ದಿನಾಂಕ :14.03.26 ಹಾಗೂ 15.03.26, ಮನ್ವಿತ್ ಫ್ರೆಂಡ್ಸ್ ದೋನ್ ಗಳ್, ಕಲ್ಲುಗುಡ್ಡೆ, ಕಸ್ಕೆಬೈಲ್ ಇವರ ವತಿಯಿಂದ ಲಾಂಗ್ ಮಾದರಿಯ ಕ್ರಿಕೆಟ್ ಪಂದ್ಯಾಕೂಟ ದಲ್ಲಿ, ಒಂದು ವಿಶೇಷ ಕಾದಿತ್ತು.
ಅದೇನೆಂದರೆ ಆಯೋಜಕರು ಕೇವಲ ಪಂದ್ಯಕೂಟ ಅಲ್ಲದೆ ಕೆಲ ಸಾಮಾಜಿಕ ಕಾರ್ಯ ಗಳನ್ನು ಮಾಡುವ ಕೆಲಸಕ್ಕೆ ಕೈ ಹಾಕುವ ಕ್ರೀಡಾ ಕೂಟಗಳು ನಡೆಯುತ್ತಿದೆ.
ಕ್ರೀಡಾ ಕೂಟ ದ ದಿನ ಪಂದ್ಯಾಟ ದ ಮಧ್ಯಂತರ ದಲ್ಲಿ ಸೇವಾಭಾರತಿ ಸೇವಾದಾಮದ ಪುನರ್ ಚೇತನ ಕೇಂದ್ರ ಸೌತಡ್ಕ  ಉರಿ ಅಪಘಾತಕ್ಕೊಳಗಾದವರ ಹೊಸ ಕಟ್ಟಡ ನಿರ್ಮಾಣಕ್ಕೆ ಮೂಡಿಗೆರೆಯ ಕಲ್ಲುಗುಡ್ಡ ದೋಣಗಲ್ ನಿವಾಸಿಯಾದ ಮಂಜುನಾಥ್ ಇವರು  ರೂ 2,000 ದೇಣಿಗೆಯನ್ನು ನೀಡಿದರು.
ಶ್ರೀ ಮಂಜುನಾಥರವರು ತಮ್ಮ ದೇಣಿಗೆಯನ್ನು ಸೇವಾ ಭಾರತಿ ಸೇವಾದಾಮದ ಅಧ್ಯಕ್ಷರಾದ ವಿನಾಯಕರಾವ್ ರವರಿಗೆ ನೀಡಿದರು.
ದಿವ್ಯಾಂಗರ ಬಾಳಿಗೆ ಬೆಳಕಾದ ಕನ್ಯಾಡಿ, ವಿನಾಯಕರಾವ್
ಕನ್ಯಾಡಿ ವಿನಾಯಕ ರಾವ್ ರವರು ಈ ಸೇವಾ ಭಾರತಿ ಮತ್ತು ಸೇವಾಧಾಮದ ಸಂಸ್ಥಾಪಕರು. ಇವರು ಬೆನ್ನುಹುರಿ ಅಪಘಾತಕ್ಕೊಳಗಾಗಿ 30 ವರ್ಷಗಳು ಸಂದಿವೆ.
ಇವರು ಬೆನ್ನು ಉರಿ ಅಪಘಾತಕ್ಕೊಳಗಾಗಿ ಜೀವನ ಸಂಕಷ್ಟಹೀಡಾದಾಗ ಹಲವರ ಬಾಳಲ್ಲಿ ಹೊಸ ಬೆಳಕು ಮೂಡಿಸುವಲ್ಲಿ ಬಹುದೊಡ್ಡ ಪಾತ್ರ ವಹಿಸಿದ್ದಾರೆ. ಬೆನ್ನು ಉರಿ ಅಪಘಾತಕ್ಕೊಳ್ಳಗಾದವರ ದೈಹಿಕ, ಮಾನಸಿಕ ಧೈರ್ಯಕ್ಕಾಗಿ ತಮ್ಮ ಅನುಭವ ಮತ್ತು ಮಾತಿನ ಮೂಲಕ ಶೋಷಿತರ ಬಾಳಿನಲ್ಲಿ ಹೊಸ ಬೆಳಕು ಮೂಡಿಸಲು ಮಾತು ಮತ್ತು ಕೃತಿಯ ಮೂಲಕ ಸದಾ ಪ್ರಯತ್ನಿಸುತ್ತಿದ್ದಾರೆ.
ದೇಣಿಗೆ ನೀಡಿದ ಮಂಜುನಾಥ್ ಕೂಡ ದಿವ್ಯಾಂಗ ವ್ಯಕ್ತಿನೆ..
ಸೇವಾದಾಮದ ಹೊಸ ಕಟ್ಟಡಕ್ಕೆ ದೇಣಿಗೆಯನ್ನು ನೀಡಿದಂತಹ ಶ್ರೀ ಮಂಜುನಾಥರವರು ಕೂಡ ಸುಮಾರು ಐದು ವರ್ಷದ ಹಿಂದೆ ಮರದಿಂದ ಬಿದ್ದು ಬೆನ್ನುಮೂಳೆ ಮರಿತಕ್ಕೊಳಗಾದ ದಿವ್ಯಾಂಗ ವ್ಯಕ್ತಿ. ಇವರು ಬೆನ್ನುಮೂಳೆ ಮುರಿತಕ್ಕೊಳಗಾದವರ ಪುನಶ್ಚೇತನ ಕೇಂದ್ರವನ್ನು ನಿರ್ಮಿಸುತ್ತಿರುವ ಹೊಸ ಕಟ್ಟಡಕ್ಕೆ ದೇಣಿಗೆಯನ್ನು ಕೊಟ್ಟಿರುವ ಇವರು ಕೂಡ ಮನೆಯಲ್ಲಿ ಸಣ್ಣ ವ್ಯಾಪಾರವನ್ನು ಮಾಡಿ ಕೂಡಿಟ್ಟ ಹಣ.
ಹಾಗಾಗಿ  ಕ್ರೀಡಾ ಅಭಿಮಾನಿಗಳು ಹಾಗೂ ಕ್ರೀಡಾಕೂಟದ ಆಯೋಜಕರು ಈ ತರಹದ ಸಾಮಾಜಿಕ ಕಾರ್ಯಗಳಿಗೆ ತಮ್ಮ ಸಮಯ ಮತ್ತು ಅತ್ಯಮೂಲ್ಯವಾದ ಕೊಡುಗೆಗಳನ್ನು ಕೊಟ್ಟು, ತಮ್ಮಲ್ಲಿರುವ ಸಮಾಜ ಸೇವಾ ಭಾವನೆಗಳನ್ನು ಎತ್ತಿ ಹಿಡಿಯುವುದನ್ನು ಬೆಂಬಲಿಸೋಣ. ಧನ್ಯವಾದಗಳು.