ದಿನಾಂಕ : 01.04.26 ರಿಂದ 04.04.26 ರ ವರೆಗೆ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ “ಸೌತ್ ಜೋನ್ ಮಹಿಳೆಯರ ಖೋ ಖೋ ” ಪಂದ್ಯಾವಳಿಗೆ ಆಡಲು ಕುವೆಂಪು ವಿಶ್ವವಿದ್ಯಾಲಯ ತಂಡಕ್ಕೆ ಆಯ್ಕೆಯಾದ ಮಾನಸ ಎಸ್.

ಮಾನಸ ಎಸ್ ರವರ ಕಿರು ಪರಿಚಯ..

ಕುಮಾರಿ ಮಾನಸ ಎಸ್. 22-09-2003ರಂದು ಸೀನ ಮತ್ತು ಗಿರಿಜಾರವರ ಮಗಳಾಗಿ ಜನಿಸಿದರು.
ಇವರು ಸತ್ತಿಹಳ್ಳಿ ಗ್ರಾಮ ಗುಲ್ಲನ್ ಪೇಟೆ ಅಂಚೆ ಚಿಕ್ಕಮಗಳೂರು ತಾಲೂಕು ಚಿಕ್ಕಮಗಳೂರು ಜಿಲ್ಲೆಯವರು.

ಇವರು ಮೂಲತಃ ಕಬಡ್ಡಿ ಆಟಗಾರ್ತಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮೇಧಾ ಸ್ಪೋರ್ಟ್ಸ್ ಕ್ಲಬ್ ನ ಸದಸ್ಯೆ ಕೂಡ..
ಇವರು 1ರಿಂದ 5ನೇ ತರಗತಿ ವಿದ್ಯಾಭ್ಯಾಸವನ್ನು “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ” ಅವಧಿಯಲ್ಲಿ ಮುಗಿಸಿ ನಂತರ 6ರಿಂದ10ನೇ ತರಗತಿ ವಿದ್ಯಾಭ್ಯಾಸವನ್ನು “ಏಕಲವ್ಯ ಮಾದರಿ ವಸತಿ ಶಾಲೆ” ತರುವೆ ಕೊಟ್ಟಿಗೆಹಾರದಲ್ಲಿ ಮುಗಿಸಿದರು.
ಅಲ್ಲಿ ವಿದ್ಯಾಭ್ಯಾಸ ಮಾಡುವಾಗಲೇ 8ನೇ ತರಗತಿಯಲ್ಲಿ 2018–19ರಲ್ಲಿ ಬಿಹಾರದಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರತಿನಿದಿಸಿದರು. ಅದೇ ವರ್ಷದಲ್ಲಿ ಧಾರವಾಡದಲ್ಲಿ ಎಸ್. ಜೆ. ಎಫ್. ಐ.ಅಲ್ಲಿ ಕೂಡ ಭಾಗವಹಿಸಿದರು. ಮತ್ತು ಅದೇ ವರ್ಷದಲ್ಲಿ ದೊಡ್ಡಬಳ್ಳಾಪುರದಲ್ಲಿ ರಾಜ್ಯಮಟ್ಟದಲ್ಲಿ ಆಟವಾಡಿ ತೆಲಂಗಾಣದಲ್ಲಿ ರಾಷ್ಟ್ರಮಟ್ಟವನ್ನು ಪ್ರತಿನಿದಿಸಿದರು.


ಜೂನಿಯರ್ ನ್ಯಾಷನಲ್ ಆಳ್ವಾಸ್ ನಲ್ಲಿ ನಡೆದ ತರಬೇತಿ ಶಿಬಿರದಲ್ಲಿ ಆಯ್ಕೆ. ಇವರ ತರಬೇತುದರರಾಗಿ ಹಂಸ ಮೇಡಮ್,ನಂತರ ಪ್ರಥಮ ಪಿ. ಯು. ಸಿ. ಮತ್ತು ದ್ವಿತೀಯ ಪಿ. ಯು. ಸಿ.ಯನ್ನು ಬಾಲಕರ ಪದವಿ ಪೂರ್ವ ಕಾಲೇಜು ಮೂಡಿಗೆರೆಯಲ್ಲಿ ವಿದ್ಯಾಭ್ಯಾಸ ಮಾಡುತಿದ್ದು ‚2022-23ರಲ್ಲಿ ಮಂಡ್ಯದಲ್ಲಿ ರಾಜ್ಯಮಟ್ಟವನ್ನು ಪ್ರತಿನಿದಿಸಿದರು.ಅದೇ ವರ್ಷದಲ್ಲಿ ಗ್ರಾಮೀಣ  ಕ್ರೀಡಾಕೂಟದಲ್ಲಿ ರಾಜ್ಯಮಟ್ಟವನ್ನು ಪ್ರತಿನಿದಿಸಿದರು.

