ಬೆಳ್ತಂಗಡಿ: ಶ್ರೀ ಕ್ಷೇತ್ರ ಬಂಗಾಡಿ ಸತ್ಯಸಾರಮಾನಿ ಕಾನದ ಕಟದ ದೈವಸ್ಥಾನದ ವಾರ್ಷಿಕ ಪರ್ವ ಮತ್ತು ಜೀರ್ಣೋದ್ಧಾರ ವಿಜ್ನಾಪಣಾ ಪತ್ರ ಬಿಡುಗಡೆ.
ದಿನಾಂಕ 17-05-2026 ನೇ ಆದಿತ್ಯವಾರ
ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷೇತ್ರ ಬಂಗಾಡಿ ಸತ್ಯಸಾರಮಾನಿ ಕಾನದ ಕಟದ ಜನ್ಮಭೂಮಿಯ
ದೈವಸ್ಥಾನದ ವಠಾರದಲ್ಲಿ ಆಡಳಿತ ಸಮಿತಿಯ
ಅಧ್ಯಕ್ಷರಾದ ಶ್ರೀ ನಾರಾಯಣ ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ..
ಕಾರ್ಯಕ್ರಮವನ್ನು ಸುಳ್ಯ ವಿಧಾನ ಸಭಾ ಕ್ಷೇತ್ರದ
ಶಾಸಕರಾದ ಕು ಭಾಗೀರಥಿ ಮುರುಳ್ಯ ರವರು
ಉದ್ಘಾಟನೆ ಮಾಡಿ ವಿಜ್ನಾಪಣಾ ಪತ್ರ ಬಿಡುಗಡೆ ಗೊಳಿಸಿ ಮಾತನಾಡಿದ ಅವರು..

“ಸತ್ಯಸಾರಮಾನಿ ಕಾನದ ಕಟದರ ಜನ್ಮಭೂಮಿಯಲ್ಲಿ ದೈವಸ್ಥಾನದ ಜೀರ್ಣೋದ್ಧಾರ ಆಗಲಿರುವುದು ಸಂತೋಷದ ವಿಚಾರ ಈ ಕಾರ್ಯಕ್ಕೆ ಸರಕಾರದ ವತಿಯಿಂದ
ಸಿಗಬೇಕಾದ ಸೌಲಭ್ಯಗಳನ್ನು ಕೊಡಿಸುವಲ್ಲಿ
ನಾನು ಸಹಕಾರ ನೀಡುತ್ತೇನೆ ಶ್ರೀ ಕ್ಷೇತ್ರ ಬಂಗಾಡಿಯು ಈ ನಾಡಿನ ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಲಿ ಎಂದು ಹೇಳಿದರು. ಸಮಾರಂಭದಲ್ಲಿ ಗ್ಯಾರಿಂಟಿ ಯೋಜನೆಗಳ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಶೇಖರ್ ಕುಕ್ಕೇಡಿ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ
ಈ ಸಮಾರಂಭದಲ್ಲಿ ಗ್ಯಾರಿಂಟಿ ಯೋಜನೆಗಳ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಶೇಖರ್ ಕುಕ್ಕೇಡಿ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ

” ಶ್ರೀ ಸತ್ಯಸಾರಮಾನಿ ಕಾನದ ಕಟದ ಮೂಲಕ್ಷೇತ್ರ ಅಲೇರಿಯ ಅಭಿವ್ರದ್ದಿಗೆ ಈಗಾಗಲೇ ಶಿಲನ್ಯಾಸ ನೆರವೇರಿದ ಇದೇ ಸಂಧರ್ಭದಲ್ಲಿ ಕಾನದ ಕಟದ ಜನ್ಮಭೂಮಿ ಬಂಗಾಡಿ ಯಲ್ಲೂ ಅಭಿವ್ರದ್ದಿಗೆ ಚಾಲನೆ ಅಗುತ್ತಿರುವುದು ಸಂತೋಷದ ವಿಚಾರ
ಕಾನದ ಕಟದರ ಕುಲಬಾಂಧವರಾದ ನಾವುಗಳು ಮನೆಮನೆಗಳಿಗೆ ಈ ವಿಚಾರವನ್ನು ತಿಳಿಸಿ ಬಂಗಾಡಿ ಕ್ಷೇತ್ರದ ಜೀರ್ಣೋದ್ಧಾರದ ಬಗ್ಗೆ ಅರ್ಥಿಕ ಕ್ರೋಢೀಕಣಕ್ಕೆ ನಾವೆಲ್ಲರೂ ಒಂದಾಗಿ
ಕೈ ಜೋಡಿಸಬೇಕು ಎಂದು ಹೇಳಿದರು.
ದ.ಕ.ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯರಾದ
ಶ್ರೀ ಹರಿಯಪ್ಪ ಮುತ್ತೂರು ರವರು ಮಾತನಾಡುತ್ತಾ ಶ್ರೀ ಕ್ಷೇತ್ರ ಬಂಗಾಡಿ ಸತ್ಯಸಾರಮಾನಿ ಕಾನದ ಕಟದ ಜನ್ಮಭೂಮಿ
ಯು ಅಭಿವೃದ್ಧಿಗೆ ಸರ್ಕಾರ ವತಿಯಿಂದ
ಅನುದಾನ ಕೊಡಿಸುವಲ್ಲಿ ಸಹಕಾರ ನೀಡುತ್ತೇನೆ
ಈ ಕ್ಷೇತ್ರ ಜನಸಾಮಾನ್ಯರ ಧಾರ್ಮಿಕ ಕ್ಷೇತ್ರವಾಗಿ ಮೂಡಿ ಬರಲಿ ಎಂದು ಶುಭಹಾರೈಸಿದರು.

ಬೆಳ್ತಂಗಡಿ ತಾಲೂಕು ಕೆಡಿಪಿ ಸದಸ್ಯರಾದ
ಶ್ರೀ ಎಸ್ ಬೇಬಿ ಸುವರ್ಣ ರವರು ಕಾರ್ಯಕ್ರಮದ ಮುಕ್ಯ ಅತಿಥಿ ಯಾಗಿ ಭಾಗವಹಿಸಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಬಂಗಾಡಿ ಇದರ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀ ಸಂಜೀವ ಆರ್ ರವರು ಕ್ಷೇತ್ರದ ಅಭಿವೃದ್ಧಿ ಗೆ
ಎಲ್ಲರ ಸಹಕಾರ ಕೋರಿದರು.

ಸಮಾರಂಭದ ವೇದಿಕೆಯಲ್ಲಿ ಮಹಿಳಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಬೇಬಿ ಕಡಿರುದ್ಯಾವರ ,ಆಡಳಿತ ಸಮಿತಿ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಗೋಪಾಲ ಇಂದಬೆಟ್ಟು,
ಸತ್ಯಸಾರಮಾನಿ ಕ್ಷೇತ್ರ ಗರ್ಡಾಡಿ ಇದರ ಅಧ್ಯಕ್ಷರಾದ ಶ್ರೀ ಕರಿಯ ರವರು.
ಸತ್ಯಸಾರಮಾನಿ ಕ್ಷೇತ್ರ ಹೊಸಂಗಡಿ ಇದರ ಮುಖ್ಯಸ್ಥರಾದ ಶ್ರಿ ಅವಿನಾಶ್ ರವರು.
ಸತ್ಯಸಾರಮಾನಿ ಕ್ಷೇತ್ರ ಧರ್ಮಸ್ಥಳದ ಅಧ್ಯಕ್ಷರಾದ ಶ್ರೀ ಶೇಖರ್ ಧರ್ಮಸ್ಥಳ ರವರು,
ಸತ್ಯಸಾರಮಾನಿ ಕ್ಷೇತ್ರ ಅಂಡಿಂಜೆಯ ಅಧ್ಯಕ್ಷರಾದ ಶ್ರೀ ಸಂತೋಷ್ ರವರು,
ಸತ್ಯಸಾರಮಾನಿ ಕ್ಷೇತ್ರ ಕೆಲ್ಲಗುತ್ತು ಇದರ ಗೌರವಾಧ್ಯಕ್ಷರಾದ ಶ್ರೀ ಅಣ್ಣಪ್ಪ ಕೆಲ್ಲಗುತ್ತು,ಇವರು
ಸತ್ಯಸಾರಮಾನಿ ಕ್ಷೇತ್ರ ಪೊಯ್ಯಗುಡ್ಡೆ ಪಡಂಗಡಿ ಇದರ ಅಧ್ಯಕ್ಷರಾದ ಶ್ರೀ ರಾಮು .ಬಿ.,ರವರು
ಉಪಸ್ಥಿತರಿದ್ದರು.
ಸಮುದಾಯದ ಗೌರವಾನ್ವಿತ ನಾಯಕರುಗಳಾದ
ಶ್ರೀ. ಶೇಖರ್ ಎಲ್ ಲಾಯಿಲ
ಶ್ರೀ. ರಘು ಧರ್ಮಸೇನ್ ಬೆಳ್ತಂಗಡಿ
ಶ್ರೀ. ಶ್ರೀನಿವಾಸ್ ಪದ್ಮುಂಜ,
ಶ್ರಿ.ಸದಾನಂದ ನಾಲ್ಕೂರು,
ಶ್ರೀ.ಚರಣ್ ಕುಕ್ಕೇಡಿ,
ಶ್ರೀ ಉದಯ್ ಗೋಳಿಯಂಗಡಿ
ಶ್ರೀ ಸುಕೇಶ್ ಮಾಲಾಡಿ
ಶ್ರೀ ಬಾಬಿ ಎಂ ಮಾಲಾಡಿ
