🙏 ಎಲ್ಲರಿಗೂ ಬುದ್ಧ ಪೂರ್ಣಿಮೆಯ
ಶುಭಾಶಯಗಳು 🙏
💐💐💐💐💐💐💐

ಅರಿವಿನ ದಾರಿ ಕಾಣದೆ ಕತ್ತಲಲ್ಲಿ ಕುಳಿತಿದ್ದ ಭಾರತೀಯರಿಗೆ ಅರಿವಿನ ಮಾರ್ಗ ತೋರಿಸಲು ಕ್ರಿಸ್ತಪೂರ್ವ 583 ರಲ್ಲಿ ಸಿದ್ದಾರ್ಥ ಜನಿಸುತ್ತಾರೆ. ಕ್ರಿಸ್ತಪೂರ್ವ 6ನೇ ಶತಮಾನದ 16 ಮಹಾ ಜನಪದಗಳಲ್ಲಿ ಒಂದಾದ ಶಾಕ್ಯ ರಾಜ್ಯದ ದೊರೆ ಶುದ್ಧೋದನ ಹಾಗೂ ಮಾಯದೇವಿಯವರಿಗೆ ಸಿದ್ದಾರ್ಥ ಜನಿಸುತ್ತಾನೆ, ಸಿದ್ಧಾರ್ಥನು ಸತ್ತ ಹೆಣವನ್ನು ನೋಡಿ ಮುದುಕನನ್ನು ನೋಡಿ ಸನ್ಯಾಸಿಯನ್ನು ಕಂಡು, ರೋಗಿಯನ್ನು ನೋಡಿ ಮರುಗಿ ದುಃಖದಿಂದ ತನ್ನ ಹೆಂಡತಿ ಮಕ್ಕಳನ್ನು ಬಿಟ್ಟು ಹೋದ
ನು ಎಂದು ನಮಗೆ ಮನುವಾದಿ ಇತಿಹಾಸ ಹೇಳುತ್ತದೆ.
ಆದರೆ ಸಿದ್ದಾರ್ಥ ಮನೆ ಬಿಟ್ಟು ಹೋಗಲು ಬೇರೆಯದೆ ಕಾರಣವಿತ್ತು. ಶಾಕ್ಯ ರಾಜ್ಯದಲ್ಲಿ ಶಾಕ್ಯವೆಂಬ ಸಂಘವಿತ್ತು. 19 ವರ್ಷದ ತುಂಬಿದ ಪ್ರತಿಯೊಬ್ಬರು ಈ ಸಂಘದ ಸದಸ್ಯರಾಗಬೇಕಿತ್ತು. ಸಿದ್ದಾರ್ಥನಿಗೆ 19 ವರ್ಷ ತುಂಬಿದ ನಂತರ ಈ ಶಾಕ್ಯ ಸಂಘದ ಸದಸ್ಯನಾಗುತ್ತಾನೆ. ಸದಸ್ಯನಾಗುವಾಗ ಕೆಲವು ಪ್ರತಿಜ್ಞೆಗಳನ್ನು ಮಾಡಬೇಕಿತ್ತು. ನಾನು ಸುಳ್ಳು ಹೇಳುವುದಿಲ್ಲ ಕಳ್ಳತನ ಮಾಡುವುದಿಲ್ಲ. ಮಾನಭಂಗ ಮಾಡುವುದಿಲ್ಲ. ಹಾಗೂ ಸಂಘ ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ಎಲ್ಲ ಪ್ರತಿಜ್ಞೆಗಳನ್ನು ಮಾಡಿ ಸಂಘಕ್ಕೆ ಪ್ರವೇಶ ಪಡೆಯುತ್ತಾರೆ. ಹತ್ತು ವರ್ಷಗಳ ನಂತರ ಸಂಘದಲ್ಲಿ ಒಂದು ಸಮಸ್ಯೆ ಎದುರಾಗುತ್ತದೆ.
