕಾರ್ಬೈಲು ಸುತ್ತತ್ತಲಿನ ಪ್ರದೇಶಗಳ ನಿವಾಸಿಗಳು ಹೆಚ್ಚಿನ ಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ.
ಅದೇ ರೀತಿ ಬೆಳಿಗ್ಗೆ 6.55ರ ವೇಳೆಗೆ ಕಾನನಹಳ್ಳಿ ಮತ್ತು ನೆರಳಮಕ್ಕಿ ಭಾಗಗಳಲ್ಲಿಯೂ ಕಾಡಾನೆಗಳ ಸಂಚಾರ ಕಂಡುಬಂದಿದೆ. ಜಿ. ಹೊಸಹಳ್ಳಿ ಟಾಟಾ ಕಾಫಿ ಎಸ್ಟೇಟ್, ಸಿಲ್ವರ್ ಖಾನ್ ಎಸ್ಟೇಟ್, ಜಿ. ಹೊಸಹಳ್ಳಿ ಗ್ರಾಮ, ಪೋಡಿ ಕಾಲೋನಿ, ಹೊಸಪುರ, ಬಾಸುರ ದಿಣ್ಣೆಕೆರೆ ಹಾಗೂ ಹಿರೇಶಿಗರ ಸುತ್ತಮುತ್ತಲಿನ ಪ್ರದೇಶಗಳ ಜನರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ತಿಳಿಸಿದೆ.
ತೋಟದ ಕೆಲಸಕ್ಕೆ ತೆರಳದಂತೆ ಸೂಚನೆ
ಕಾಡಾನೆಗಳ ಸಂಚಾರದ ಹಿನ್ನೆಲೆಯಲ್ಲಿ ಮೇಲ್ಕಂಡ ಪ್ರದೇಶಗಳ ಸಾರ್ವಜನಿಕರು ಹಾಗೂ ಕಾರ್ಮಿಕರು ಯಾವುದೇ ಕಾರಣಕ್ಕೂ ತೋಟದ ಕೆಲಸಗಳಿಗೆ ತೆರಳಬಾರದು ಎಂದು ಅರಣ್ಯ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಕಾಡಾನೆಗಳು ಎದುರಾದ ಸಂದರ್ಭದಲ್ಲಿ ಅವುಗಳನ್ನು ಹತ್ತಿರದಿಂದ ವೀಕ್ಷಿಸುವುದು, ಹಿಂಬಾಲಿಸುವುದು ಅಥವಾ ಪ್ರಚೋದಿಸುವಂತಹ ಚಟುವಟಿಕೆಗಳನ್ನು ಮಾಡಬಾರದು. ಸಾರ್ವಜನಿಕರು ಮತ್ತು ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸಬೇಕು ಎಂದು ಮನವಿ ಮಾಡಲಾಗಿದೆ.
ತಮ್ಮ ಗ್ರಾಮಗಳ ಸುತ್ತಮುತ್ತ ಕಾಡಾನೆಗಳ ಸಂಚಾರ ಕಂಡುಬಂದಲ್ಲಿ ತಕ್ಷಣವೇ ಜಿಲ್ಲಾ ಆನೆ ಕಾರ್ಯಪಡೆ, ಚಿಕ್ಕಮಗಳೂರು – 7204004261 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಅರಣ್ಯ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಕೆಲ ಭಾಗಗಳಲ್ಲಿ ಕಾಡಾನೆಗಳ ಗುಂಪು ಸಂಚಾರ: ಸಾರ್ವಜನಿಕರಿಗೆ ಅರಣ್ಯ ಇಲಾಖೆ ಎಚ್ಚರಿಕೆ!
GNE UPDATES
ಇತ್ತೀಚಿನ ಸುದ್ದಿ