ಹೀಗೆ ದಿನಾಂಕ 15,16-09-2023 ದಾವಣಗೆರೆಯಲ್ಲಿ ನಡೆದ ಸೀನಿಯರ್ ಸ್ಟೇಟ್ ಚಾಂಪಿಯನ್ ಶಿಪ್ ನಲ್ಲಿ ಜಿಲ್ಲಾ ತಂಡದ ಪರವಾಗಿ ಆಟವಾಡಿದ್ದಾರೆ.ಇವರು ತಮ್ಮ ಪ್ರೌಢಶಾಲೆಯಿಂದಲೇ ಕ್ರೀಡೆಯಲ್ಲಿ ಆಸಕ್ತಿ ಹೊಂದಿದವರು.ಮೂಡಿಗೆರೆಯಲ್ಲಿ 4ವರ್ಷಗಳಿಂದ ಪ್ರಾರಂಭವಾದ ಮೇಧಾ ಸ್ಪೋರ್ಟ್ಸ್ ಕ್ಲಬ್ ನ ಕ್ರೀಡಾಪಟುಗಳಿಗೆ ಅಧ್ಯಕ್ಷರಾದ ಸುರೇಶ್ ಹಾಗೂ ಅಂತರಾಷ್ಟ್ರೀಯ ತರಬೇತುದಾರರಾದ ಡಾ|| ಮಂಜುನಾಥ ಅವರ ಬಳಿ ತರಬೇತಿ ಪಡೆದರು. ಹಾಗೂ ಮೇಧಾ ಸ್ಪೋರ್ಟ್ಸ್ ಕ್ಲಬ್ ನ ತರಬೇತುದಾರರಾದ ಸುರೇಂದ್ರ, ಪೂರ್ಣೇಶ್, ಕೌಶಿಕ್ ರವರ ಬಳಿ ಸತತವಾಗಿ ತರಬೇತಿ ಪಡೆಯುತಿದ್ದಾರೆ.ಪ್ರಸ್ತುತ ಮೂಡಿಗೆರೆಯ ಡಿ. ಎಸ್. ಬಿ.ಜೆ.ಕಾಲೇಜಿನಲ್ಲಿ ದ್ವಿತೀಯ ಬಿ. ಎ.ವ್ಯಾಸಂಗ ಮಾಡುತಿದ್ದು ದಿನಾಂಕ:29-11-24ರಿಂದ 02-12-2024ರ ವರೆಗೆ ಚೆನ್ನೈನಲ್ಲಿ ನಡೆದ ಸೌತ್ ಝೋನ್ ವಿಶ್ವವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಕುವೆಂಪು ವಿಶ್ವವಿದ್ಯಾಲಯವನ್ನು ಪ್ರತಿನಿದಿಸಿದರು.

ದಿನಾಂಕ:19-05-2025ರಿಂದ 24-05-2025ರ ವರೆಗೆ ನಡೆದ ಡಿ.ಎನ್. ಹೆಚ್ ಮತ್ತು ಡಿ ಡಿ ಕೇಂದ್ರಾಡಳಿತ  ಪ್ರದೇಶವಾದ ಗುಜರಾತ್ ನಲ್ಲಿ ಖೇಲೋ ಇಂಡಿಯಾ ಯೋಜನೆಯಡಿಯಲ್ಲಿ 1ನೇ ಆವೃತ್ತಿಯ ಖೇಲೋ ಇಂಡಿಯಾ ಬೀಚ್ ಕಬಡ್ಡಿ ಚಾಂಪಿಯನ್ ಶಿಪ್ ಗೆ ಕರ್ನಾಟಕ ರಾಜ್ಯದ ಮಹಿಳೆಯರ ತಂಡದಲ್ಲಿ ಪ್ರತಿನಿದಿಸಿರುತ್ತಾರೆ. ಹೀಗೆ ಬೆಳಗಾವಿ, ಬಾಗಲಕೋಟೆ, ಬೆಂಗಳೂರು, ತುಮಕೂರು, ಬಿಜಾಪುರ, ಮಂಗಳೂರು,ಇನ್ನಿತರ ರಾಜ್ಯ ಹಾಗೂ ಜಿಲ್ಲಾಧ್ಯಂತ ಅನೇಕ ಪಂದ್ಯಾಟದಲ್ಲಿ ತಮ್ಮದೇ ವಿಭಿನ್ನ ಆಟದ ಶೈಲಿಯಲ್ಲಿ ತಂಡಕ್ಕೆ ಆಸರೆಯಾದಂತ ಆಟಗಾರ್ತಿ. ತಮ್ಮ ಆಲ್ ರೌಂಡರ್ ಪ್ರದರ್ಶನದ ಮೂಲಕ ತಮ್ಮ ತಂಡಕ್ಕೆ ಗೆಲುವಿನ ಜೊತೆಗೆ ಕ್ರೀಡಾಪ್ರೇಮಿಗಳ ಮನಸ್ಸನ್ನು ಗೆಲ್ಲುತಿರುವಂತ ಆಟಗಾರ್ತಿ ಮಾನಸ ಎಸ್..