ಸುಮಾರು ವರ್ಷಗಳಿಂದ ಸಾಧ್ಯ ಶಾಕ್ಯ ರಾಜಕ್ಕೂ ಪಕ್ಕದ ಕೊಲಿಯಾ ರಾಜ್ಯಕ್ಕೂ ನಡುವೆ ಇದ್ದ ರೋಹಿಣಿ ನದಿ ನೀರನ್ನು ಬಳಸಿಕೊಳ್ಳುವ ವಿಚಾರದಲ್ಲಿ ಈ ರಾಜ್ಯಗಳಿಗೆ ಆಗಾಗ ಜಗಳವಾಗುತ್ತಿತ್ತು. ಶಾಕ್ಯ ಸಂಘದ ಅಧ್ಯಕ್ಷ ಈ ಸಮಸ್ಯೆಯನ್ನು ಬಗೆಹರಿಸಲು ಕೋಲಿಯಾ ರಾಜ್ಯವನ್ನು ಯುದ್ಧದಲ್ಲಿ ಸೋಲಿಸಿ ನದಿಯ ನೀರನ್ನು ಶಾಕ್ಯ ರಾಜ್ಯದವರು ಬಳಸುವುದಾಗಿ ಸಂಘದಲ್ಲಿ ನಿರ್ಣಯ ಮಾಡುತ್ತಾನೆ. ಈ ನಿರ್ಣಯವನ್ನು ಶಾಕ್ಯ ಸಂಘದ ಸದಸ್ಯರು ಒಪ್ಪಿಕೊಂಡಾಗ ಸಿದ್ದಾರ್ಥ ಮಾತ್ರ ಯುದ್ಧ ಮಾಡುವ ನಿರ್ಣಯವನ್ನು ವಿರೋಧಿಸುತ್ತಾನೆ. ಯುದ್ಧ ಮಾಡುವುದರಿಂದ ಸಮಸ್ಯೆ ಬಗೆ ಇರುವುದಿಲ್ಲ ಎಂದು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾನೆ. ಯುದ್ಧ ಬೇಡ ಎಂದರೆ ಮತ್ತೇನು ಪರಿಹಾರ ಎಂದು ಸಿದ್ದಾರ್ಥನಲ್ಲಿ ಪ್ರಶ್ನಿಸಿದಾಗ ಒಂದು ಉಪಾಯವನ್ನು ತಿಳಿಸುತ್ತಾನೆ. ಅದೇನೆಂದರೆ ಶಾಕ್ಯ ರಾಜ್ಯದಿಂದ ಇಬ್ಬರು ತಮ್ಮ ಸಮಸ್ಯೆಯನ್ನು ವಾದ ಮಂಡಿಸಲಿ ಕೊಲಿಯಾ ರಾಜ್ಯದ ಇಬ್ಬರು ತನ್ನ ಸಮಸ್ಯೆಯ ವಾದ ಮಂಡಿಸಲಿ ಈ ನಾಲ್ಕು ಜನರ ವಾದ ವಿವಾದಗಳನ್ನು ಆಲಿಸಲು ಮೂರನೇ ರಾಜ್ಯದ ಒಬ್ಬ ವ್ಯಕ್ತಿಯನ್ನು ನಿಯೋಜಿಸಿ ಅವನ ಸೂಕ್ತವಾದ ತೀರ್ಮಾನ ನೀಡಲಿ ಆಗ ಎರಡು ರಾಜ್ಯಗಳಿಗೂ ನ್ಯಾಯ ದೊರೆಯುತ್ತದೆ. ಎಂದು ಸಿದ್ದಾರ್ಥ ಹೇಳುತ್ತಾನೆ. ಇದಕ್ಕೆ ಸಂಘದ ಅಧ್ಯಕ್ಷರು ಸಿದ್ದಾರ್ಥ ಗಳನ್ನು ಬೆದರಿಕೆ ಹಾಕುತ್ತಾನೆ. ಸಿದ್ದಾರ್ಥ ನೀನು ಸಂಘವನ್ನು