ಮೂಡಿಗೆರೆ : ಸ್ವತಂತ್ರ ಬಂದು 79 ವರ್ಷವಾದರೂ ಬಡವರು, ದುಡಿಯುವ ವರ್ಗ ತನ್ನ ಮೂಲಭೂತ ಹಕ್ಕುಗಳನ್ನು ಪಡೆಯಲು ಈ ಕಾಲಘಟ್ಟದಲ್ಲಿ ಜಿಲ್ಲಾ, ತಾಲೂಕು, ಗ್ರಾಮಧಿಕಾರಿಗಳ ಮುಂದೆ ಅಲೆದು  ಹೋರಾಟ ನಡೆಸುತಿರುವುದು ಪ್ರಜಾಪ್ರಭುತ್ವ  ಬಹುದೊಡ್ಡ ದುರಂತವೆಂದು TUCI ಜಿಲ್ಲಾಧ್ಯಕ್ಷರಾದ ಕೃಷ್ಣಪ್ಪ. ಕೆ. ಕೆ.ತಿಳಿಸಿದರು.
   ಮಲೆನಾಡು ಶ್ರೀಮಂತರ ಪಾಲಿನ ಸ್ವರ್ಗ.ಬಡವರ ಪಾಲಿನ ನರಕ. ಈ ಮಲೆನಾಡನ್ನು ಭಾರತದ ಸ್ವಿಜರ್ಲ್ಯಾಂಡ್ ಮಾಡಿದ ಕಾರ್ಮಿಕರು ಇಂದು ತಮ್ಮ ನೆಲೆ ಕಂಡುಕೊಳ್ಳಲು ಕಚೇರಿಯಿಂದ ಕಚೇರಿಗೆ ಅಲೆದು ಅದರ ಮುಂದೆ ಪ್ರತಿಭಟನೆ, ಧರಣಿ,ಮುಷ್ಕರಗಳನ್ನು ಮಾಡಿದರು ,ನಮ್ಮನ್ನು ಅಳುವವರು ಮತ್ತು ಅಧಿಕಾರಿಗಳಿಂದ ಯಾವುದೇ ಪರಿಹಾರ ಸಿಗದೆ,ಜಾತಕದ ಪಕ್ಷಿಯಂತೆ ಕಾಯುತ ಎರಡು ತಲೆಮಾರುಗಳನ್ನು ಕಳೆದುಕೊಂಡು ಮೂರನೇ ತಲೆಮರಿನ ಅವನತಿಯತ್ತ  ಸಾಗುತ್ತಿದ್ದರು ಪರಿಹಾರ ಸಿಕ್ಕಿಲ್ಲ. ಪ್ರತಿಯೊಂದು ವಸ್ತು ಸಂಘರ್ಷದಿಂದಲೇ ಹುಟ್ಟುತ್ತದೆ ಮಾನವ ಕೂಡ ಬದುಕು ನಡೆಸಲು ಜೀವಮಾನವಿಡಿ ಪ್ರತಿಯೊಂದು ಕ್ಷೇತ್ರದಲ್ಲೂ ಹೋರಾಟ ನಡೆಸುತ್ತಾನೆ. ಅಂತ ಹೋರಾಟಗಳಲ್ಲಿ ಮಲೆನಾಡಿನ ಬಡ ಜನರ ಜೀವನ ತೀರ ಕೆಳಮಟ್ಟದಲ್ಲಿದೆ. ಇಲ್ಲಿನ ಸರ್ಕಾರಿ ಭೂಮಿಯಲ್ಲ ಭಾರೀ ಮಾಲೀಕರ ವಶದಲ್ಲಿದ್ದು ಇದಕ್ಕೆ ಸರ್ಕಾರ ಮತ್ತು ಅಧಿಕಾರಿಗಳ ಕು ಮ್ಮಕ್ಕಿನಿಂದಲೇ ಖಾಲಿ ಇರುವ ಕಂದಾಯ ಭೂಮಿ ಎಲ್ಲ ನುಂಗಿ ನೀರು ಕುಡಿದಿದ್ದಾರೆ. ಭೂಮಾಲಿಕರಿಗೆ ಕುಳಿತಲ್ಲೆ ದಾಖಲೆ ಮಾಡಿಕೊಡುವ ಅಧಿಕಾರಿಗಳು, ಸರ್ಕಾರಿ ಜಾಗದಲ್ಲಿ ಒಂದು ಸಣ್ಣ ಗುಡಿಸಲು ನಿರ್ಮಾಣ ಮಾಡಿದರೆ ಕ್ಷಣಾರ್ಧದಲ್ಲಿ ತೆರವು ಮಾಡುತ್ತಾರೆ.ಇದಕೊಂದು ಉದಾಹರಣೆ :- ಕಳೆದ 9 ದಿನಗಳಿಂದ ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ( TUCI) ಮತ್ತು ವಸತಿಗಾಗಿ ಹೋರಾಟ ವೇದಿಕೆ ವತಿಯಿಂದ ನಡೆಯುತ್ತಿರುವ ಪ್ರತಿಭಟಯನು  ಹತ್ತಿಕ್ಕಲು ಒಂದು ಕಡೆ ಸ್ಥಳೀಯ ಭೂಮಾಲೀಕರ ಗುಂಪು ಬೆದರಿಕೆ ಹಾಕಿದ್ದು,ಮತ್ತೊಂದಡೆ ಆಡಳಿತ  ವ್ಯವಸ್ಥೆ ಬರವಸೆಯ ಮಾತುಗಳನ್ನಾಡಿ ಒಕ್ಕಲಿಬ್ಬಿಸಲು ಪ್ರಯತ್ನಿಸುತ್ತಿದ್ದು, ಕಳೆದ 14 ವರ್ಷಗಳಿಂದ ರಾಜಕಾರಣಿಗಳ ರೀತಿ ಅಧಿಕಾರಿಗಳು ಕೂಡ ಭರವಸೆ ನೀಡಿ ಹೋರಾಟದ ದಿಕ್ಕು ದೆಸೆಯಲ್ಲಿ ತಪ್ಪಿಸಿದ್ದಾರೆ. ಮತ್ತು ಹೋರಾಟ ನಿರತರ ಜೊತೆಗೆ ಯಾವ ರೀತಿ ಸ್ಪಂದಿಸಬೇಕು ಎಂದು ಕೂಡ ತಿಳಿದಿಲ್ಲ. ಆದ್ದರಿಂದ ವಸತಿಗಾಗಿ ಗುಡಿಸಲು ನಿರ್ಮಿಸಿ ನಡೆಯುತ್ತಿರುವ ಹೋರಾಟ 9ನೇ ದಿನಕ್ಕೆ ಕಾಲಿಟ್ಟಿದ್ದು ಮಾನ್ಯತಾಸಿಲ್ದಾರರು ಸ್ಥಳಕ್ಕೆ ಬಂದು ಹೋರಾಟಗಾರರಿಗೆ ಕೊಂಚ ಭರವಸೆಯನ್ನು ಮೂಡಿಸಿದ್ದಾರೆ. ಆದ್ದರಿಂದ ಹೋರಾಟದ ಬೀಜ ಮೊಳಕೆಯೊಡೆಯುವ ಅಂತಕ್ಕೆ ಬಂದಿದೆ. ಹೋರಾಟ ನಿರತರ ಆ ಸ್ಥಳದಲ್ಲಿ ಕೆಲಸ ಕಾರ್ಯಗಳು ಮಾಡಿದ ತಕ್ಷಣ ನಿಮಗೆ ಅದೇ ಸ್ಥಾನದಲ್ಲಿ ಜಾಗ ಗುರುತು ಮಾಡಿ ಕೊಡುತ್ತೇವೆಂಬ ಭರವಸೆ ನಂಬಿ ಹೋರಾಟಗಾರರು ಒಂದೊಂದೇ ಗುಡಿಸಲು ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಎಲ್ಲಾ ನಿರಾಶ್ರೀತರ ಪಟ್ಟಿ ತಮಗೆ  ಕೊಡುವಂತೆ ಮನವಿ ಕೂಡ ಮಾಡಿದ್ದಾರೆ. ಈಗಾಗಲೇ ಅನೇಕ ಸಂಘ,ಸಂಸ್ಥೆಗಳು,ಪ್ರಗತಿಪರರು,ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳ ನಿರಂತರವಾಗಿ ನಮ್ಮ ಬೆಂಬಲಕ್ಕೆ ಸೂಚಿಸಿದ್ದರಿಂದಲೇ ಹೋರಾಟ ಈ ಹಂತಕ್ಕೆ ತಲುಪಿದೆ.ಹಲವಾರು ತಲೆಮಾರಿನಿಂದ ಮಾಲೀಕರ ಲೈನಿನ ತಿಗಣೆ ಕಾಟಕ್ಕೆ ಜೊತೆಗೆ ದಬ್ಬಾಳಿಕೆ ದೌರ್ಜನ್ಯಕ್ಕೆ ಒಳಗಾದ  ಕಾರ್ಮಿಕರು ಹೋರಾಟಗಾರರಾಗಿ ರೂಪುಗೊಂಡಿದೆ  ಈ ಹೋರಾಟದ ಯಶಸ್ವಿಗೆ ಕಾರಣ. ಇದು ಕೇವಲ ಗೋಣಿಬೀಡು ಮಣ್ಣಿಕೆರೆ ಸಮಸ್ಯೆಯಲ್ಲ ಇಡೀ ಮಲೆನಾಡಿನ ಬಹುದೊಡ್ಡ ಸಮಸ್ಯೆ ಶೋಷಿತರು ಮತ್ತು ದಮನಿತ ಎಲ್ಲಾ ಕಾರ್ಮಿಕರು ತಮ್ಮ ಮೂಲಭೂತ ಹಕ್ಕುಗಳಿಗಾಗಿ ಸಂಘಟಿತರಾಗಿ ಹೋರಾಟದ ಮೂಲಕ ತಮ್ಮ ಸಂವಿಧಾನಿಕ ಹಕ್ಕುಗಳನ್ನು ಪಡೆಯಲು ಅರಿವು ಮೂಡಿಸುವುದು TUCI ಕಾರ್ಮಿಕ ಸಂಘಟನೆಯ ಮುಖ್ಯ ಗುರಿ. ಇದಕ್ಕೆ ಕಾರ್ಮಿಕರ ಐಕ್ಯತೆ  ಬಹು ಮುಖ್ಯ.