ಶ್ರೀ ಪುಷ್ಪರಾಜ್ ಶಿರ್ಲಾಲು
ಮುಂತಾದವರು ಭಾಗವಹಿಸಿದ್ದರು.
ಶ್ರೀ ಕ್ಷೇತ್ರ ಬಂಗಾಡಿಯ ಜೀರ್ಣೋದ್ಧಾರ ಸಮಿಯ ಪದಾದಿಕಾರಿಗಳಾದ
ಕೋಶಾಧಿಕಾರಿ ಶ್ರೀ ಕೆ.ನೇಮಿರಾಜ್ ಕಿಲ್ಲೂರ್ ,
ಆಡಳಿತ ಸಮಿತಿಯ ಗೌರವಾಧ್ಯಕ್ಷರಾದ
ಶ್ರೀ ವೆಂಕಣ್ಣ ಕೊಯ್ಯೂರು ಕೋಶಾಧಿಕಾರಿ
ಶ್ರೀ ಗುರುವ ಸೊಮಯದಡ್ಡು,
ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರುಗಳಾದ
ಶ್ರೀ ಸೋಮ ಇಂದಬೆಟ್ಟು, ಶ್ರೀ ಸೋಮಯ್ಯ ಇಂದಬೆಟ್ಟು, ಶ್ರೀ ಎನ್ ಸಿ ಸಂಜೀವ ನೆರಿಯ,
ಶ್ರೀ ರಾಘವ ಕಲ್ಮಂಜ, ಶ್ರೀ ಚೀಂಕ್ರ ಇಂದಬೆಟ್ಟು,
ಶ್ರೀ ಐತಪ್ಪ ಇಂದಬೆಟ್ಟು, ಶ್ರೀ ಕಟದ ಅಳಕ್ಕೆ,
ಶ್ರೀ ಸುಂದರ ಇಂದಬೆಟ್ಟು, ಶ್ರೀ ಪ್ರದೀಪ್ ಇಂದಬೆಟ್ಟು ಶ್ರೀ ಸುದರ್ಶನ್ ಶ್ರೀ ಶೀನ,
ಶ್ರೀ ಶೋಭರಾಜ್ , ಶ್ರೀ ಪ್ರಿಯೇಶ್
ಶ್ರೀ ಸೂರಜ್,ಶ್ರೀ ಅರುಣ್ ಬೊಳ್ಳುರು,
ಶ್ರೀ ಪ್ರತಾಪ್, ಶ್ರೀ ಪ್ರಕಾಶ್,ಶ್ರೀ ಗಣೇಶ್,
ಶ್ರೀ ಕವನ್,ಶ್ರೀ ಸಂದೀಪ್, ಮುಂತಾದವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರಾದ
ಶ್ರೀ ಲಕ್ಷ್ಮಣ್ ಜಿ.ಎಸ್.ರವರು ಕಾರ್ಯಕ್ರಮದ ಮತ್ತು ಜೀರ್ಣೋದ್ಧಾರದ ಪ್ರಾಸ್ತಾವಿಕ ವಿವರಣೆ ನೀಡಿದರು, ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರಾದ ಬಿ.ಕೆ.ವಸಂತ್ ಬೆಳ್ತಂಗಡಿ

ಇವರು ಸ್ವಾಗತಿಸಿದರು, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿಯವರಾದ ಅಚುಶ್ರೀ ಬಾಂಗೇರು ರವರು ಕಾರ್ಯಕ್ರಮ ನಿರೂಪಿಸಿ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರಾದ ಶ್ರೀ ರಮೇಶ್ ಆರ್ ಬೆಳ್ತಂಗಡಿ ಇವರು ಧನ್ಯವಾದ ನೀಡಿದರು.