ಸೇರುವಾಗ ಸಂಘದ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದು ಹೇಳಿದ್ದೆ. ಆದರೆ ಈಗ ಸಂಘ ಯುದ್ಧ ಮಾಡಲು ತೀರ್ಮಾನಿಸಿರುವಾಗ ಈಗ ಸಂಘದ ತೀರ್ಮಾನದ ವಿರುದ್ಧ ಹೊರಟಿರುವ ನಿನಗೆ ಶಿಕ್ಷೆ ಆಗುತ್ತದೆ ಎಂದು ಸಂಘದ ಅಧ್ಯಕ್ಷ ಹೇಳುತ್ತಾನೆ. ಅದಕ್ಕೆ ಸಿದ್ಧಾರ್ಥ ಸಂಘ ನೀಡುವ ಶಿಕ್ಷೆಯನ್ನು ಒಪ್ಪುತ್ತೇನೆ ಆದರೆ ಕೊಲಿಯಾ ರಾಜ್ಯದ ವಿರುದ್ಧ ಯುದ್ಧವನ್ನು ಒಪ್ಪುವುದಿಲ್ಲ ಎಂದು ಹೇಳುತ್ತಾನೆ. ಆಗ ಸಿದ್ದಾರ್ಥನನ್ನು ಗಡಿಪಾರು ಮಾಡುವಂತೆ ತೀರ್ಮಾನವಾಗುತ್ತದೆ. ಅದಕ್ಕೆ ಸಿದ್ಧಾರ್ಥ ಹೇಳುವುದು ತಪ್ಪು ಮಾಡಿರುವುದು ನಾನು ಅದಕ್ಕೆ ನನ್ನ ಹೆಂಡತಿ ಯಶೋಧರೆ ಮಗ ರಾಹುಲನನ್ನು ಗಡಿಪಾರು ಮಾಡುವುದು ತಪ್ಪು ನಾನೊಬ್ಬನೇ ರಾಜ್ಯ ಬಿಟ್ಟು ಹೋಗುತ್ತೇನೆ ಎಂದು ಮನೆಯಿಂದ ಮನೆ ಇಲ್ಲದ ಕಡೆ ಹಗಲಿನಲ್ಲಿ ರಾಜ್ಯವನ್ನು ಬಿಟ್ಟು ಹೊರಡುತ್ತಾನೆ.
ಶಾಕ್ಯ ರಾಜವನ್ನು ಬಿಟ್ಟು ಹೊರಟ ಸಿದ್ಧಾರ್ಥ ಜನಜೀವನವನ್ನು ಸತ್ಯವನ್ನು ಅರಿತನು. ಈತನು ತನ್ನ ಬೌದ್ಧ ದಮ್ಮದ ಮೂಲಕ ಪ್ರಜಾಪ್ರಭುತ್ವದ ಸಂಕೇತಗಳಾದ ಪ್ರಜಾ, ಕರುಣೆ, ಸಮಾನತೆ, ತತ್ವಗಳನ್ನು ಸಾರಿ ಆರ್ಥಿಕ ಮತ್ತು ಸಾಮಾಜಿಕವಾಗಿ ನೊಂದ ಜನ ಸಮುದಾಯಕ್ಕೆ ಸ್ವಾತಂತ್ರ, ಸಮಾನತೆ, ಭ್ರಾತೃತ್ವಗಳನ್ನು ತಂದುಕೊಡಲು ಪ್ರಯತ್ನಿಸಿದರು.
ಮುಖ್ಯವಾಗಿ ಶೋಷಣೆ ಮುಕ್ತ ಮತ್ತು ಮಾನವತೆಯ ಸಮಾಜವನ್ನು ನಿರ್ಮಿಸುವುದು ಬುದ್ಧನ ಮತ್ತು ಆತನ ದಮ್ಮದ ಮೂಲ ಗುರಿಯಾಗಿತ್ತು.
ಬುದ್ಧ ತಾನು ತಿಳಿದುಕೊಂಡ ಜ್ಞಾನವನ್ನು ತಿಳಿಯ ಹೇಳಲು ಜನಸಾಮಾನ್ಯರ ನಡುವೆ ಬಂದು ನಡೆದಾಡಿದನು. ಜನಸಾಮಾನ್ಯರ ಕುಂದು ಕೊರತೆಗಳನ್ನು ಕುರಿತು ಸಮಲೋಚಿಸಿದನು. ಅವರ ಸಂಕಷ್ಟಗಳನ್ನು ರಾಜ ಮಹಾರಾಜರ ಗಮನಕ್ಕೆ ತಂದನು. ಹೀಗಾಗಿ ಅಂದಿನ ಹೊಸ ಬದಲಾವಣೆಯನ್ನು ಪ್ರೇಮ ಮತ್ತು ಕರುಣೆಯ ಮೂಲಕ ಸ್ಥಾಪಿಸಿದನು. ಭಾರತೀಯ ಸಾಮಾಜಿಕ ಸ್ಥಿತಿಗತಿಗಳನ್ನು ಕಂಡು ಮೇಲು ಕೀಳು ಎಂಬ ಭಾವನೆ ವ್ಯತ್ಯಾಸಗಳು ಮಾನವ ನಿರ್ಮಿತ ಹೀಗಾಗಿ ತಾನು ಮಾಡಿದ ಕೆಟ್ಟ ಕೃತ್ಯಗಳನ್ನು ಮಾನವನೇ ಸರಿಪಡಿಸಿ ಕೊಳ್ಳಬೇಕಾಗುತ್ತದೆ. ಕಣ್ಣಿಗೆ ಕಾಣದ ಕಲ್ಪನ ಲೋಕವನ್ನು ಕಟ್ಟದೆ ವಾಸ್ತವ ಸಂಗತಿಗಳನ್ನು ಕುರಿತು ಸರಳವಾಗಿರುವ ಮತ್ತು ಜನ ಮಾತನಾಡುವ ಭಾಷೆಯಲ್ಲಿ ಅದರ ಸ್ವರೂಪವನ್ನು ಅರು ವಿದನು.
ಶುದ್ಧ ಮತ್ತು ಶುಚಿ ಜೀವನ ನಡೆಸಲು ಬಾರಿ ಗಾತ್ರದ ಮನೆಗಳು ಬೇಕಾಗಿಲ್ಲ. ತಲೆ ಮೇಲೆ ಒಂದು ಸೂರಿದ್ದು, ಅನ್ನ,ನೀರು, ಗಾಳಿ ದೊರೆತರೆ ಸಾಕೆಂದು ನೀಡಿದವರಲ್ಲದೆ ವ್ಯಕ್ತಿತ್ವಕ್ಕೆ ದಮ್ಮದ ತಿಳುವಳಿಕೆ ಮುಖ್ಯವೆಂದರು.
( ಸಂಕ್ಷಿಪ್ತ ಮಾಹಿತಿ )……,.
ಸ್ನೇಹಿತರೆ, ಈ ದೇಶಕ್ಕೆ ಅಧಿಕಾರ ಹಸ್ತಾಂತರವಾಗಿ ಸುಮಾರು 7 ದಶಕಗಳು ಕಳೆದಿವೆ . ಆದರೂ ದಲಿತರ ಬದುಕು ಇನ್ನು ಇಕ್ಕಟ್ಟಿನಲ್ಲಿ ಇದೆ. ದಲಿತರ ಮೇಲಿನ ದಬ್ಬಾಳಿಕೆ ದೌರ್ಜನ್ಯ ಹೆಚ್ಚಾಗುತಿದೆ ಇದಕ್ಕೆ ಕಾರಣ ಹಲವಾರು ಇದೆ ಆದರೆ ಪರಿಹಾರ ದಲಿತರಿಗೆ ಬೌದ್ಧ ದಮ್ಮಕ್ಕೆ ಸೇರುವುದೇ ಅಂತಿಮ ಪರಿಹಾರ. ಅಂಬೇಡ್ಕರ್ ದಾರಿ, ಬುದ್ಧ ದಮ್ಮ ಎನ್ನುವುದು ಶೋಷಿತರ ಮಂತ್ರವಾಗಬೇಕಿದೆ.
ಜಗತ್ತಿನಲ್ಲಿ ಮೊಟ್ಟಮೊದಲ ಬಾರಿಗೆ ಶ್ರೇಷ್ಠ ತತ್ವಗಳಾದ ಸಮಾನತೆ, ಸ್ವಾತಂತ್ರ್ಯ, ಮತ್ತು ಸೋದರತೆ ತತ್ವಗಳನ್ನು ಬೋಧಿಸಿದವನೆ ಬುದ್ಧ.
ಬುದ್ಧ ಸರ್ವಾಧಿಕಾರದ ವಿಷಯವಾಗಿ ಹೇಳುವುದಾದರೆ, ಬುದ್ಧ ಅಂತ ಯಾವುದನ್ನು ಒಪ್ಪುತ್ತಿರಲಿಲ್ಲ, ಆತ ಪ್ರಜಾಪ್ರಭುತ್ವ ವಾದಿಯಾಗಿ ಹುಟ್ಟಿ ಪ್ರಜಾಪ್ರಭುತ್ವವಾದಿಯೇ ನಿಧನ ಹೊಂದಿದನು, ಸಹೋದರತೆ ಮತ್ತು ಸ್ವಾತಂತ್ರ್ಯ ಇಲ್ಲದಿದ್ದರೆ ಸಮಾನತೆಗೆ ಯಾವುದೇ ಮೌಲ್ಯ ಇಲ್ಲ. ಬುದ್ಧ ಧಮ್ಮ ಎಂದರೆ ಸಮಾನ ತತ್ವಗಳ ಮೇಲೆ ನಿರ್ಮಿತವಾದ ಜಾತಿ ರಹಿತ ಸಮಾಜ. ಬೌದ್ಧ ದಮ್ಮ ಒಂದು ಕ್ರಾಂತಿಯಾಗಿತ್ತು.
ಬುದ್ಧ ಹಿಂಸೆಯನ್ನು ವಿರೋಧಿಸಿದ ಆದರೆ ಅವನು ನ್ಯಾಯದ ಪರವಾಗಿಯೂ ಕೂಡ ಇದ್ದನು. ನ್ಯಾಯ ಸ್ಥಾಪಿಸಬೇಕಾದ ಕಡೆ ಅನಿವಾರ್ಯವಾಗಿ ಬಲಪ್ರಯೋಗಕ್ಕೂ ಅನುಮತಿ ಕೊಟ್ಟಿದ್ದನು. ಬುದ್ಧ ಒಂದು ಸಾಮಾಜಿಕ ಸಂದೇಶ ನೀಡಿದ್ದಾರೆ ಶಾಂತಿ,ನ್ಯಾಯ,ಪ್ರೇಮ, ಸ್ವಾತಂತ್ರ್ಯ,ಸಮಾನತೆ, ಭ್ರಾತೃತ್ವಗಳನ್ನು ಬೋಧಿಸಿದರು. ಆದರೆ ಆಧುನಿಕ ಬರಹಗಾರರು ಅವುಗಳನ್ನು ಹೂತು ಹಾಕಿದ್ದಾರೆ. ಅವುಗಳನ್ನು ಹೊರ ತೆಗೆದು ಸಮಕಾಲಿನ ಭಾರತದ ಸಮಸ್ಯೆಗಳಿಗೆ ಬುದ್ಧನ ಚಿಂತನೆಗಳ ಅಧ್ಯಯನದ ಅನಿವಾರ್ಯತೆ ಅಗತ್ಯವಾಗಿದೆ.
” ಬುದ್ಧನೊಬ್ಬನೇ ಸುಜ್ಞಾನ ಸಾಗರ ಅವನ ಬಳಿ ಇದೆ ಎಲ್ಲದಕ್ಕೂ ಉತ್ತರ “
ಮತ್ತೊಮ್ಮೆ ಎಲ್ಲರಿಗೂ ಬುದ್ಧ ಪೂರ್ಣಿಮೆಯ ಶುಭಾಶಯಗಳು
🌹🌹🌹🌹🌹🌹🌹🌹🌹

ಬರಹ: ಡಾ. ಹರೀಶ್ ನಲ್ಕೆ…….